ಬಾಲಿವುಡ್ ಸಿನಿರಂಗದಲ್ಲಿ ಇತ್ತೀಚಿಗೆ ಸ್ಟಾರ್ ನಟರ ಸಿನೆಮಾಗಳೂ ಸಹ ಸಾಲು ಸಾಲು ಸೋಲುಗಳನ್ನು ಕಾಣುತ್ತಿವೆ. ಸ್ಟಾರ್ ನಟರ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಡಿಜಾಸ್ಟರ್ ಆಗಿದೆ. ಇನ್ನೂ ಸ್ಟಾರ್ ನಟ ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನೆಮಾ ಬೆಟರ್ ಅಂತಾ ಅನ್ನಿಸಿದರೂ ಸಹ ಬ್ರಹ್ಮಾಸ್ತ್ರಗೂ ಮುಂದೆ ತೆರೆಕಂಡ ಷಂಷೇರಾ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತ್ತು. ಇದಕ್ಕೆ ಕಾರಣ ಆತನ ಗಡ್ಡ ಎಂದು ಸ್ವಯಂ ರಣಬೀರ್ ರವರೇ ಹೇಳಿದ್ದು ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿಮಾಡಿದೆ.
ಬಾಲಿವುಡ್ ಸಿನಿರಂಗದ ಸ್ಟಾರ್ ನಟ ರಣಬೀರ್ ಕಪೂರ್ ಯಾವುದೇ ಸಿನೆಮಾ ಮಾಡಿದರೂ ಸಹ ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನವಾಗಿ ತಮ್ಮನ್ನು ತಾವು ಪ್ರೆಸೆಂಟ್ ಮಾಡುತ್ತಾರೆ. ಜೊತೆಗೆ ಯಾವುದೇ ಪಾತ್ರದಲ್ಲಿ ನಟಿಸಬೇಕಾದರೂ ತುಂಬಾ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಇನ್ನೂ ಬ್ರಹ್ಮಾಸ್ತ್ರ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು, ಬ್ರಹ್ಮಾಸ್ತ್ರ -2 ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿವಂತೆ ಮಾಡಿದೆ. ಇನ್ನೂ ಈ ಸಿನೆಮಾಗೂ ಮುಂಚೆ ಷಂಷೇರಾ ಎಂಬ ಸಿನೆಮಾದ ಮೂಲಕ ತೆರೆ ಮೇಲೆ ಬಂದರು. ಕರಣ್ ಮೆಲ್ಹೋತ್ರಾ ನಿರ್ದೇಶನದಲ್ಲಿ ಬಂದ ಈ ಸಿನೆಮಾ ವನ್ನು ಯಷ್ ರಾಜ್ ಫಿಲಂಸ್ ನಿರ್ಮಾಣ ಮಾಡಿತ್ತು. ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದ ಈ ಸಿನೆಮಾ ಡಿಜಾಸ್ಟರ್ ಸಿನೆಮಾ ಆಗಿ ಉಳಿಯಿತು. ಡಿಸ್ಟ್ರಿಬ್ಯೂಟರ್ ಗಳೂ ಸಹ ತುಂಬಾನೆ ನಷ್ಟಕ್ಕೆ ಒಳಗಾದರು.
ಇನ್ನೂ ಈ ಸಿನೆಮಾ ಬರೊಬ್ಬರಿ 150 ಕೋಟಿ ನಷ್ಟ ತಂದುಕೊಟ್ಟಿತ್ತು. ಇದೀಗ ಸಿನೆಮಾ ಫ್ಲಾಪ್ ಆಗುವುದರ ಬಗ್ಗೆ ರಣಬೀರ್ ಕಪೂರ್ ಸಂದರ್ಶನವೊಂದರಲ್ಲಿ ಕೆಲವೊಂದು ವಿಚರಗಳನ್ನು ಹಂಚಿಕೊಂಡಿದ್ದಾರೆ. ಆ ವಿಚಾರಗಳು ತುಂಬಾನೆ ವೈರಲ್ ಆಗುತ್ತಿವೆ. ಷಂಷೇರಾ ಸಿನೆಮಾ ಫ್ಲಾಪ್ ಆಗಲು ಮುಖ್ಯ ಕಾರಣವೊಂದನ್ನು ಸಹ ಆತ ಹಂಚಿಕೊಂಡಿದ್ದಾರೆ. ಷಂಷೇರಾ ಸಿನೆಮಾ ಡಿಜಾಸ್ಟರ್ ಆಗಲು ಪ್ರಮುಖ ಕಾರಣ ನನ್ನ ಗಡ್ಡ. ನನ್ನ ಗಡ್ಡದಿಂದಲೇ ಸಿನೆಮಾ ಡಿಜಾಸ್ಟರ್ ಆಗಿದೆ. ನನಗೆ ಆ ಗಡ್ಡ ಸ್ಯೂಟ್ ಆಗಲೇ ಇಲ್ಲ. ಅದು ನ್ಯಾಚುರಲ್ ಆಗಿ ಬೆಳೆದಿದ್ದರೇ ಬೇರೆ ತರಹ ಇರುತ್ತಿತ್ತೇನೋ ಆದರೆ ಕೃತಕವಾದ ಈ ಗಡ್ಡ ದಿಂದ ಮುಖಕ್ಕೆ ಏನೋ ಅಂಟಿಸಿದಂತೆ ಕಾಣಿಸಿದೆ. ಈ ವಿಚಾರದಿಂದ ಪ್ರೇಕ್ಷಕರೂ ಸಹ ನಿರಾಸೆಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಸಿನೆಮಾ ಪ್ಲಾಫ್ ಆಗಿರಬಹುದು. ಕೆಲವೊಂದು ಸಿನೆಮಾಗಳಲ್ಲಿ ಸಣ್ಣ ಪುಟ್ಟ ಲೋಪಗಳೇ ದೊಡ್ಡ ಮಟ್ಟದ ವೈಪಲ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.