ಮುಂಬೈ: ಬಾಲಿವುಡ್ ನ ಸ್ಟಾರ್ ನಟ, ಬಾಕ್ಸ್ ಆಫೀಸ್ ಸುಲ್ತಾನ್ ಎಂತಲೇ ಕರೆಯುವ ಸಲ್ಮಾನ್ ಖಾನ್ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಕೊರೋನಾ ಕಾರಣದಿಂದ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ ಸಲ್ಮಾನ್.
ಸಲ್ಮಾನ್ ಖಾನ್ ಹುಟ್ಟುಹಬ್ಬವೆಂದರೇ ಅದು ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಪ್ರತೀ ವರ್ಷ ತಮ್ಮ ಹುಟ್ಟುಹಬ್ಬದಂದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸಲ್ಲು ಮನೆಯ ಮುಂಭಾಗ ಜನಸಾಗರದಂತೆ ಹರಿದುಬರುತ್ತಿದ್ದರು. ಆದರೆ ಕರೋನಾ ಕಾರಣದಿಂದಾಗಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಯಾರು ಕೂಡ ಮನೆಯ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಇನ್ನೂ 55ನೇ ವಸಂತಕ್ಕೆ ಕಾಲಿಟ್ಟಿರುವ ನಟ ಸಲ್ಮಾನ್ ಖಾನ್ ರವರಿಗೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಶುಭಾಷಯ ಕೋರಿದ್ದಾರೆ. ಜೊತೆಗೆ ಬಾಲಿವುಡ್ ಸ್ಟಾರ್ ಗಳು ಸೇರಿದಂತೆ ದಕ್ಷಿಣ ಭಾರತದ ಅನೇಕ ಗಣ್ಯರು ಶುಭಾಷಯ ಕೋರಿದ್ದಾರೆ.
ದಬಾಂಗ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಸುದೀಪ್ ರವರು ಕೂಡ ನಟಿಸಿದ್ದರು. ಇದೇ ಸಿನೆಮಾದಿಂದ ಇಬ್ಬರ ಸ್ನೇಹ ಬಾಂದವ್ಯ ಇಂದಿಗೂ ಸಹ ಅದೇ ರೀತಿಯಿದ್ದು, ಆತ್ಮೀಯ ಸ್ನೇಹಿತ ಸಲ್ಮಾನ್ ಗೆ ಸುದೀಪ್ ಆತ್ಮೀಯವಾಗಿ ಶುಭಾಷಯ ಕೋರಿದ್ದಾರೆ. ’ಯಾವಾಗಲೂ ಸಂತೋಷವಾಗಿರಿ ಸಲ್ಮಾನ್ ಖಾನ್ ಸರ್, ಅದ್ಬುತವಾದ ವರ್ಷ ನಿಮ್ಮದಾಗಲಿ, ನಿಮಗೆ ಹುಟ್ಟುಹಬ್ಬದ ಶುಭಾಷಯಗಳು. ಎಂದು ಟ್ವೀಟರ್ ಮೂಲಕ ಶುಭಾಷಯ ಕೋರಿದ್ದಾರೆ.
