Film News

ಈ ಬಾರಿ ಲಕ..ಲಕ…ಲಕ… ಅನ್ನೋದು ಆ ಬಾಲಿವುಡ್ ಸ್ಟಾರ್ ನಟಿಯಂತೆ, ಚಂದ್ರಮುಖಿ 2 ಸಿನೆಮಾದಲ್ಲಿ ಬಾಲಿವುಡ್ ಫೈರ್ ಸ್ಟಾರ್….!

ಲಕ ಲಕ ಲಕ ಎಂಬ ಪದ ಕೇಳಿಬಂದಾಕ್ಷಣ ಎಲ್ಲಿರಿಗೂ ನೆನಪಾಗುವುದು ಚಂದ್ರಮುಖಿ ಸಿನೆಮಾ. ತಮಿಳಿನ ಸೂಪರ್‍ ಸ್ಟಾರ್‍ ರಜನಿಕಾಂತ್ ನಾಯಕನಾಗಿ ಕಾಣಿಸಿಕೊಂಡ ಈ ಸಿನೆಮಾದಲ್ಲಿ ಜ್ಯೋತಿಕಾ ಚಂದ್ರಮುಖಿಯಾಗಿ ಎಲ್ಲರನ್ನೂ ಭಯಪಡಿಸಿದ್ದರು. ಕಳೆದ 2005ರಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದು, ಭರ್ಜರಿಯಾಗಿ ಪ್ರದರ್ಶನ ಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ಅದೇ ಸಮಯದಲ್ಲಿ ಈ ಸಿನೆಮಾಗೆ ಸೀಕ್ವೆಲ್ ಇರಲಿದೆ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಅದರ ಸೀಕ್ವೆಲ್ ಸೆಟ್ಟೇರಲು ಸಿದ್ದವಾಗುತ್ತಿದೆ.

ಕಳೆದ 2005 ರಲ್ಲಿ ತೆರೆಕಂಡ ಚಂದ್ರಮಖಿ ಸಿನೆಮಾದಲ್ಲಿ ರಜನಿಕಾಂತ್, ನಯನತಾರಾ, ಜ್ಯೋತಿಕಾ, ಪ್ರಭು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು. ಈ ಸಿನೆಮಾದವನ್ನು ಕನ್ನಡದಲ್ಲಿ ಆಪ್ತಮಿತ್ರ ಎಂಬ ಹೆಸರಿನಲ್ಲಿ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದರು. ಚಂದ್ರಮುಖಿ ಸಿನೆಮಾ ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಅಪಾರ ಸಂಖ್ಯೆಯ ಸಿನೆಮಾ ಪ್ರೇಕ್ಷಕರನ್ನು ರಂಜಿಸಿತ್ತು. ಹಾರರ್‍, ಕಾಮಿಡಿ, ಲವ್ ಎಲ್ಲವನ್ನು ಒಳಗೊಂಡ ಈ ಸಿನೆಮಾ ಬಾಕ್ಸ್ ಆಫಿಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ಬಳಿಕ ಈ ಸಿನೆಮಾದ ಸೀಕ್ವೆಲ್ ಬರುವುದಾಗಿ ಆಗ ಸುದ್ದಿಗಳು ಕೇಳಿಬಂದಿದ್ದವು. ಆದರೆ ರಜನಿಕಾಂತ್ ರವರು ಸೀಕ್ವೆಲ್ ಬಗ್ಗೆ ಹೆಚ್ಚು ಗಮನ ಕೊಡದ ಕಾರಣ ಸೀಕ್ವೆಲ್ ಅಲ್ಲಿಗೆ ನಿಂತುಹೋಯಿತು.  ಸಿನೆಮಾ ಬಿಡುಗಡೆಯಾಗಿ ವರ್ಷಗಳು ಕಳೆದು ಹೋಗಿದೆ. ಈಗ ಸೀಕ್ವೆಲ್ ಸೆಟ್ಟೇರಲಿದೆ. ಚಂದ್ರಮುಖಿ ಸಿನೆಮಾದಲ್ಲಿ ಜ್ಯೋತಿಕಾ ಚಂದ್ರಮುಖಿಯಾಗಿ ಎಲ್ಲರನ್ನು ಭಯಪಡಿಸಿದ್ದರು. ಇದೀಗ ಆಕೆಯ ಮಾದರಿಯಲ್ಲೇ ಬಾಲಿವುಡ್ ನ ಸ್ಟಾರ್‍ ನಟಿಯೊಬ್ಬರು ಚಂದ್ರಮುಖಿಯಾಗಿ ಭಯಪಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಚಂದ್ರಮುಖಿ ಸೀಕ್ವೆಲ್ ನಲ್ಲಿ ರಜನಿಕಾಂತ್ ರವರ ಪಾತ್ರದಲ್ಲಿ ರಾಘವ ಲಾರೆನ್ಸ್ ನಟಿಸಲಿದ್ದಾರೆ. ಚಂದ್ರಮುಖಿ ಪಾತ್ರದಲ್ಲಿ ಯಾವ ನಟಿಯಾದರೇ ಸೂಕ್ತ ಎಂದು ಅನೇಕ ದಿನಗಳಿಂದ ಚಿತ್ರತಂಡ ಹುಡುಕಾಡಿತ್ತು. ಚಂದ್ರಮುಖಿ 2 ಸಿನೆಮಾದಲ್ಲಿ ಸ್ಟಾರ್‍ ಬಾಲಿವುಡ್ ನಟಿ ಕಂಗನಾ ರಾಣಾವತ್ ಚಂದ್ರಮುಖಿ ಪಾತ್ರ ಪೋಷಿಸಲಿದ್ದಾರಂತೆ. ಚಂದ್ರಮುಖಿ ಪಾತ್ರ ಪೋಷಣೆ ಮಾಡಲು ಕ್ಲಾಸಿಕಲ್ ಡ್ಯಾನ್ಸ್ ಕಡ್ಡಾಯವಾಗಿ ಬರಬೇಕಿದೆ. ಕ್ಲಾಸಿಕಲ್ ಡ್ಯಾನ್ಸ್ ಮಾಡುವುದರಲ್ಲಿ ಕಂಗನಾ ರಾಣಾವತ್ ಒಳ್ಳೆಯ ಹಿಡಿತ ಇರುವ ಹಿನ್ನೆಲೆಯಲ್ಲಿ ಆಕೆಯನ್ನು ಚಿತ್ರತಂಡ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಚಂದ್ರಮುಖಿ ಸೀಕ್ವೆಲ್ ನಲ್ಲಿ ಕಂಗನಾ ರಾಜನರ್ತಕಿಯಾಗಲಿದ್ದಾರೆ. ಇಡೀ ಸಿನೆಮಾಗೆ ಕಂಗನಾ ಪಾತ್ರ ಹೈಲೈಟ್ ಆಗಿರಲಿದೆ ಎನ್ನಲಾಗುತ್ತಿದೆ.

ಇನ್ನೂ ಕಂಗನಾ ರವರೇ ಈ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದರು. ಚಂದ್ರಮುಖಿ ಸೀಕ್ವೆಲ್ ನಲ್ಲಿ ನಟಿಸುತ್ತಿರುವುದಾಗಿ ಆಕೆ ತಿಳಿಸಿದ್ದರು. ಇನ್ನೂ ಕಂಗನಾ ಇತ್ತೀಚಿಗೆ ಸಿನೆಮಾಗಳಲ್ಲಿ ಜೋರು ಕಡಿಮೆ ಮಾಡಿದ್ದಾರೆ. ಆದರೆ ಅನೇಕ ಕಾಂಟ್ರವರ್ಸಿ ವಿಚಾರಗಳ ಮೂಲಕ ಸದಾ ಸುದ್ದಿಯಲ್ಲೇ ಇರುತ್ತಾರೆ. ಇನ್ನೂ ಸಿನಿರಂಗದಲ್ಲಿ ಆಕೆಯನ್ನು ಫೈರ್‍ ಬ್ರಾಂಡ್ ಎಂತಲೇ ಕರೆಯಲಾಗುತ್ತದೆ. ಆಕೆ ಚಂದ್ರಮುಖಿಯ ಪಾತ್ರಕ್ಕೆ ತಕ್ಕಂತ ಆಯ್ಕೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ. ಶೀಘ್ರದಲ್ಲೇ ಈ ಸಿನೆಮಾ ಸೆಟ್ಟೇರಲಿದೆ ಎಂದು ತಿಳಿದುಬಂದಿದೆ.

Trending

To Top