ಬಾಲಿವುಡ್ ಸಿನಿರಂಗದಲ್ಲಿ ವಿಷಾದ, ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ..!

ಇತ್ತೀಚಿಗೆ ಸಿನಿರಂಗದಲ್ಲಿ ಸಾಲು ಸಾಲು ಆತ್ಮಹತ್ಯೆಗಳು ನಡೆಯುತ್ತಿವೆ. ಅನೇಕ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಿನಿರಂಗದಲ್ಲಿ ವಿಷಾದದಲ್ಲಿ ಮುಳುಗಿಸುತ್ತಿದ್ದಾರೆ. ಇನ್ನೂ ಕೆಲವು ದಿನಗಳಿಂದ ಅನೇಕ ಮಾಡಲ್ ಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಬಾಲಿವುಡ್ ಸಿನಿರಂಗದ ಕಿರುತೆರೆ ನಟಿ ವೈಶಾಲಿ ಠಕ್ಕರ್‍ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಸುರಾಲ್ ಸೀಮರ್‍ ಕಾ ಟಿವಿ ಶೋ ಫೇಮ್ ನ ವೈಶಾಲಿ ಇದೀಗ ಇಹಲೋಕ ತ್ಯೆಜಿಸಿದ್ದಾರೆ.

ಬಾಲಿವುಡ್ ಸಿನಿರಂಗದ ಕಿರುತೆರೆ ನಟಿ ವೈಶಾಲಿ ಠಕ್ಕರ್‍ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್‍ ನಲ್ಲಿ ಆಕೆಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಆಕೆಯ ಆತ್ಮಹತ್ಯೆ ಬಾಲಿವುಡ್ ಸಿನಿರಂಗದಲ್ಲಿ ಸಂತಾಪ ಮನೆ ಮಾಡುವಂತೆ ಮಾಡಿದೆ. ಇನ್ನೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವನ್ನು ಸಹ ಸೂಸೈಡ್ ನೋಟ್  ಸಹ ಬರೆದಿದ್ದಾರೆ ಎನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ. ಸ್ಥಳದಲ್ಲಿದ್ದ ಸೂಸೈಡ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ನೋಟ್ ನಲ್ಲಿ ಏನಿದೆ ಎಂಬುದರ ಬಗ್ಗೆ ಇನಷ್ಟೆ ತಿಳಿದು ಬರಬೇಕಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಆಕೆಯ ಪ್ರೇಮ ವ್ಯವಹಾರದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.

ಉಜ್ಜೈನಿಯಲ್ಲಿನ ಮಹದಿಪುರ ಎಂಬಲ್ಲಿ ಆಕೆ ಜನಿಸಿ ವೈಶಾಲಿ ಠಕ್ಕರ್‍ ಯೆ ರಿಷ್ತಾ ಕ್ಯಾ ಕೆಹ್ಲತಾ ಹೈ ಎಂಬ ಸೀರಿಯಲ್ ಮೂಲಕ ಕೆರಿಯರ್‍ ಪ್ರಾರಂಭಿಸಿದರು. ಈ ಸೀರಿಯಲ್ ನಲ್ಲಿ ಸಂಜನ ಎಂಬ ಪಾತ್ರವನ್ನು ಪೋಷಣೆ ಮಾಡಿದ್ದರು. ಈ ಸೀರಿಯಲ್ ಮೂಲಕ ಒಳ್ಳೆಯ ಫೇಮ್ ದಕ್ಕಿಸಿಕೊಂಡ ಈಕೆಗೆ ಬಳಿಕ ಅನೇಕ ಅವಕಾಶಗಳು ಹರಸಿ ಬಂದವು. ಬಳಿಕ ಸಸುರಾಲ್ ಸಿಮರ್‍ ಕಾ ಎಂಬ ಸೀರಿಯಲ್ ನಲ್ಲಿ ಅಂಜಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸೀರಿಯಲ್ ಬಳಿಕ ಆಕೆ ಕಿರುತೆರೆಯ ಸ್ಟಾರ್‍ ಆದರು ಎಂದರೇ ತಪ್ಪಾಗಲಾರದು. ಬಳಿಕ ಯೆ ವಾದಾ ರಹೆ, ಯೆ ಹೈ ಆಷಿಕಿ, ಲಾಲ್ ಇಷ್ಕ್, ಅಮೃತ್ ಸೇರಿದಂತೆ ಅನೇಕ ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಆಕೆ ಖ್ಯಾತಿ ಪಡೆದುಕೊಂಡಿದ್ದರು.

ಇನ್ನೂ ಅನೇಕ ಸೀರಿಯಲ್ ಗಳಲ್ಲಿ ‌ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಈಕೆ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಇನ್ನೂ ಬಾಲಿವುಡ್ ಖ್ಯಾತ ನಟ ದಿವಂಗತ ಸುಶಾಂತ್ ಸಿಂಗ್ ರಾಜಪುತ್ ರವರಿಗೆ ವೈಶಾಲಿ ತುಂಬಾನೆ ಹತ್ತಿರದ ಸ್ನೇಹಿತೆಯಾಗಿದ್ದರು. ಇಬ್ಬರೂ ಒಂದೇ ಸಮಯದಲ್ಲಿ ಕೆರಿಯರ್‍ ಪ್ರಾರಂಭಿಸಿದ್ದರು. ಇನ್ನೂ ರಿಯಾ ಚಕ್ರವರ್ತಿ ಯಿಂದಲೇ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವೈಶಾಲಿ ಆರೋಪ ಸಹ ಮಾಡಿದ್ದರು.

Previous articleಸೌಂದರ್ಯ ಪ್ರದರ್ಶನದಲ್ಲಿ ಮಿತಿ ಮೀರಿದ ಶೋಭಿತಾ ಧೂಳಿಪಾಲ, ಅಷ್ಟು ಮಾತ್ರಕ್ಕೆ ಸೀರೆ ಏಕೆ ಎಂದ ನೆಟ್ಟಿಗರು…!
Next articleಕಾಂತಾರ ಸಿನೆಮಾವನ್ನು ಮನಸಾರೆ ಮೆಚ್ಚಿದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ, ರಿಷಭ್ ರವರನ್ನು ಅದ್ಬುತ ಎಂದು ಹೊಗಳಿದ ದೇವಸೇನ…!