ಪ್ರಭಾಸ್ ರವರನ್ನು ಬಹಿರಂಗವಾಗಿಯೇ ಮದುವೆಯಾಗುತ್ತೀನಿ ಎಂದ ಬಾಲಿವುಡ್ ಸ್ಟಾರ್ ನಟಿ ಕೃತಿ ಸನೋನ್….!

ಟಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‍ ಗಳಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ಸಹ ಒಬ್ಬರಾಗಿದ್ದಾರೆ. ಈ ಹಿಂದೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿರವರು ಮದುವೆಯಾಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದರೂ ಸಹ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ, ಜೊತೆಗೆ ಅನುಷ್ಕಾ ಆಗಲಿ, ಪ್ರಭಾಸ್ ಆಗಲಿ ಈ ಬಗ್ಗೆ ಪ್ರತಿಕ್ರಿಯೇ ನೀಡಲೇ ಇಲ್ಲ. ಇದೀಗ ಪ್ರಭಾಸ್ ರವರನ್ನು ಬಹಿರಂಗವಾಗಿಯೇ ಮದುವೆಯಾಗುತ್ತೇನೆ ಎಂದು ಬಾಲಿವುಡ್ ಸ್ಟಾರ್‍ ನಟಿ ಕೃತಿ ಸನೋನ್ ತಿಳಿಸಿದ್ದು, ಸದ್ಯ ಆಕೆಯ ಹೇಳಿಕೆಗಳು ಹಾಟ್ ಟಾಪಿಕ್ ಆಗಿದೆ.

ಬಾಹುಬಲಿ ಖ್ಯಾತಿಯ ಪ್ರಭಾಸ್ ಹಾಗೂ ಕೃತಿ ಸನೋನ್ ಕಾಂಬಿನೇಷನ್ ನಲ್ಲಿ ಭಾರಿ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಆದಿಪುರುಷ್ ಸಿನೆಮಾ ತುಂಬಾನೆ ನಿರೀಕ್ಷೆ ಹು‌ಟ್ಟಿಸಿದೆ. ಇನ್ನೂ ಆದಿಪುರುಷ್ ಸಿನೆಮಾದ ಪೋಸ್ಟರ್‍, ಟ್ರೈಲರ್‍ ಸಹ ಇತ್ತೀಚಿಗೆ ಬಿಡುಗಡೆಯಾಗಿದ್ದು, ಅನೇಕ ವಿಮರ್ಶೆಗಳಿಗೂ ಹಾಗೂ ಟ್ರೋಲ್ ಗಳಿಗೂ ಸಹ ಗುರಿಯಾಗಿದೆ. ಇನ್ನೂ ಸದ್ಯ ಇವರಿಬ್ಬರ ಕೆಮಿಸ್ಟ್ರಿಯ ಬಗ್ಗೆ ಸಹ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಜೊತೆಗೆ ಇವರಿಬ್ಬರೂ ನಿಗೂಡವಾಗಿ ಡೇಟಿಂಗ್ ಸಹ ಮಾಡುತ್ತಿದ್ದಾರೆ ಎಂಬ ರೂಮರ್‍ ಗಳೂ ಸಹ ಕೇಳಿಬರುತ್ತಿದೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಪ್ರಭಾಸ್ ರವರನ್ನು ಮದುವೆಯಾಗುತ್ತೇನೆ ಎಂದು ಹೇಳುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಸದ್ಯ ಆಕೆಯ ಈ ಹೇಳಿಕೆ ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿದೆ.

ನಟಿ ಕೃತಿ ಸನೋನ್ ಹಾಗೂ ವರುಣ್ ಧವನ್ ಕಾಂಬಿನೇಷನ್ ನಲ್ಲಿ ಭೇಡಿಯಾ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಸದ್ಯ ಈ ಸಿನೆಮಾ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಹಾದಿಯಲ್ಲೇ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಆಂಕರ್‍ ಪ್ರಶ್ನೆ ಮಾಡುತ್ತಾ, ಪ್ರಭಾಸ್, ಟೈಗರ್‍ ಶ್ರಾಫ್, ಕಾರ್ತಿಕ್ ಈ ಮೂರು ನಟರಲ್ಲಿ ಮದುವೆ, ಫ್ಲರ್ಟ್, ಡೇಟಿಂಗ್ ಯಾರೊಂದಿಗೆ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಆಕೆ ಕ್ಷಣ ಮಾತ್ರ ಸಹ ಯೋಚಿಸದೇ ಫ್ಲರ್ಟ್ ಕಾರ್ತಿಕ್ ಆರ್ಯನ್ ಜೊತೆ ಮಾಡುತ್ತೀನಿ, ಡೇಟಿಂಗ್ ಟೈಗರ್‍ ಶ್ರಾಫ್ ಜೊತೆ ಮಾಡುತ್ತೀನಿ, ಪ್ರಭಾಸ್ ಜೊತೆಗೆ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ. ಸದ್ಯ ಆಕೆ ನೀಡಿರುವ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅವರ ಈ ವಿಡಿಯೋಗೆ ವಿಭಿನ್ನ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಕೆಲವರು ಇದು ನಿಜವಾಗಲಿ ಎಂದು ಶುಭ ಕೋರುತ್ತಿದ್ದರೇ, ಮತ್ತೆ ಕೆಲವರು ಬೇರೆ ರೀತಿಯಲ್ಲೇ ಕಾಮೆಂಟ್ ಗನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೃತಿ ಸನೋನ್ ವರುಣ್ ಧವನ್ ಜೊತೆಗೆ ಡೇಟಿಂಗ್ ನಡೆಸಿದ್ದಾಗಿ ಸಹ ರೂಮರ್‍ ಗಳು ಕೇಳಿಬಂದಿತ್ತು. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಕೃತಿ ಸನೋನ್ ರವರ ಈ ವಿಡಿಯೋ ವೈರಲ್ ಆಗುತ್ತಿದೆ.

Previous articleನೆವರ್ ಬಿಪೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಹಾಟ್ ಆಂಕರ್ ರಶ್ಮಿ, ಬೋಟ್ ನಲ್ಲಿ ವಿಹರಿಸುತ್ತಾ ಹಾಟ್ ಪೋಸ್…..!
Next articleಮತ್ತೊಮ್ಮೆ ಸ್ಯಾಂಡಲ್ ವುಡ್ ಸಿನೆಮಾಗೆ ಸದ್ದಿಲ್ಲದೆ ಎಂಟ್ರಿ ಕೊಟ್ಟ ಹಾಟ್ ಬ್ಯೂಟಿ ಸನ್ನಿಲಿಯೋನ್…..!