ಕಾಂತಾರ ಸಿನೆಮಾದ ಮೇಲೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್ ಇಂಟ್ರಸ್ಟಿಂಗ್ ಕಾಮೆಂಟ್, ಆಕೆ ಹೇಳಿದ್ದು ಏನು?

ಇತ್ತೀಚಿಗೆ ಇಡೀ ದೇಶದಾದ್ಯಂತ ಭಾರಿ ಸದ್ದು ಮಾಡಿದ ಸಿನೆಮಾಗಳ ಪಟ್ಟಿಯಲ್ಲಿ ಕಾಂತಾರ ಮೊದಲ ಸ್ಥಾನದಲ್ಲಿರುತ್ತದೆ ಎಂದು ಹೇಳಬಹುದಾಗಿದೆ. ಕನ್ನಡದ ಖ್ಯಾತ ನಿರ್ದೇಶಕ ಕಂ ನಟ ರಿಷಭ್ ಶೆಟ್ಟಿ ರವರ ಈ ಸಿನೆಮಾ ಕೇವಲ ಸಿನೆಮಾ ಪ್ರೇಕ್ಷಕರನ್ನು ಮಾತ್ರವಲ್ಲದೇ ಅನೇಕ ಸೆಲೆಬ್ರೆಟಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನೆಮಾದ ಬಗ್ಗೆ ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್‍ ಸಹ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ರವರ ಕಾಂತಾರ ಸಿನೆಮಾ ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆಗಿತ್ತು, ಬಳಿಕ ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲೂ ಸಹ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಸಹ ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನು ಸಹ ಬ್ರೇಕ್ ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾ ಒಟಿಟಿಯಲ್ಲೂ ಸಹ ಬಿಡುಗಡೆಯಾಗಿತ್ತು. ಆದರೆ ಒಟಿಟಿಗೂ ಬಂದರೂ ಸಹ ಈ ಸಿನೆಮಾ ಅನೇಕ ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿದೆ. ಇನ್ನೂ ಈ ಸಿನೆಮಾ ಬಿಡುಗಡೆಯಾದ ಬಳಿಕ ದೊಡ್ಡ ದೊಡ್ಡ ಸ್ಟಾರ್‍ ಸೆಲೆಬ್ರೆಟಿಗಳೂ ಸಹ ಸಿನೆಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ಪ್ಯಾನ್ ಇಂಡಿಯಾ ಸ್ಟಾರ್‍ ಬಾಹುಬಲಿ ಪ್ರಭಾಸ್ ರವರು ಈ ಸಿನೆಮಾವನ್ನು ಎರಡು ಬಾರಿ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅದರಲ್ಲೂ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಸಿನೆಮಾ ನೋಡಿ ಮೆಚ್ಚಿ ಬಳಿಕ ರಿಷಭ್ ರವರನ್ನು ಮನೆಗೆ ಕರೆಸಿಕೊಂಡು ಮನಸಾರೆ ಹೊಗಳಿದ್ದರು.

ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದರೂ ಬಳಿಕ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾದ ಕಾರಣದಿಂದ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಮಾರ್ಪಾಡಾಯಿತು. ಈ ಹಾದಿಯಲ್ಲೇ ಜಾನ್ವಿ ಕಪೂರ್‍ ಸಹ ಈ ಸಿನೆಮಾ ನೋಡಿ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆ ಕಾಂತಾರ ಸಿನೆಮಾ ಹಾಗೂ ರಿಷಭ್ ಶೆಟ್ಟಿ ಬಗ್ಗೆ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಂತಾರ ಸಿನೆಮಾ ಅತ್ಯಂತ ಅದ್ಬುತವಾಗಿದೆ. ಈ ಸಿನೆಮಾ ನನ್ನನ್ನು ತುಂಬಾನೆ ಆಕರ್ಷಣೆ ಮಾಡಿದೆ. ರಿಷಭ್ ಸರ್‍ ನಿಮಗೆ ಆಸಮ್ ಹ್ಯಾಟ್ಸಾಫ್ ಸರ್‍ ಎಂದು ಮನಸಾರೆ ಹೊಗಳಿದ್ದಾರೆ. ಈ ಸಿನೆಮಾದಲ್ಲಿ ನಿಮ್ಮ ನಟನೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎಂದು ರಿಷಭ್ ರವರ ನಟನೆಯನ್ನೂ ಸಹ ಮನಸಾರೆ ಹೊಗಳಿದ್ದಾರೆ. ಸದ್ಯ ಆಕೆಯ ಪೊಸ್ಟ್ ವೈರಲ್ ಆಗುತ್ತಿದೆ.

ಇನ್ನೂ ರಿಷಭ್ ಶೆಟ್ಟಿ ಈ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಈ ಸಿನೆಮಾವನ್ನು ನೋಡಿದ ಅನೇಕ ಸೆಲೆಬ್ರೆಟಿಗಳು ರಿಷಭ್ ರವರ ನಿರ್ದೇಶನ ಹಾಗೂ ನಟನೆಯನ್ನು ಮನಸಾರೆ ಹೊಗಳಿದ್ದಾರೆ. ಪ್ರಭಾಸ್, ರಜನಿಕಾಂತ್, ಅನುಷ್ಕಾಶೆಟ್ಟಿ, ಆಂಕರ್‍ ಅನಸೂಯ, ಕಮಲ್ ಹಾಸನ್, ಬಾಲಿವುಡ್ ನಟಿ ಕಂಗನಾ ಸೇರಿದಂತೆ ಅನೇಕ ಭಾಷೆಗಳ ಸಿನಿಮಾ ಸೆಲೆಬ್ರೆಟಿಗಳೂ ಸಹ ಮನಸಾರೆ ಹಾಡಿ ಹೊಗಳಿದ್ದಾರೆ.

Previous articleಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ಕೊಟ್ಟ ಮಂಚು ಮನೋಜ್, ಶೀಘ್ರದಲ್ಲೇ ಹೊಸ ಜೀವನ ಸ್ಟಾರ್ಟ್ ಆಗಲಿದೆ ಎಂದ ಮನೋಜ್…..!
Next articleಸಂಭಾವನೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮೃಣಾಲ್, ನಟಿಯರು ಸಂಭಾವನೆ ವಿಚಾರದಲ್ಲಿ ಹಿಂಜರಿಯಬಾರದು ಎಂದ್ರು….!