ಶೀಘ್ರದಲ್ಲೇ ಎರಡನೇ ಮದುವೆಯಾಗದಲಿದ್ದಾರಂತೆ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್…!

ಬಾಲಿವುಡ್ ನಲ್ಲಿ ಖ್ಯಾತ ಸ್ಟಾರ್‍ ನಟ ಹೃತಿಕ್ ರೋಷನ್ ತಮ್ಮ ಹೊಸ ಪ್ರೇಯಸಿ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯ ಬಾಲಿವುಡ್ ವಲಯದಲ್ಲಿ ಈ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ಮುಂಬೈ ಬಾಂದ್ರಾ ಎಂಬಲ್ಲಿ ಮೊದಲ ಬಾರಿ ಕಾಣಿಸಿಕೊಂಡಾಗ ಅವರ ರಿಲೇಷನ್ ಶಿಪ್ ಕುರಿತಂತೆ ದೊಡ್ಡ ದೊಡ್ಡ ರೂಮರ್ ಗಳೂ ಸಹ ಹುಟ್ಟಿಕೊಂಡವು. ಇನ್ನೂ ಇತ್ತೀಚಿಗಷ್ಟೆ ಈ ಜೋಡಿ ಫ್ರಾನ್ಸ್ ನಲ್ಲಿ ಸಖತ್ ಎಂಜಾಯ್ ಮಾಡಿತ್ತು. ಸದ್ಯ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಸುದ್ದಿ ಇದೀಗ ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ.

ಹಿಂದಿ ಸಿನಿರಂಗದ ಖ್ಯಾತ ನಟ ಹೃತಿಕ್ ರೋಷನ್ ಸುಸೇನ್ ಸಿಂಗ್ ರವರನ್ನು ಮದುವೆಯಾಗಿದ್ದರು. ಕೆಲವೊಂದು ಕಾರಣಗಳಿಂದ ಇವರಿಬ್ಬರೂ ಬೇರೆಯಾಗಿದ್ದಾರೆ. ಸದ್ಯ ಹೃತಿಕ್ ಸಬಾ ಎಂಬ ಯುವತಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಸುಮಾರು ಒಂದು ವರ್ಷದಿಂದ ಸಬಾ ಹಾಗೂ ಹೃತಿಕ್ ಡೇಟಿಂಗ್ ನಲ್ಲಿದ್ದಾರೆ. ಮೊದಲಿಗೆ ಕದ್ದು ಮುಚ್ಚಿ ಪ್ರೇಮ ಪಯಣ ಸಾಗಿಸುತ್ತಿದ್ದ ಈ ಜೋಡಿ ಇದೀಗ ಒಪೆನ್ ಆಗಿಯೇ ರಾಜಾರೋಷವಾಗಿ ಸುತ್ತಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವಿದೇಶಿ ಪ್ರಯಾಣ, ಮೋಜು-ಮಸ್ತಿ, ಪಬ್ ಹೀಗೆ ಎಲ್ಲಾ ಕಡೆ ಒಪೆನ್ ಆಗಿ ಸುತ್ತಾಡುತ್ತಿದ್ದಾರೆ. ಈ ಹಿಂದೆ ಫ್ರಾನ್ಸ್ ನಲ್ಲಿ ಸುತ್ತಾಡಿದ ಈ ಜೋಡಿ ಇದೀಗ ಲಂಡನ್ ಗೆ ಹಾರಿದ್ದಾರೆ. ಸದ್ಯ ಅಲ್ಲಿನ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಹೃತಿಕ್ ಹಾಗೂ ಸಬಾ ಸೋಷಿಯಲ್ ಮಿಡಿಯಾದಲ್ಲಿ ರೊಮ್ಯಾಂಟಿಕ್ ಪೊಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದೆ. ಇದೀಗ ಈ ಜೋಡಿಯ ಮದುವೆ ಕುರಿತಂತೆ ಸುದ್ದಿಗಳು ಹರಿದಾಡುತ್ತಿವೆ. ಶೀಘ್ರದಲ್ಲೇ ಹೃತಿಕ್ ಹಾಗೂ ಸಭಾ ಮದುವೆಯಾಗಲಿದ್ದಾರಂತೆ. ಇನ್ನೂ ಹೃತಿಕ್ ರವರ ಆಪ್ತರು ಸುದ್ದಿ ವಾಹಿನಿಯೊಂದಕ್ಕೆ ಶೀಘ್ರದಲ್ಲೇ ಹೃತಿಕ್ ಹಾಗೂ ಸಬಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೃತಿಕ್ ಹಾಗೂ ಸಬಾ ತುಂಬಾ ಅನ್ಯೋನ್ಯತೆಯಿಂದ ಪ್ರೀತಿ ಮಾಡುತ್ತಿದ್ದಾರೆ. ಹೃತಿಕ್ ರವರ ಕುಟುಂಬ ಸಹ ಸಬಾ ರನ್ನು ಒಪ್ಪಿಕೊಂಡಿದ್ದಾರೆ. ಹೃತಿಕ್ ರವರ ಕುಟುಂಬಕ್ಕೆ ಸಭಾ ರವರ ಸಂಗೀತದ ಕೆಲಸ ತುಂಬಾನೆ ಇಷ್ಟವಾಗಿದೆಯಂತೆ. ಈ ಹಿಂದೆ ಒಂದು ಬಾರಿ ಸಬಾ ಹೃತಿಕ್ ಮನೆಗೆ ಭೇಟಿ ನೀಡಿದ್ದರು. ಅಲ್ಲಿ ಏಕಾಏಕಿ ಸಬಾ ಹಾಡಿದ್ದರು. ಇದನ್ನು ಹೃತಿಕ್ ರವರ ಕುಟುಂಬಾ ತುಂಬಾನೆ ಮೆಚ್ಚಿಕೊಂಡಿದ್ದಾರೆ. ಇನ್ನೂ ಶೀಘ್ರದಲ್ಲೇ ಹೃತಿಕ್ ಹಾಗೂ ಸಭಾ ಮದುವೆಯಾಗಲಿದ್ದಾರೆ ಎಂದು ಆಪ್ತವಲಯದಿಂದ ತಿಳಿದು ಬಂದಿದೆ.

ಇನ್ನೂ ಹೃತಿಕ್ ಹಾಗೂ ಆತನ ಮಾಜಿ ಪತ್ನಿ ಸುಸೇನ್ ಖಾನ್ 14 ವರ್ಷಗಳ ಕಾಲ ಜೊತೆಯಲ್ಲಿ ಸಂಸಾರ ನಡೆಸಿದ್ದರು. ಕಳೆದ 2013 ರಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಂಡು, 2014 ರಲ್ಲಿ ಅಧಿಕೃತವಾಗಿ ಬೇರೆಬೇರೆಯಾಗಿದ್ದಾರೆ. ಸದ್ಯ  ಹೃತಿಕ್ ಹಾಗೂ ಸಬಾ ಆಜಾದ್ ಪ್ರೇಮ ಪಕ್ಷಿಗಳಂತೆ ಊರೂರು ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹಾಲಿಡೇಸ್ ಗಳನ್ನು ಒಟ್ಟಾಗಿ ಎಂಜಾಯ್ ಮಾಡುತ್ತಾರೆ. ಸದ್ಯ ಈ ಜೋಡಿಯ ಮದುವೆಯ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆಗಳು ನಡೆಯುತ್ತಿವೆ.

Previous articleಉಪಾಸನಾ ರವರಿಗೆ ಹುಟ್ಟುಹಬ್ಬದ ಸಂಭ್ರಮ, ಸುಂದರವಾದ ಫ್ಯಾಮಿಲಿ ಪೊಟೋ ವೈರಲ್…!
Next articleಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತು ಸಿದ್ದಾರ್ತ್ ಅದಿತಿ ಪೊಟೋಸ್ …!