health-Kannada

ಮತ್ತೆ ಶುರು ಆಗಿದೆ ನಮ್ಮ ಸಿಹಿ ಕ’ಹಿ ಚಂದ್ರು ಅವರ ಬೊಂ’ಬಾಟ್ ಭೋಜನ! ಹೇಗಿದೆ ನೋಡಿ

ಸ್ಟಾರ್ ಸುವರ್ಣ ವಾಹಿನಿ ವೀಕ್ಷಕರನ್ನು ರಂಜಿಸಲು ಆಕ್ಟೊಬರ್ ತಿಂಗಳಿನಿಂದ ಎರಡು ಹೊಚ್ಚ ಹೊಸ ಕಾರ್ಯಕ್ರಮಗಳು ಶುರುವಾಗಲಿವೆ. ಇನ್ನುಮುಂದೆ ಟಿವಿ ಪ್ರೇಕ್ಷಕರ ವೀಕ್ ಡೇಸ್ ಹಾಗೂ ವೀಕೆಂ’ಡ್ಸ್ ಎರಡು ಸಹ ಮನರಂಜನೆಯಿಂದ ಕೂಡಲಿದೆ. ಇಂದಿನಿಂದ ಪ್ರತಿದಿನ ಬೆಳಿಗ್ಗೆ 7:30ಕ್ಕೆ ಹೊಸದಾದ ಜ್ಯೋ’ತಿಷ್ಯ ಕಾರ್ಯಕ್ರಮ ಶುರುವಾಗಿದ್ದು, ನಿಮ್ಮ ದಿನನಿತ್ಯದ ರಾ’ಶಿ ಭ’ವಿಷ್ಯ, ಜಾ’ತಕದ ಸಮ’ಸ್ಯೆಗೆ ಪರಿಹಾರ ಹಾಗು ಇನ್ನಿತರ ಹಲವಾರು ವಿಷಯಗಳನ್ನು ವೀಕ್ಷಕರಿಗೆ ತಿಳಿಸಲು ಬರುತ್ತಿದ್ದಾರೆ ಡಾ.ಬ್ರಹ್ಮಶ್ರೀ ಗೋಪಾಲ ಶರ್ಮ. ಈ ಕಾರ್ಯಕ್ರಮದ ಹೆಸರು “ಸುವರ್ಣ ಸಂಕಲ್ಪ”. ಹೊಸ ಕಾರ್ಯಕ್ರಮವನ್ನು ಪ್ರೀತಿ ಶ್ರೀನಿವಾಸ್ ನಿರೂಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯೋಗ, ಮುದ್ರಾ, ಸಂಜೀವಿನಿ ಸಂಕಲ್ಪ, ಗೃಹಿಣಿಯರ ಗುಟ್ಟು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ನಿಮಗೆ ಮಾಹಿತಿ ಸಿಗಲಿದೆ.

ಮತ್ತೊಂದು ಕಾರ್ಯಕ್ರಮ ಬೊಂಬಾಟ್ ಭೋಜನ. ಹೆಸರಾಂತ ನಟ ಹಾಗೂ ಕುಕಿಂಗ್ ಎಕ್ಸ್ಪರ್ಟ್ ಸಿಹಿ ಕ’ಹಿ ಚಂದ್ರು ಅವರು ಈ ಕಾರ್ಯಕ್ರಮ ನಡೆಸಿಕೊಟ್ಟು ಪ್ರತಿದಿನ ಹೊಸ ರೀತಿಯ ಅಡುಗೆಗಳನ್ನು ಹೇಳಿಕೊಡಲಿದ್ದಾರೆ. ನವರಾತ್ರಿ ಪ್ರಯುಕ್ತ ಆಕ್ಟೊಬರ್ 19ರಂದು ಶುರುವಾಗಲಿದೆ ಬೊಂಬಾಟ್ ಭೋಜನ ಕಾರ್ಯಕ್ರಮ. ನವರಾತ್ರಿಯ ಪ್ರಯುಕ್ತ ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಅತಿಥಿಗಳು ಆಗಮಿಸಿ ಅಡುಗೆ ಮಾಡಲಿದ್ದಾರೆ. ಹರ್ಷಿಕಾ ಪೂಣಚ್ಚ, ವನಿತಾ ವಾಸು, ನೇಹಾ ಗೌಡ, ಕೃಷಿ ಥಾಪಂಡ, ಕಾರುಣ್ಯ ರಾಮ್ ಬಂದು ಅಡುಗೆ ಮಾಡಲಿದ್ದಾರೆ.

ಜೊತೆಗೆ, ಈ ಬಾರಿ ಡಾ.ಜ್ಯೋತಿ ಅವರು ಆರೋಗ್ಯವನ್ನು ಕಾಪಾ’ಡಿಕೊಳ್ಳುವ ಅಡುಗೆಗಳ ಬಗ್ಗೆ ತಿಳಿಸಲಿದ್ದಾರೆ. ಹಾಗೂ, ಚಂದ್ರು ಅವರು ಪ್ರತಿದಿನ ಹೊಸರುಚಿಗಳನ್ನು ಹೇಳಿಕೊಡಲಿದ್ದಾರೆ. “ನಮ್ಮೂರ ಊಟ” ಎಂಬ ಸೆ’ಗ್ ಮೆಂಟ್ ನಲ್ಲಿ, ಕರ್ನಾಟಕದ ಮೂ’ಲೆ ಮೂ’ಲೆಯಲ್ಲಿರುವ ಹೋಟೆಲ್ ಗಳು, ಡಾಬಾಗಳಿಗೆ ತೆರಳಿ ಅಲ್ಲಿನ ವಿಶೇಷ ತಿಂಡಿಗಳನ್ನು ಪರಿಚಯ ಮಾಡಿಸಲಿದ್ದಾರೆ ಸಿಹಿ ಕ’ಹಿ ಚಂದ್ರು ಅವರು. ಜೊತೆಗೆ ಪ್ರತಿ ವೀಕೆಂಡ್ ನಲ್ಲಿ ವೀಕ್ಷಕರಿಗಾಗಿ ಹೊಸ ಬಗೆಯ ತಿಂಡಿಗಳ ಮೆನು ತಯಾರಾಗಲಿದೆ.

Trending

To Top