ವೆಬ್ ಸರಣಿಗಾಗಿ ಟ್ರಾನ್ಸ್ಜೆಂಡರ್ ಆಗಿ ಬಣ್ಣ ಹಚ್ಚಿದ ಸೀನಿಯರ್ ನಟಿ ಸುಸ್ಮಿತಾ ಸೇನ್…!

ಮಾಜಿ ವಿಶ್ವ ಸುಂದರಿ ಬಾಲಿವುಡ್ ಸ್ಟಾರ್‍ ನಟಿ ಸುಸ್ಮಿತಾ ಸೇನ್ ವಯಸ್ಸಾದರೂ ಸಹ ಸಿನೆಮಾಗಳೂ ಹಾಗೂ ವೆಬ್ ಸೀರಿಸ್ ಗಳಲ್ಲಿ ನಟಿಸುತ್ತಾ ಇನ್ನೂ ತಾನು ಸಿನಿ ರಂಗದಲ್ಲಿ ಬ್ಯುಸಿಯಾಗಿಯೇ ಸಾಗುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಆರ್ಯ ಎಂಬ ವೆಬ್ ಸೀರಿಸ್ ಮೂಲಕ್ ಅಭಿಮಾನಿಗಳ ಮುಂದೆ ಬಂದಿದ್ದರು. ಈ ವೆಬ್ ಸೀರಿಸ್ ಬಳಿಕೆ ಆಕೆ ಮತ್ತೊಂದು ವಿಭಿನ್ನ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸೀರಿಸ್ ನಲ್ಲಿ ಸುಸ್ಮಿತಾ ಸೇನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕೆ ಸಿನಿ ಕೆರಿಯರ್‍ ನಲ್ಲಿ ಇದೊಂದು ವಿಭಿನ್ನ ಪಾತ್ರ ಎಂದೇ ಕರೆಯಲಾಗುತ್ತಿದೆ.

ನಟಿ ಸುಸ್ಮೀತಾ ಸೇನ್ ಒಟಿಟಿಯಲ್ಲೂ ಸಹ ಸಕ್ಸಸ್ ಪುಲ್ ಆಗಿ ಜರ್ನಿಯನ್ನು ಸಾಗಿಸುತ್ತಿದ್ದಾರೆ. ಆಕೆ ಅಭಿನಯದ ಆರ್ಯ ತುಂಬಾನೆ ಯಶಸ್ವಿಯಾಗಿತ್ತು. ಇದೀಗ ತಾಲಿ ಎಂಬ ಮತ್ತೊಂದು ವೆಬ್ ಸರಣಿಯಲ್ಲಿ ಆಕೆ ಕಾಣಿಸಿಕೊಳ್ಳಲಿದ್ದಾರೆ. ಆರ್ಯ ಸೀರಿಸ್ ನಲ್ಲಿ ಸುಸ್ಮಿತಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾಲಿ ಸಿರೀಸ್ ನಲ್ಲಿ ಟ್ರಾನ್ಸ್ಜೆಂಡರ್‍ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಸುಸ್ಮೀತಾ ಫಸ್ಟ್ ಲುಕ್ ಪೋಸ್ಟರ್‍ ರಿಲೀಸ್ ಆಗಿದ್ದು, ಪೋಸ್ಟರ್‍ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ. ಇನ್ನೂ ಸುಸ್ಮಿತಾ ಈ ವೆಬ್ ಸಿರೀಸ್ ಪೋಸ್ಟರ್‍ ಅನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋದಲ್ಲಿ ಸುಸ್ಮಿತಾ ಸೇನ್ ಕೆಂಪು ಹಾಗೂ ಹಸಿರು ಬಣ್ಣ ಸೀರೆ ಧರಿಸಿ ಚಪ್ಪಾಳೆ ತಟ್ಟುತ್ತಾ, ಹಣೆಯ ಮೇಲೆ ದೊಡ್ಡ ಬಿಂದಿ, ರೆಡ್ ಕಲರ್‍ ಲಿಪ್ ಸ್ಟಿಕ್ ಧರಿಸಿದ್ದಾರೆ. ಆಕೆಯ ಈ ಹೊಸ ಲುಕ್ ನಲ್ಲಿ ಕೋಪ ಸಹ ಎದ್ದು ಕಾಣುತ್ತಿದೆ.

ಇನ್ನೂ ತಾಲಿ ವೆಬ್ ಸರಣಿಯ ಟ್ರಾನ್ಸ್ಜೆಂಡರ್‍ ಕಾರ್ಯಕರ್ತೆ ಗೌರಿ ಸಾವಂತ್ ಎಂಬುವವರ ಜೀವನ ಚರಿತ್ರೆಯನ್ನು ಆಧರಿಸಿ ನಿರ್ಮಾಣ ಮಾಡಲಾಗುತ್ತಿದೆ. ಗೌರಿ ಸಾವಂತ್ ಪಾತ್ರದಲ್ಲಿ ಸುಸ್ಮಿತಾ ಸೇನ್ ಬಣ್ಣ ಹಚ್ಚಿದ್ದಾರೆ. ಈ ಸಿರೀಸ್ ಮೂಲಕ ಗೌರಿ ಹಾಗೂ ಅವರ ವೈಯುಕ್ತಿಕ ಜೀವನದ ಕುರಿತು ತಿಳಿದುಕೊಳ್ಳುವ ಅವಕಾಶವನ್ನು ಸಹ ಎಲ್ಲರಿಗೂ ದೊರಕಿಸಿಕೊಡುತ್ತಿದೆ. ಇನ್ನೂ ಈ ಪೋಸ್ಟ್ ಜೊತೆಗೆ ಸುಸ್ಮಿತಾ ಸುಂದರ ವ್ಯಕ್ತಿಯ ಜೀವನವನ್ನು ಚಿತ್ರಿಸಲು ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ.  ನನಗೆ ಇದಕ್ಕಿಂತ ಒಳ್ಳೆಯ ಅದೃಷ್ಟ ಬೇರೆಯದಿಲ್ಲ. ಇದು ಜೀವನ ಹಾಗೂ ಪ್ರತಿಯೊಬ್ಬರೂ ಗೌರವ ಹಾಗೂ ಘನತೆಯಿಂದ ಬದುಕುವ ಹಕ್ಕಿದೆ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಪೊಟೋ ಜೊತೆಗೆ ಬರೆದುಕೊಂಡಿದ್ದಾರೆ.

ಈ ಸೀರಿಸ್ ಆರು ಭಾಗಗಳಲ್ಲಿ ತೆರೆ ಕಾಣಲಿದೆ. ಇನ್ನೂ ಕೆಲವೊಂದು ಸುದ್ದಿಗಳ ಪ್ರಕಾರ ಈಗಾಗಲೇ ಈ ವೆಬ್ ಸರಣಿಯ ಶೂಟಿಂಗ್ ಕೆಲಸಗಳೂ ಸಹ ಪ್ರಾರಂಭವಾಗಿದೆ. ಈ ಸೀರಿಸ್ ಅನ್ನು ಮಾರಾಠಿ ನಿರ್ಮಾಪಕ ರವಿ ಜಾದವ್ ನಿರ್ದೇಶನ ಮಾಡುತ್ತಿದ್ದಾರೆ. ಗ್ಲೋಬಲ್ ಸ್ಪೋರ್ಟ್ಸ್ ಎಂಟರ್‍ ಟೈನ್ ಮೆಂಟ್ ಹಾಗೂ ಮಿಡಿಯಾ ಸೆಲ್ಯೂಷನ್ಸ್ ಬ್ಯಾನರ್‍ ನಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ವೂಟ್ ಒಟಿಟಿ ಫ್ಲಾಟ್ ಫಾರಂ ನಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.

Previous articleಶಾಕಿಂಗ್ ಸುದ್ದಿ ಹೊರಹಾಕಿದ ನೆನಪಿರಲಿ ಪ್ರೇಮ್, ಆ ಸಮಯದಲ್ಲಿ ಹೆಂಡತಿಯನ್ನು ತಾಳಿಯನ್ನು ಮಾರಿದ್ರಂತೆ…!
Next articleಮೈಮೇಲೆ ಬಟ್ಟೆಯಿಲ್ಲದೇ ಹಾಟ್ ಆಗಿ ಕಾಣಿಸಿಕೊಂಡ ಈಷಾ ಗುಪ್ತಾ, ಆ ಭಾಗ ಕಾಣಿಸುವಂತೆ ಪೋಸ್ ಕೊಟ್ಟ ನಟಿ…!