ಬಾಲಿವುಡ್ ಸ್ಟಾರ್ ನಟಿಯರಲ್ಲಿ ಕತ್ರಿನಾ ಕೈಫ್ ಟಾಪ್ ಸ್ಥಾನದಲ್ಲೇ ಇರುತ್ತಾರೆ. ಸ್ಟಾರ್ ನಟಿಯಾಗಿ ಸುದೀರ್ಘ ಕಾಲದಿಂದ ಕೆರಿಯರ್ ಸಾಗಿಸುತ್ತಿದ್ದಾರೆ. ಎರಡು ದಶಕಗಳಿಂದಲೂ ಆಕೆ ಬಾಲಿವುಡ್ ನಲ್ಲಿ ಬೇಡಿಕೆಯುಳ್ಳ ನಟಿಯಾಗಿ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಕತ್ರಿನಾ ಕೈಫ್ ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್ ಜೊತೆಗೆ ಸಪ್ತಪದಿ ತುಳಿದರು. ಸಾಮಾನ್ಯವಾಗಿ ಮದುವೆಯಾದ ಬಳಿಕ ನಟಿಯರಿಗೆ ಬೇಡಿಕೆ ಕಡಿಮೆಯಾಗಬಹುದು ಆದರೆ ಕತ್ರಿನಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬದಲಿಗೆ ಹೆಚ್ಚಾಗಿದ್ದು, ಬರೊಬ್ಬರೊ 12 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಸಿನಿರಂಗದ ಟ್ರೆಂಡ್ ಬದಲಾಗುತ್ತಿದೆ ಎಂದು ಹೇಳಬಹುದಾಗಿದೆ. ಸಿನಿರಂಗದಲ್ಲಿ ನಟಿಯರು ಸೀನಿಯರ್ ಆಗುತ್ತಿದ್ದಂತೆ ಅವರ ಬೇಡಿಕೆ ಸಹ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಇನ್ನೂ ಕತ್ರಿನಾ ಕೈಫ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು 20 ವರ್ಷಗಳಿಗೂ ಅಧಿಕವಾಗಿದೆ. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಕ್ರೇಜ್ ಗೆ ತಕ್ಕಂತೆ ದೊಡ್ಡ ಮೊತ್ತದ ಸಂಭಾವನೆ ಸಹ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಆಕೆ ಪಡೆದುಕೊಂಡ ಸಂಭಾವನೆಯ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಬಾಲಿವುಡ್ ನಲ್ಲಿ ಕೆಲವೇ ನಟಿಯರು ಹತ್ತು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕತ್ರಿನಾ ಮಾತ್ರ ಒಂದು ಸಿನೆಮಾಗೆ ಬರೊಬ್ಬರಿ 12 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರಂತೆ. ಮದುವೆಯಾದರೂ ಸಹ ಆಕೆ ಅಷ್ಟೊಂದು ಸಂಭಾವನೆ ಪಡೆದುಕೊಳ್ಳುತ್ತಿರುವ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿ ವೈರಲ್ ಆಗುತ್ತಿದೆ.
ಇನ್ನೂ ಕತ್ರಿನಾಗೆ ಬಾಲಿವುಡ್ ನಲ್ಲಿ ಇತ್ತೀಚಿಗೆ ಅಂದುಕೊಂಡಷ್ಟು ಸಕ್ಸಸ್ ಬರುತ್ತಿಲ್ಲ. ಇನ್ನೂ ಈ ಹಿಂದೆಗೆ ಹೋಲಿಕೆ ಮಾಡಿಕೊಂಡರೇ ಇತ್ತೀಚಿಗೆ ಹಿಂದಿ ಸಿನೆಮಾಗಳ ಬಜೆಟ್ ಸಹ ಕಡಿಮೆಯಾಗಿದೆ ಎನ್ನಬಹುದಾಗಿದೆ. ಆದರೂ ಸಹ ಕತ್ರಿನಾ ಮಾತ್ರ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಇನ್ನೂ ಕೆಲವೊಂದು ಸುದ್ದಿಗಳೂ ಸಹ ಬರುತ್ತಿದ್ದು, ಅದರಂತೆ ಕತ್ರಿನಾ ರವರಿಗಿಂತ ಹೆಚ್ಚಿನ ಸಂಭಾವನೆಯನ್ನು ದೀಪಿಕಾ ಪಡುಕೋಣೆ ಹಾಗೂ ಆಲಿಯಾಭಟ್ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಐಶ್ವರ್ಯ ರೈ ರವರೂ ಸಹ ಸಿನೆಮಾ ಒಂದಕ್ಕೆ ಹತ್ತು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಉಳಿದವರು ಐದರಿಂದ ಆರು ಕೋಟಿ ಸಂಭಾವನೆ ಪಡೆದುಕೋಳ್ಳುತ್ತಿದ್ದಾರೆ. ಆದರೆ ಕತ್ರಿನಾ ಕೈಫ್ ಮಾತ್ರ 12 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ ಎನ್ನಬಹುದಾಗಿದೆ.
ಇನ್ನೂ ಕತ್ರಿನಾ ಕೈಫ್ ಇತ್ತೀಚಿಗಷ್ಟೆ ಪೋನ್ ಭೂತ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಕ್ರೇಜ್ ಹೆಚ್ಚಿಸಿಕೊಳ್ಳುತ್ತಾ, ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ.
