ತಿರುಮಲದಲ್ಲಿ ಬಾಲಾಜಿ ದರ್ಶನ ಪಡೆದ ಬಾಲಿವುಡ್ ಸ್ಟಾರ್ ಕಂಗನಾ ರಾಣಾವತ್…

ಬಾಲಿವುಡ್ ನ ಖ್ಯಾತ ನಟಿ ಕಂಗನಾ ತಿರುಮಲದಲ್ಲಿ ಕಾಣಿಸಿಕೊಂಡಿದ್ದಾರೆ. ಬುದ್ದ ಪೂರ್ಣಿಮೆಯ ಹಿನ್ನೆಲೆಯಲ್ಲಿ ಕಂಗನಾ ವಿಶ್ವ ವಿಖ್ಯಾತ ತಿರುಮಲಕ್ಕೆ ಭೇಟಿ ನೀಡಿ ಬಾಲಾಜಿ ದರ್ಶನ ಪಡೆದಿದ್ದಾರೆ. ಕಂಗನಾ ಹಾಗೂ ಅವರ ಕುಟುಂಬದೊಂದಿಗೆ ಧಾಕಡ್ ಸಿನೆಮಾದ ನಿರ್ಮಾಪಕ ದೀಪಕ್ ಮುಕುಟ್ ಹಾಗೂ ಅವರ ಕುಟುಂಬಸ್ಥರು ತಿರುಮಲದಲ್ಲಿ ಬಾಲಾಜಿ ದರ್ಶನ ಪಡೆದಿದ್ದಾರೆ.

ನಟಿ ಕಂಗನಾ ರವರ ಬಹುನೀರಿಕ್ಷಿತ ಸಿನೆಮಾ ಧಾಕಡ್ ಇದೇ ಮೇ.20 ರಂದು ಪ್ರಪಂಚದಾದ್ಯಂತ ರಿಲೀಸ್ ಆಗಲಿದೆ. ಇನ್ನೂ ಈಗಾಗಲೇ ಈ ಸಿನೆಮಾದ ಟ್ರೈಲರ್‍, ಪೋಸ್ಟರ್‍ ಗಳ ಮೂಲಕ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಇದೀಗ ಕಂಗನಾ ಸಿನೆಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಸಿನೆಮಾ ಮೇಲೆ ಚಿತ್ರತಂಡ ಸೇರಿದಂತೆ ಕಂಗನಾ ಅಭಿಮಾನಿಗಳು ಸಹ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಇನ್ನೂ ಕಂಗನಾ ಧಾಕಡ್ ಸಿನೆಮಾದಲ್ಲಿ ಶೀ ಈಸ್ ಆನ್ ಫೈರ್‍ ಎಂಬ ಸಾಂಗ್ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದೆ.

ಇನ್ನೂ ಕಂಗನಾರವರ ಸಿನೆಮಾ ಟ್ರೈಲರ್‍ ಇತ್ತೀಚಿಗಷ್ಟೆ ರಿಲೀಸ್ ಆಗಿತ್ತು. ಈ ಸಿನೆಮಾ ಟ್ರೈಲರ್‍ ಗೆ ಅನೇಕ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಧಾಕಡ್ ಟ್ರೈಲರ್‍ ಅನ್ನು ಮೆಚ್ಚಿದ್ದರು. ಬಾಲಿವುಡ್ ಸ್ಟಾರ್‍ ಸಲ್ಮಾನ್ ಖಾನ್  ಸಹ ಕಂಗನಾ ಟ್ರೈಲರ್‍ ಅನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದರು. ಇನ್ನೂ ಬಾಲಿವುಡ್ ಮೆಗಾಸ್ಟಾರ್‍ ಅಮಿತಾಭ್ ಬಚ್ಚನ್ ಸಹ ಧಾಕಡ್ ಸಿನೆಮಾ ಶಿ ಇಸ್ ಆನ್ ಫೈರ್‍ ಹಾಡನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಬಳಿಕ ಅದನ್ನು ಡಿಲೀಟ್ ಮಾಡಿದ್ದರು. ಇದಕ್ಕೆ ಕಂಗನಾ ಸಹ ಬಾಲಿವುಡ್ ಸ್ಟಾರ್‍ ನಟರಿಗೆ ನನ್ನನ್ನು ಕಂಡರೇ ಭಯ ಎಂದು ಹೇಳಿದ್ದರು. ಇನ್ನೂ ಈಗಾಗಲೇ ಬಾಲಿವುಡ್ ಸಿನೆಮಾಗಳು ಕಲೆಕ್ಷನ್ ಇಲ್ಲದೇ ಸಂಕಷ್ಟದಲ್ಲಿವೆ. ಇದೀಗ ಕಂಗನಾ ರವರ ಧಾಕಡ್ ಸಿನೆಮಾ ಆದರೂ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಧಾಕಡ್ ಸಿನೆಮಾದ ಪ್ರಚಾರ ಕಾರ್ಯಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಧಾಕಡ್ ಸಿನೆಮಾಗೆ ಸಕ್ಸಸ್ ಸಿಗಲಿ ಎಂದು ಕಂಗನಾ ಹಾಗೂ ನಿರ್ಮಾಪಕರು ತಿರುಮಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇನ್ನೂ ನಟಿ ಕಂಗನಾ ದೇವಾಯಲಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ದೇವಾಯಲದ ಸುತ್ತಮುತ್ತಲೂ ಬಿಗಿ ಭದ್ರತೆಯನ್ನು ಮಾಡಲಾಗಿತ್ತು. ಇನ್ನೂ ಕುಟುಂಬ ಸಮೇತರಾಗಿ ಬಂದ ಕಂಗನಾ ಬಾಲಾಜಿ ದರ್ಶನ ಪಡೆದಿದ್ದಾರೆ, ಇನ್ನೂ ಈ ಪೊಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

Previous articleಸರಳವಾಗಿ ಸೀಮಂತ ಮಾಡಿಕೊಂಡ ನಟಿ ಪ್ರಣಿತಾ ಸುಭಾಷ್…. ಪೊಟೋಗಳು ಸಖತ್ ವೈರಲ್…
Next articleಸಲಾರ್ ಸಿನೆಮಾದ ಹೊಸ ಪೋಸ್ಟರ್ ಬಿಡುಗಡೆ… ಪ್ರಭಾಸ್ ಸಹ ವೈಲೆನ್ಸ್ ಆಗಲಿದ್ದಾರೆ….