ಸಾಮಾನ್ಯವಾಗಿ ಮದ್ಯಮ ವರ್ಗ ಹಾಗೂ ಬಡ ವರ್ಗದ ಮದುವೆ ಸಮಾರಂಭಗಳಲ್ಲಿ ಗಲಾಟೆಗಳು ಆಗುವುದನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಆದರೆ ಸೆಲೆಬ್ರೆಟಿಗಳ ಮದುವೆಯಲ್ಲೂ ಸಹ ಗಲಾಟೆ ನಡೆಯುವುದನ್ನು ತುಂಬಾನೆ ವಿರಳವಾಗಿ ನೋಡುತ್ತಿರುತ್ತೇವೆ. ಇತ್ತಿಚಿಗಷ್ಟೆ ಅದ್ದೂರಿಯಾಗಿ ಹಸಮಣೆ ಏರಿದ ಬಾಲಿವುಡ್ ಸ್ಟಾರ್ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಸಮಯದಲ್ಲೂ ಸಹ ದೊಡ್ಡ ಮಟ್ಟದ ಗಲಭೆ ನಡೆದಿತ್ತಂತೆ. ಈ ವಿಚಾರವನ್ನು ಕ್ಯಾಟ್ ಹೊರಹಾಕಿದ್ದಾರೆ.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ನಡೆದು ಒಂದು ವರ್ಷ ಆಗುತ್ತಾ ಬಂದಿದೆ. ಮದುವೆಯ ಸಮಯದಲ್ಲಿ ನಡೆದಂತಹ ಒಂದು ಕೆಟ್ಟ ಘಟನೆಯ ಬಗ್ಗೆ ಕತ್ರಿನಾ ಇತ್ತೀಚಿಗಷ್ಟೆ ಹೊರಹಾಕಿದ್ದಾರೆ. ಸಿನೆಮಾ ಸೆಲೆಬ್ರೆಟಿಗಳ ಮದುವೆಯಲ್ಲೂ ಸಹ ಗಲಾಟೆಗಳು ನಡೆಯುತ್ತವೆಯೇ ಎಂದು ಹೇಳಲಾಗುತ್ತಿದ್ದು, ಇದೀಗ ಕತ್ರಿನಾ ತಮ್ಮ ಮದುವೆಯಲ್ಲಾದ ಗಲಾಟೆಯ ಬಗ್ಗೆ ಮಾತನಾಡಿದ್ದಾರೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಮದುವೆ ಸಮಯದಲ್ಲಿ ದೊಡ್ಡ ಗಲಾಟೆಯಾಗಿತ್ತಂತೆ. ಸದ್ಯ ಈ ವಿಚಾರವನ್ನು ಕತ್ರಿನಾ ರವರೇ ಹೊರಹಾಕಿದ್ದಾರೆ. ಸದ್ಯ ಕತ್ರಿನಾ ಹಂಚಿಕೊಂಡ ಈ ಹೇಳಿಕೆಗಳು ಹಾಟ್ ಟಾಪಿಕ್ ಆಗಿದೆ. ಅಷ್ಟಕ್ಕೂ ಕತ್ರಿನಾ ಮದುವೆ ಸಮಯದಲ್ಲಿ ಗಲಾಟೆ ಆಗಿದ್ದು ಏಕೆ ಎಂಬ ವಿಚಾರಕ್ಕೆ ಬರುವುದಾದರೇ,
ಕತ್ರಿನಾ ಕೈಫ್ ಮದುವೆಯ ವೇಳೆ ನಡೆದಂತಹ ಘಟನೆಯೊಂದನ್ನು ಹೊರಹಾಕಿದ್ದಾರೆ. ಮದುವೆಯಲ್ಲಿ ಕತ್ರಿನಾ ಗೆಸ್ಟ್ ಗಳನ್ನು ನೋಡುತ್ತಿರುತ್ತಾರೆ. ಆ ಸಮಯದಲ್ಲಿ ದೊಡ್ಡ ದೊಡ್ಡ ಸೌಂಡ್ಸ್ ಕೇಳಿಬಂದಿದೆ. ಇದರಿಂದ ಏನಾಗಿದೆ ಎಂಬ ಭಯ ಹುಟ್ಟಿಕೊಂಡಿತ್ತು. ಅಲ್ಲಿ ಕತ್ರಿನಾ ಸಹೋದರಿಯರು ಹಾಗೂ ವಿಕ್ಕಿ ಸ್ನೇಹಿತರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಅವರ ಗಲಾಟೆ ತೀವ್ರಗೊಂಡು ಚೇರ್ ಗಳು, ಚಪ್ಪಲಿಗಳನ್ನು ಒಬ್ಬರ ಮೇಲೊಬ್ಬರು ಎಸೆದುಕೊಂಡರು. ಜೊತೆಗೆ ಒಬ್ಬರೊನ್ನೊಬ್ಬರು ಬೈದುಕೊಂಡರು. ನಾನಿದ್ದ ಪರಿಸ್ಥಿತಿಯನ್ನು ಗಲಾಟೆ ನಡೆಯುವ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಜೊತೆಗೆ ಆ ಗಲಾಟೆಯಲ್ಲಿ ಗೆದ್ದಿದ್ದು ಯಾರು ಎಂಬುದನ್ನು ಕೇಳಲು ಸಹ ಮರೆತುಬಿಟ್ಟೆ ಎಂದು ಕತ್ರಿನಾ ಮದುವೆ ಸಮಯದಲ್ಲಿನ ಕೆಲವೊಂದು ವಿಚಾರಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನೂ ಕತ್ರಿನಾ ಹಾಗೂ ವಿಕ್ಕಿ ಮದುವೆಯಾದ ಬಳಿಕ ತುಂಬಾನೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಮದುವೆಯಾದ ಬಳಿಕ ಇಬ್ಬರೂ ತಮ್ಮ ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾದರು. ಸಿನೆಮಾಗಳಿಂದ ಬಿಡುವು ಸಿಕ್ಕರೇ ಸಾಕು ಇಬ್ಬರೂ ಖುಷಿಯಾಗಿ ಹಾಲಿಡೇಸ್ ಎಂಜಾಯ್ ಮಾಡುತ್ತಿರುತ್ತಾರೆ. ಇನ್ನೂ ಕತ್ರಿನಾ ಅಭಿನಯದ ಪೋನ್ ಭೂತ್ ಸಿನೆಮಾ ಇತ್ತಿಚಿಗಷ್ಟೆ ಬಿಡುಗಡೆಯಾಗಿತ್ತು. ಸದ್ಯ ಕ್ರಿಸ್ ಮಸ್ ಹಾಗೂ ಟೈಗರ್ 3 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಕೌಶಲ್ ಸಹ ಒಂದೆರೆಡು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
