ಬಿಗ್ ಬಾಸ್ ಇಂದ ಬ್ರೋಗೌಡ ಶಮಂತ್ ಗೆ ಸಿಕ್ಕ ಸಂಭಾವನೆ ಎಷ್ಟು ನೋಡಿ!

ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಈ ವಾರ ಮನೆಯಿಂದ ಬ್ರೋ ಗೌಡ ಅಲಿಯಾಸ್ ಶಮಂತ್ ಅವರು ಹೊರ ನಡೆದಿದ್ದಾರೆ.ಈ ವಾರ ಡಬಲ್ ಎಲಿಮಿನೇಷನ್ ಇದ್ದ ಕಾರಣ ಶನಿವಾರದ ಸಂಚಿಕೆಯಲ್ಲಿ ಶುಭಾ ಪೂಂಜಾ ಅವರನ್ನ ಮನೆಯಿಂದ ಹೊರಗೆ ಕರೆಸಲಾಗಿತ್ತು.

ಅನಂತರ ಭಾನುವಾರದ ಸಂಚಿಕೆಯಲ್ಲಿ ಶಮಂತ್ ಹೊರ ಬಂದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಶಮಂತ್ ಹೇಳಿಕೊಳ್ಳುವಂತಹ ಸ್ಪರ್ಧಿ ಏನು ಆಗಿರಲಿಲ್ಲ ಆದರೆ ಲಕ್ ಎಂಬಂತೆ ಶಮಂತ್ ಅಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡರು.

ಆದರೆ ಎರಡನೇ ಇನ್ನಿಂಗ್ಸ್ ಶುರುವಾದ ಮೇಲೆ ಶಮಂತ್ ಅವರ ನಿಜವಾದ ಪ್ರತಿಭೆ ಹೊರ ಬಂದು ಎಲ್ಲರೊಂದಿಗೂ ಬೆರೆತು ಟಾಸ್ಕ್ ವೇಳೆ ಯಲ್ಲಿಯೂ ಸಹ ತಮ್ಮದೇ ಛಾಪು ಮೂಡಿಸಿದ್ದರು ಮನೆಯವರಿಗೆಲ್ಲ ಹತ್ತಿರವಾಗುತ್ತಾ ಬಂದರು ಆದರೆ ಲಕ್ ಇವಾರ ಅವರ ಕೈ ಹಿಡಿಯಲಿಲ್ಲ ಫೈನಲ್ ಗೆ ದಿನಗಡನೆ ಆರಂಭವಾಗಿರುವುದರಿಂದ ಎಲ್ಲಾ ಸ್ಟ್ರಾಂಗ್ ಸ್ಪರ್ದಿಗಳೇ ಮನೆಯಲ್ಲಿ ಇದ್ದಾರೆ.

ಹಾಗಾಗಿ ಶಮಂತ್ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆಯಬೇಕಾಯಿತು ಇನ್ನು 114 ದಿನಗಳ ಬಿಗ್ ಬಾಸ್ ಜರ್ನಿಗೆ ಅಂದರೆ ಒಂದು ವಾರಕ್ಕೆ 25 ಸಾವಿರದಂತೆ 16 ವಾರಕ್ಕೆ ಬರೋಬ್ಬರಿ 4 ಲಕ್ಷ ರೂಪಾಯಿ ಸಂಭಾವನೆ ರೂಪದಲ್ಲಿ ಶಮಂತ್ ಅವರ ಕಿ ಸೇರಿದೆ.

Previous articleಚಿರುಗೆ ಫ್ರೆಂಡ್ಶಿಪ್ ಡೇ ವಿಶ್ ಮಾಡಿದ ಮೇಘನಾ ರಾಜ್
Next articleದರ್ಶನ್ ಮನೆಗೆ ಎಂಟ್ರಿ ಕೊಟ್ಟು ಶಿವಣ್ಣ ಹೇಳಿದ್ದೇನು ನೋಡಿ