ಶೂಟಿಂಗ್ ಸೆಟ್ ನಲ್ಲೇ ನೇಣಿಗೆ ಶರಣಾದ ಬಾಲಿವುಡ್ ಯಂಗ್ ನಟಿ ತುನಿಷಾ ಶರ್ಮಾ….!

ಸಿನಿರಂಗದಲ್ಲಿ ಇತ್ತಿಚಿಗೆ ಕೆಲವು ನಟಿಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ಶೂಟಿಂಗ್ ಸೆಟ್ ನಲ್ಲೇ ನೇಣಿಗೆ ಶರಣಾಗಿದ್ದಾರೆ ಬಾಲಿವುಡ್ ಯಂಗ್ ಬ್ಯೂಟಿ. ದಬಾಂಗ್ 3 ಸಿನೆಮಾದಲ್ಲಿ ನಟಿಸಿದ್ದ ಯಂಗ್ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ 20 ವರ್ಷ ವಯಸ್ಸಿನ ತುನಿಷಾ ಶರ್ಮಾ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಇಡೀ ಬಾಲಿವುಡ್ ಶಾಕ್ ಆಗಿದೆ. ಅನೇಕ ಸೆಲೆಬ್ರೆಟಿಗಳೂ ಸಹ ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತಿದ್ದಾರೆ.

ಅನೇಕ ಆಸೆಗಳನ್ನು ಇಟ್ಟುಕೊಂಡು ಸಿನಿರಂಗಕ್ಕೆ ಎಂಟ್ರಿ ಕೊಟ್ಟಂತಹ ನಟಿ ತುನಿಷಾ ಶರ್ಮಾ ಶೂಟೀಂಗ್ ಸೆಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮುಂಬೈನ ಶೂಟಿಂಗ್ ಸೆಟ್ ನಲ್ಲಿ ಯಾರು ನೋಡದೇ ಇರುವ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಬಳಿಕ ಆಕೆಯನ್ನು ನೋಡಿದ ಯೂನಿಟ್ ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಷ್ಟರೊಳಗೆ ಆಕೆಯ ಪ್ರಾಣ ಹೋಗಿತ್ತು. ಇನ್ನೂ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದು ಇನಷ್ಟೆ ತಿಳಿದು ಬರಬೇಕಿದೆ. ಇತ್ತೀಚಿಗೆ ಅನೇಕ ಮಾಡಲ್ ಗಳು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳಿಂದ ಸಿನಿರಂಗ ಸಹ ಶಾಕ್ ಆಗಿದೆ. ಇದೀಗ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ಆಗಬೇಕು ಎಂದುಕೊಂಡ ಬಂದಂತಹ ತುನಿಷಾ ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರನ್ನೂ ಶೋಕಸಾಗರಕ್ಕೆ ತುಂಬಿದೆ.

ಸಣ್ಣವಯಸ್ಸಿನಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ತುನಿಷಾ ಭಾರತ್ ಕಾ ವಿರ್‍ ಪುತ್ರ ಮಹಾರಾಣಾ ಪ್ರತಾಪ್ ಎಂಬ ಕಿರುತೆರೆ ಸೀರಿಯಲ್ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಚಕ್ರವರ್ತನ್ ಅಶೋಕ್ ಸಾಮ್ರಾಟ್, ಗಬ್ಬರ್‍ ಪೂಂಚ್ವಾಲಾ, ಮಹಾರಾಜಾ ರಂಜಿಂತ್ ಸಿಂಗ್, ಇಂಟರ್‍ ನೆಟ್ ವಾಲಾ ಲವ್ ಸೇರಿದಂತೆ ಅನೇಕ ಸೀರೀಯಲ್ ಗಳಲ್ಲಿ ನಟಿಸಿದ್ದರು. ಫಿತೂರ್‍ ಎಂಬ ಸಿನೆಮಾದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ಬಳಿಕ ಬಾರ್‍ ಬಾರ್‍ ದೇಖೋ, ದಬಂಗ್-3 ಮೊದಲಾದ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಸದ್ಯ ಆಕೆಯ ಆತ್ಮಹತ್ಯೆ ಇಡೀ ಬಾಲಿವುಡ್ ಸಿನಿರಂಗಕ್ಕೆ ತೀವ್ರ ವಿಷಾದವನ್ನು ತಂದುಕೊಟ್ಟಿದೆ.

Previous articleಕಾರಿನಲ್ಲಿ ಕುಳಿತು ಹಾಟ್ ಪೋಸ್ ಕೊಟ್ಟ ಬುಟ್ಟಬೊಮ್ಮ ಪೂಜಾ ಹೆಗ್ಡೆ, ವೀಕೆಂಡ್ ಹಾಟ್ ಟ್ರೀಟ್ ಗೆ ಫಿದಾ ಆದ ಫ್ಯಾನ್ಸ್……!
Next articleಥೈಲ್ಯಾಂಡ್ ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ, ಥೈಲ್ಯಾಂಡ್ ಸೌಂದರ್ಯವನ್ನು ಹೊಗಳಿದ ಬ್ಯೂಟಿ…!