Film News

ಬಿಡುಗಡೆಯಾದ ಬೆನ್ನಲ್ಲೆ ಪೊಗರು ಚಿತ್ರಕ್ಕೆ ಶುರುವಾಯ್ತು ವಿರೋಧ! ಕ್ಷಮಾಪಣೆ ಕೋರಿದ ನಿರ್ದೇಶಕ!

ಬೆಂಗಳೂರು: ಕೊರೊನಾ ಲಾಕ್‌ಡೌನ್ ನಂತರ ಬಿಡುಗಡೆಯಾದ ಬಿಗ್ ಬಜೆಟ್ ಚಿತ್ರವಾಗಿರುವ ಪೊಗರು ಚಿತ್ರ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿದೆ. ಆದರೆ ಇದೀಗ ಪೊಗರು ಚಿತ್ರಕ್ಕೆ ವಿರೋಧವೊಂದು ಎದುರಾಗಿದೆ.

ಹೌದು ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ದ ಅವಹೇಳನಕಾರಿಯಾಗಿ ನಿಂಧಿಸಿದ್ದಾರೆ ಎಂದು ಆರೋಪಿಸಿ ಪೊಗರು ಚಿತ್ರದಲ್ಲಿನ ಆ ದೃಶ್ಯಗಳನ್ನು ತೆಗೆದು ಹಾಕುವಂತೆ ಒತ್ತಾಯ ಹೆಚ್ಚಾಗಿದೆ. ಜೊತೆಗೆ ಬ್ರಾಹ್ಮಣರನ್ನು ಕಡೆಗಣಿಸಿ ಚಿತ್ರೀಕರಿಸಿರುವ ದೃಶ್ಯಗಳನ್ನು ತೆಗೆದು ಹಾಕದೇ ಇದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಬ್ರಾಹ್ಮಣ ಅಭಿವೃದ್ದಿ ಮಂಡಳಿ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಅನೇಕ ದೃಶ್ಯಗಳಿವೆ. ಉದಾಹರಣೆಗೆ ಹೋಮ ಮಾಡುತ್ತಿರುವ ಬ್ರಾಹ್ಮಣನ ಹೆಗಲ ಮೇಲೆ ಬೂಟು ಕಾಲಿಡುವ ದೃಶ್ಯ. ನಂತರ ಚಿತ್ರದ ನಾಯಕ ವೃದ್ದ ಬ್ರಾಹ್ಮಣನೊಬ್ಬನ ಬಳಿ ಬ್ರಾಹ್ಮಣ ವೃತ್ತಿಯ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡುವ ದೃಶ್ಯವಿದೆ. ಅಷ್ಟೇ ಅಲ್ಲದೇ ನಾಯಕಿ ರಶ್ಮೀಕಾ ಮಂದಣ್ಣ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪಾತ್ರದಲ್ಲಿ ನಟಿಸಿದ್ದು, ನಾಯಕ ಆಕೆಯ ಮನೆಗೆ ನುಗ್ಗಿ ಜಗಳ ಮಾಡುತ್ತಾ, ಅಲ್ಲಿಯೂ ಸಹ ಬ್ರಾಹ್ಮಣರನ್ನು ಕುರಿತು ವ್ಯಂಗ ಮಾಡುತ್ತಾನೆ, ಇಂತಹ ಕೆಲವೊಂದು ದೃಶ್ಯಗಳು ಬ್ರಾಹ್ಮಣ ಸಮುದಾಯವನ್ನು ಅಪಹಾಸ್ಯ ಮಾಡುವಂತಹ ಹಾಗೂ ನಿಂಧಿಸುವಂತಹ ದೃಶ್ಯಗಳಾಗಿವೆ. ಕೂಡಲೇ ಈ ದೃಶ್ಯಗಳನ್ನು ಚಿತ್ರದಿಂದ ತೆಗೆಯದೇ ಇದಲ್ಲಿ ಫೆ.24 ರಂದು ರಾಜ್ಯಾದಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದದೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ.

ಇನ್ನೂ ಈ ಎಚ್ಚರಿಕೆ ಮಣಿದಿರುವ ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್, ಸುಮಾರು 3 ವರ್ಷಗಳ ಕಾಲ ಕಷ್ಟಪಟ್ಟು ಸಿನೆಮಾ ಮಾಡಲಾಗಿದೆ. ಕೋವಿಡ್ ನಂತರ ಬಿಡುಗಡೆಯಾಗಿರುವ ಮೊದಲ ಬಿಗ್ ಬಜೆಟ್ ಸಿನೆಮಾ ಇದಾಗಿದೆ. ಇದೊಂದು ಕಾಲ್ಪನಿಕವಾದ ಕಥೆಯಾಗಿದೆ. ಬೇಕಂತ ಒಂದು ಜನಾಂಗಕ್ಕೆ ಧಕ್ಕೆ ತರಲು ಮಾಡಿಲ್ಲ. ತಿಳಿದೋ ಅಥವಾ ತಿಳಿದೆಯೋ ಈ ರೀತಿ ಆಗಿದೆ, ನಿಮಗೆ ನೋವಾಗಿದ್ದರೇ ನಾನು ಕ್ಷಮೆ ಕೇಳುತ್ತೇನೆ. ನೀವುಗಳು ದೊಡ್ಡ ಮನಸ್ಸು ಮಾಡಿ ಈ ವಿವಾದವನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಆದರೆ ಬ್ರಾಹ್ಮಣ ಸಮುದಾಯ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Trending

To Top