Film News

ಪಠಾಣ್ ಚಿತ್ರದಲ್ಲಿ ಒಂದಾದ ಸ್ಟಾರ್ ನಟರು!

ಮುಂಬೈ: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅಭಿನಯಸುತ್ತಿರುವ ಪಠಾನ್ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟರು ಅಭಿನಯಿಸಲಿದ್ದಾರಂತೆ. ಈಗಾಗಲೇ ಸಲ್ಮಾನ್ ಖಾನ್ ಶಾರುಖ್ ಖಾನ್ ಜೊತೆ ನಟಿಸಲು ಒಪ್ಪಿದ್ದು, ಇದೀಗ ಮತ್ತೊರ್ವ ನಟ ನಟಿಸಲಿದ್ದಾರೆ ಎನ್ನಲಾಗಿದೆ.

ಹಲವು ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಶಾರುಖ್ ನಟಿಸಲಿದ್ದು, ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಖಾನ್ ತಮ್ಮ ಹೊಸ ಸಿನೆಮಾಕ್ಕಾಗಿ ಸ್ಟಾರ್ ನಟರನ್ನೆಲ್ಲಾ ಒಂದು ಮಾಡುತ್ತಿದ್ದಾರೆ. ಸುಮಾರು ವರ್ಷಗಳ ಹಿಂದೆ ಶಾರುಖ್ ಹಾಗೂ ಹೃತಿಕ್ ಕಭಿ ಖುಷಿ ಕಭಿ ಗಮ್ ಎಂಬ ಚಿತ್ರದಲ್ಲಿ ಒಂದಾಗಿದ್ದರು. ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಪಠಾಣ್ ಆಗಿದೆ.

ಪಠಾಣ್ ಚಿತ್ರ ಗುಪ್ತಚರ ಇಲಾಖೆಗೆ ಸಂಬಂಧಿಸಿದ ಚಿತ್ರವಾಗಿದೆ. ಇನ್ನೂ ಈಗಾಗಲೇ ಸಲ್ಮಾನ್ ಖಾನ್ ರವರಿಗೆ ಟೈಗರ್ ಎಂಬ ಸರಣಿ ಚಿತ್ರಗಳಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಯ ಪಾತ್ರದಲ್ಲಿ ನಟಿಸಿದ ಅನುಭವವಿದೆ. ಜೊತೆಗೆ ಹೃತಿಕ್ ರೋಷನ್ ಕೂಡ ವಾರ್ ಎಂಬ ಚಿತ್ರದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರದ ನಾಯಕಿಯಾಗಿ ದೀಪಿಕಾ ಪಡುಕೋಣೆ ಬಣ್ಣಹಚ್ಚಲಿದ್ದಾರೆ. ಇವರೊಂದಿಗೆ ಜಾನ್ ಅಬ್ರಹಾಂ ಹಾಗೂ ಕಪಾಡಿಯಾ ಸಹ ನಟಿಸಲಿದ್ದು, ಚಿತ್ರವನ್ನು ಸಿದ್ದಾರ್ಥ ಆನಂದ್ ನಿರ್ದೇಶಿಸಲಿದ್ದಾರೆ.

Trending

To Top