ಸೋಷಿಯಲ್ ಮಿಡಿಯಾವನ್ನು ಸೀರಿಯಸ್ ಆಗಿ ತೆಗೆದುಕೊಳ್ಳೊಲ್ಲ, ಅದು ಕೇವಲ ಫನ್ ಅಷ್ಟೆ ಎಂದ ಬಾಲಿವುಡ್ ಬ್ಯೂಟಿ ಜಾನ್ವಿ……!

ಬಾಲಿವುಡ್ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೇ ಆಕೆ ಹೆಚ್ಚು ಫಾಲೋಯಿಂಗ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಆಕೆ ಸಾಲು ಸಾಲು ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇದೀಗ ಜಾನ್ವಿ ಇದೇ ಸೋಷಿಯಲ್ ಮಿಡಿಯಾದ ಬಗ್ಗೆ ಕೆಲವೊಂದು ಆಸಕ್ತಿಕರವಾದ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ.

ನಟಿ ಜಾನ್ವಿ ಕಪೂರ್‍ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಸಹ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ಪೋಷಣೆ ಮಾಡುತ್ತಿರುತ್ತಾರೆ. ಹೋಮ್ಲಿ ಹಾಗೂ ಡೀಸೆಂಟ್ ಆಗಿ ಆಕೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಸೂಪರ್‍ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಕಾರಣದಿಂದ ಅನೇಕ ಸಿನೆಮಾಗಳಲ್ಲಿ ಡಿಸೆಂಟ್ ಆಗಿ, ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ಆಕೆಯ ಅಭಿಮಾನಿಗಳು ಹಾಗೂ ಸಿನಿರಸಿಕರೂ ಸಹ ಜೀರ್ಣಿಸಿಕೊಳ್ಳಲು ಕಷ್ಟ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೇ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಕೇಳಿದ್ದು, ಆಕೆ ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ನಾನು ರೆಡಿಯಾಗಲು ಕಾಲ್ಯುಕ್ಲೇಟ್ ಮಾಡುವುದಿಲ್ಲ. ಮನೀಷ್ ಮೆಲ್ಹೋತ್ರಾ ಡಿಸೈನ್ ಮಾಡಿರುವ ಸೀರೆಯಲ್ಲಿ ನೋಡಿದ ಜನರು ಚೂಡಿದಾರ್‍ ನಲ್ಲಿ ನೋಡಲು ಸಮಸ್ಯೆಯಾಗಿ ಫೀಲ್ ಆಗಬಹುದು ಆದರೆ ಅದು ಒಂದು ಕಲೆ, ನನ್ನ ವೃತ್ತಿಯಲ್ಲಿನ ಭಾಗ ಎಂದು ಜಾನ್ವಿ ಹೇಳಿದ್ದಾರೆ.

ನಾನು ವಾಸ್ತವಕ್ಕೆ ಹತ್ತಿರವಾಗಿರಲು ಪ್ರಯತ್ನ ಮಾಡುತ್ತಿರುತ್ತೇನೆ, ಸಿನೆಮಾಗಳಲ್ಲಿ ಪಾತ್ರಗಳಿಗೂ, ನನ್ನ ನಿಜ ಸ್ವಭಾವಕ್ಕೂ ತುಂಬಾನೆ ವ್ಯತ್ಯಾಸ ಇರುತ್ತದೆ. ಇನ್ನೂ ಸೋಷಿಯಲ್ ಮಿಡಿಯಾವನ್ನು ನಾನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಅದೊಂದು ಫನ್ ಮಾತ್ರ. ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೋಟೊಘಳನ್ನು ಶೇರ್‍ ಮಾಡುವ ಕಾರಣ ಮತಷ್ಟು ಫಾಲೋವರ್ಸ್‌ಗಳು ಬರುತ್ತಾರೆ. ಆ ಕಾರಣದಿಂದ ಬ್ರಾಂಡ್ ವಾಲ್ಯೂ ಸಹ ಬೆಳೆಯುತ್ತದೆ. ಆದಾಯ ಸಹ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ಸಹ ಜಾನ್ವಿ ಹೊರಹಾಕಿದ್ದಾರೆ. ಸದ್ಯ ಜಾನ್ವಿ ಮಿಲಿ ಎಂಬ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಸಾಲು ಸಾಲು ಪೊಟೋಶೂಟ್ಸ್ ಗಳನ್ನೂ ಸಹ ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಜಾನ್ವಿ ಬ್ಲಾಕ್ ಬ್ಲಸ್ಟರ್‍ ಹಿಟ್ ಗಾಗಿ ಕಾಯುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಆಕೆ ಜೂನಿಯರ್‍ ಎನ್.ಟಿ.ಆರ್‍ ರವರ ಸಿನೆಮಾದಲ್ಲಿ ನಾಯಕಿಯಾಗಿ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳೂ ಸಹ ಹರಿದಾಡುತ್ತಿದೆ. ಇನ್ನೂ ಮಿಲಿ ಸಿನೆಮಾದ ಪ್ರಮೋಷನ್ ಗಾಗಿ ಹೈದರಾಬಾದ್ ಗೆ ಬಂದ ಜಾನ್ವಿಯವರನ್ನು ಎನ್.ಟಿ.ಆರ್‍ ಸಿನೆಮಾದಲ್ಲಿ ನಟಿಸುವ ಬಗ್ಗೆ ಚಿತ್ರತಂಡ ಅಪ್ರೋಚ್ ಮಾಡಿದ್ದು, ಅದಕ್ಕೆ ಆಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Previous articleಜಾಹಿರಾತಿಗಾಗಿ ಸ್ನಾನ ಮಾಡುವ ವಿಡಿಯೋದಲ್ಲಿ ನಟನೆ ಮಾಡಿದ ನಟಿ ಶ್ರೆಯಾ, ವೈರಲ್ ಆದ ವಿಡಿಯೋ….!
Next articleಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಆ ಮಾಡಲ್ ಗೆ ಮೋಸ ಮಾಡಿದ್ದಾರಂತೆ…..!