ಅಂತೂ ಇಂತೂ NTR30 ಸಿನೆಮಾದಲ್ಲಿ ಎನ್.ಟಿ.ಆರ್ ಜೊತೆ ಡ್ಯುಯೆಟ್ ಆಡೋದು ಬಾಲಿವುಡ್ ಬ್ಯೂಟಿಯಂತೆ…!

RRR ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರು ಖ್ಯಾತ ನಿರ್ದೇಶಕ ಕೊರಟಾಲ ಶಿವ ಜೊತೆಗೆ NTR30 ಸಿನೆಮಾ ಘೋಷಣೆ ಮಾಡಿ ಸುಮಾರು ತಿಂಗಳುಗಳೇ ಕಳೆದಿದೆ. ಆದರೆ ಇನ್ನೂ ಈ ಸಿನೆಮಾದ ಶೂಟಿಂಗ್ ಕೆಲಸಗಳು ಆರಂಭವಾಗಿಲ್ಲ. ಇತ್ತೀಚಿಗಷ್ಟೆ ಸಿನೆಮಾದ ಶೂಟಿಂಗ್ ಕೆಲಸಗಳೂ ಆರಂಭವಾಗಲಿದೆ ಎಂಬ ಸುದ್ದಿ ಚಿತ್ರತಂಡದಿಂದ ಹೊರಬಂದಿತ್ತು. ಇನ್ನೂ ಸಿನೆಮಾದಲ್ಲಿ ನಟಿ ಯಾರು ಎಂಬುದಕ್ಕೆ ಅನೇಕ ದಿನಗಳಿಂದ ಚರ್ಚೆಗಳೂ ಸಹ ನಡೆಯುತ್ತಿದ್ದು, ಇದೀಗ ಬಾಲಿವುಡ್ ನ ಯಂಗ್ ಬ್ಯೂಟಿ ಯೊಬ್ಬರನ್ನು ಫೈನಲ್ ಮಾಡಲಾಗಿದೆ ಎಂದು ಕೇಳಿಬರುತ್ತಿದೆ.

NTR30 ಸಿನೆಮಾ ಘೋಷಣೆಯಾದಾಗಿನಿಂದ ಈ ಸಿನೆಮಾದಲ್ಲಿ ಎನ್.ಟಿ.ಆರ್‍ ಜೊತೆ ನಟಿಸುವ ನಟಿ ಯಾರು ಎಂಬ ವಿಚಾರ ಜೋರಾಗಿ ಹರಿದಾಡುತ್ತಿತ್ತು. ಈ ಹಿಂದೆ ಮೃಣಾಳ್ ಠಾಕೂರ್‍, ಅನನ್ಯ ಭಟ್ ಸೇರಿದಂತೆ ಅನೇಕ ನಟಿಯರ ಹೆಸರುಗಳು ಕೇಳಿಬಂದಿತ್ತು. ಪ್ಯಾನ್ ಇಂಡಿಯಾ ಸ್ಟಾರ್‍ ಆದ ಯಂಗ್ ಟೈಗರ್‍ ಎನ್.ಟಿ.ಆರ್‍ ಸಿನೆಮಾದಲ್ಲಿ ನಟಿಯನ್ನು ಆಯ್ಕೆ ಮಾಡಲು ಚಿತ್ರತಂಡ ಅನೇಕ ನಟಿಯರನ್ನು ಸಂಪರ್ಕ ಮಾಡಿದ್ದರಂತೆ.  ಕೆಲ ನಟಿಯರು ಅಧಿಕ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ ಕಾರಣಕ್ಕೆ ಕೈಬಿಡಲಾಯಿತು ಎಂಬ ಮಾತುಗಳೂ ಸಹ ಇದೆ. ಇದಿಗ ಈ ಸಿನೆಮಾದಿಂದ ಮತ್ತೊಂದು ಸುದ್ದಿ ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದೆ. ಎನ್.ಟಿ.ಆರ್‍ ಜೊತೆಗೆ ಹೆಜ್ಜೆ ಹಾಕಲು ಬಾಲಿವುಡ್ ನಟಿಯೊಬ್ಬರನ್ನು ಫೈನಲ್ ಮಾಡಲಾಗಿದೆ ಎಂದು ಕೇಳಿಬರುತ್ತಿದೆ.

ಇನ್ನೂ ಅಷ್ಟಕ್ಕೂ ಈ ಸಿನೆಮಾದಲ್ಲಿ ನಟಿಯಾಗಿ ಫೈನಲ್ ಮಾಡಿದ್ದು ಯಾರನ್ನು ಎಂದರೇ, ಆಕೆ ಬೇರೆ ಯಾರೂ ಅಲ್ಲ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍. ಇದೀಗ ಹರಿದಾಡುತ್ತಿರುವ ಸುದ್ದಿಯಂತೆ NTR30 ಸಿನೆಮಾದಲ್ಲಿ ನಟಿಸಲಿರುವುದು ಜಾನ್ವಿ ಕಪೂರ್‍ ಎಂದು ಹೇಳಲಾಗುತ್ತಿದೆ. ಚಿತ್ರತಂಡ ಆಕೆಯನ್ನೇ ಫೈನಲ್ ಮಾಡಲಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಇದರ ಜೊತೆಗೆ ಅನೇಕ ಬಾರಿ ಜಾನ್ವಿ ಕಪೂರ್‍ ಸಹ ಜೂನಿಯರ್‍ ಎನ್.ಟಿ.ಆರ್‍ ರವರೊಂಇದಗೆ ನಟಿಸಬೇಕು ಎಂದು ಹೇಳಿಕೊಂಡಿದ್ದರು. ಇದೀಗ NTR30 ತಂಡ ಸಹ ಜಾನ್ವಿ ಕಪೂರ್‍ ರವರನ್ನು ಸಂಪರ್ಕ ಮಾಡಿದ್ದರಂತೆ. ಆಕೆ ಸಹ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಅಧಿಕೃತ ಹೇಳಿಕೆಯೊಂದು ಮಾತ್ರ ಬಿಡುಗಡೆಯಾಗಬೇಕಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಸೌತ್ ಸಿನಿರಂಗದಲ್ಲಿ ಶ್ರೀದೇವಿಯವರಿಗೆ ಅಪಾರ ಪ್ರಮಾಣದ ಅಭಿಮಾನಿ ಬಳಗವಿದೆ. ಆಕೆಯ ಪುತ್ರಿ ಜಾನ್ವಿಯಲ್ಲೇ ಶ್ರೀದೇವಿಯನ್ನು ನೋಡುತ್ತಿದ್ದಾರೆ ಅಭಿಮಾನಿಗಳು. ಆಕೆಯನ್ನು ಸೌತ್ ಸಿನಿರಂಗದಲ್ಲಿ ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಜಾನ್ವಿ ಜೂನಿಯರ್‍ ಎನ್.ಟಿ.ಆರ್‍ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿದ ಶ್ರೀದೇವಿ ಅಭಿಮಾನಿಗಳು ಹಾಗೂ ಜೂನಿಯರ್‍ ಎನ್.ಟಿ.ಆರ್‍ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇನ್ನೇನು NTR30 ಸಿನೆಮಾ ಪೂಜಾ ಕಾರ್ಯಕ್ರಮ ನ.12 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

Previous articleಯಾವುದೇ ಡೂಪ್ ಇಲ್ಲದೇ ಆಕ್ಷನ್ ಸೀನ್ಸ್ ಮಾಡಿದ ಸಮಂತಾ, ಯಶೋಧ ಮೇಕಿಂಗ್ ವಿಡಿಯೋ ವೈರಲ್….!
Next articleಶರ್ಟ್ ಬಟನ್ ತೆಗೆದು ಹಾಟ್ ಟ್ರೀಟ್ ನೀಡಿದ ಬುಟ್ಟಬೊಮ್ಮ ಪೂಜಾ ಹೆಗ್ಡೆ, ವೈರಲ್ ಆದ ಪೊಟೋಸ್….!