ಹೈದರಾಬಾದ್: ಇತ್ತೀಚಿಗಷ್ಟೆ ತಂಪು ಪಾನೀಯ ಜಾಹಿರಾತೊಂದರಲ್ಲಿ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಹಾಗೂ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಒಟ್ಟಿಗೆ ನಟಿಸಿದ್ದು, ನಾನು ಈವರೆಗೆ ಭೇಟಿಯಾಗಿರುವ ಬೆಸ್ಟ್ ಜೆಂಟಲ್ ಮೆನ್ ಗಳಲ್ಲಿ ತಾವು ಒಬ್ಬರು ಎಂದು ಹೊಗಳಿದ್ದಾರೆ.
ನಟ ಮಹೇಶ್ ಬಾಬು ರವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ನಟರೇ ಮಹೇಶ್ ಬಾಬು ರವರ ಅಭಿಮಾನಿಗಳಾಗಿದ್ದಾರೆ. ಬಾಲಿವುಡ್ ಸ್ಟಾರ್ ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ ಮಹೇಶ್ ಬಾಬು. ಇದೀಗ ರಣ್ವೀರ್ ಸಿಂಗ್ ರವರೂ ಸಹ ಮಹೇಶ್ ಬಾಬು ರವರ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ರಣ್ವೀರ್ ಸಿಂಗ್ ಮನಸಾರೆ ಹೊಗಳಿದ್ದಾರೆ.
ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಣ್ವೀರ್ ಸಿಂಗ್, ನಾನು ಇಲ್ಲಿಯವರೆಗೂ ಭೇಟಿಯಾಗಿರುವ ಬೆಸ್ಟ್ ಜೆಂಟಲ್ ಮೆನ್ ಗಳಲ್ಲಿ ಮಹೇಶ್ ಬಾಬು ರವರು ಒಬ್ಬರಾಗಿದ್ದಾರೆ. ‘ನಿಮ್ಮೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನಾನು ನಿಮ್ಮೊಂದಿಗೆ ಕಳೆದ ಸಮಯದಲ್ಲಿ ಸಾಕಷ್ಟು ಜ್ಞಾನವನ್ನು ಪಡೆದುಕೊಂಡಿದ್ದೇನೆ. ಸದಾ ನಿಮ್ಮನ್ನು ಗೌರವಿಸುವೆ ಹಾಗೂ ಪ್ರೀತಿಸುವೇ ಮಹೇಶ್ ಬಾಬು ರವರೇ’ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
