Categories: Uncategorized

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಸಂಬಂಧದ ಬಗ್ಗೆ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದು ಏನು?

ಬಾಲಿವುಡ್ ನಲ್ಲಿ ವಿವಾದದ ಮೂಲಕವೇ ತುಂಬಾ ಸುದ್ದಿಯಾದ ಶೋಗಳಲ್ಲಿ ಕಾಫಿ ವಿತ್ ಕರಣ್ ಶೋ ಮುಂದಿರುತ್ತದೆ. ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್‍ ಈ ಶೋ ಹೋಸ್ಟ್ ಮಾಡುತ್ತಾರೆ. ಕಾಫಿ ವಿತ್ ಕರಣ್ ಸೀಸನ್ 7 ರಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದು, ಅನೇಕ ವಿಚಾರಗಳು ಈ ಶೋ ನಿಂದಲೇ ಹೊರಬಂದಿದೆ. ಇದೀಗ ಈ ಕಾರ್ಯಕ್ರಮ ಮುಕ್ತಾಗೊಂಡಿದ್ದು, ಸ್ಪೇಷಲ್ ಸಂಚಿಕೆ ಇದೀಗ ಪ್ರಸಾರಗೊಂದಿದೆ. ಈ ವಿಶೇಷ ಸಂಚಿಕೆಯಲ್ಲಿ ಕರಣ್ ಜೋಹರ್‍ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

ಈ ವಿಶೇಷ ಸಂಚಿಕೆಯಲ್ಲಿ ಸೊಷಿಯಲ್ ಮಿಡಿಯಾ ಮೂಲಕ ಖ್ಯಾತಿ ಪಡೆದುಕೊಂಡ ಡ್ಯಾನಿಶ್ ಸೇಠ್, ಕೆ.ಎಂ.ನಿಹಾರಿಕಾ, ಪುಷ್ಪಾ ಕಪಿಲಾ ಹಾಗೂ ತನ್ಮಯ್ ಭಟ್ ಸಹ ಭಾಗಿಯಾಗಿದ್ದಾರೆ. ಈ ಕಾರಣಕ್ಕಾಗಿ ಈ ವಿಶೇಷ ಸಂಚಿಕೆ ವಿಶೇಷವಾಗಿಯೇ ಇತ್ತು ಎನ್ನಲಾಗಿದೆ. ಈ ಸಂಚಿಕೆಯಲ್ಲಿ ಕರಣ್ ಜೋಹರ್‍ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ನನಗೆ ತುಂಬಾ ಒಳ್ಳೆಯ ಸ್ನೇಹಿತರು ಆದರೆ ಅವರು ನನ್ನನ್ನು ಮದುವೆಗೆ ಆಹ್ವಾನಿಸಲೇ ಇಲ್ಲ ಎಂದು ಬೇಸರ ಹೊರಹಾಕಿದರು. ವಿಕ್ಕಿ ಕೌಶಲ್ ಸಿನಿ ಜರ್ನಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೈರೆಕ್ಟರ್‍ ಅನುರಾಗ್ ಕಶ್ಯಪ್ ರವರನ್ನು ಸಹ ಮದುವೆಗೆ ಆಹ್ವಾನಿಸದ ಕಾರಣ ನನಗೆ ಕೊಂಚ ನೆಮ್ಮದಿ ಆಯಿತು ಎಂದಾಗ, ಇದಕ್ಕೆ ಶೋ ನಲ್ಲಿದ್ದ ನಿಹಾರಿಕಾ ಸಹ ಯೋಚನೆ ಮಾಡಬೇಡಿ, ನನ್ನ ಮದುವೆಗೆ ನಿಮ್ಮನ್ನು ಖಂಡಿತವಾಗಿ ಆಹ್ವಾನಿಸುತ್ತೇನೆ ಎಂದಿದ್ದಾರೆ.

ಬಳಿಕ ಕರಣ್ ಮಾತನಾಡಿ ಇನ್ನೂ ಪ್ರಭಾಸ್ ಸಿಂಗಲ್ ಆಗಿಯೇ ಇದ್ದಾರೆ ಮದುವೆ ಆಗುತ್ತಿರಾ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ನಿಹಾರಿಕಾ ನನಗೆ ಇನ್ನೂ 25 ವರ್ಷ ವಯಸ್ಸು ಮನೆಯಲ್ಲಿ ಈ ಮದುವೆಗೆ ಒಪ್ಪುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನಿರದ ಕರಣ್ ವಿಜಯ್ ದೇವರಕೊಂಡ ಸಹ ಸಿಂಗಲ್ ಆಗಿದ್ದಾರೆ ಟ್ರೈ ಮಾಡುತ್ತೀರಾ ಎಂದಿದ್ದಾರೆ. ಈ ಸಮಯದಲ್ಲಿ ಮಧ್ಯೆ ಎಂಟ್ರಿ ಕೊಟ್ಟ ಕುಶಾ ಕಪಿಲಾ ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಡೇಟಿಂಗ್ ನಲ್ಲಿ ಇರಬಹುದು ಎಂದಿದ್ದಾರೆ. ಗೀತಾಗೊವಿಂದಂ ಹಾಗೂ ಡಿಯರ್‍ ಕಾಮ್ರೆಡ್ ಸಿನೆಮಾಗಳಲ್ಲಿ ನಟಿಸಿದ ಬಳಿಕ ಇವರಿಬ್ಬರೂ ಪ್ರೇಮ ಪಯಣ ಸಾಗಿಸುತ್ತಿರಬಹುದು ಎಂದಿದ್ದಾರೆ.

ಇನ್ನೂ ಕುಶಾ ಕಪಿಲಾ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಇದೊಂದು ಊಹೆ ಅಷ್ಟೆ. ವಿಜಯ್ ದೇವರಕೊಂಡ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ಆತ ಸಿಂಗಲ್ ಆಗಿದ್ದಾನೆ. ಆತ ಸಿಂಗಲ್ ಸಿಂಗಲ್ ಎಂಬ ಪದವನ್ನು ಒತ್ತಿ ಹೇಳಿದ್ದಾರೆ ಕರಣ್ ಜೋಹರ್‍. ಈ ಹೇಳಿಕೆಯಿಂದಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಪ್ರೇಮ ಸಂಬಂಧ ಇಲ್ಲ ಎಂದು ಕರಣ್ ಸಾರಿ ಹೇಳಿದಂತಿದೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಒಂಟಿಯಾಗಿರಲು ತುಂಬಾ ಬೋರ್ ಆಗುತ್ತಿದೆ, ಜೊತೆ ಬೇಕು ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಪೋಸ್ಟ್…!

ತೆಲುಗು ಕಿರುತೆರೆಯ ಸ್ಟಾರ್‍ ಅಂಡ್ ಹಾಟ್ ಆಂಕರ್‍ ಗಳಲ್ಲಿ ರಶ್ಮಿ ಒಬ್ಬರಾಗಿದ್ದು, ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ…

18 mins ago

ಅದ್ದೂರಿಯಾಗಿ ನಡೆದ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಮೆಹಂದಿ ಕಾರ್ಯಕ್ರಮ, ವೈರಲ್ ಆದ ಪೊಟೋಸ್…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಹನ್ಸಿಕಾ ಮೊಟ್ವಾನಿ ಹಾಗೂ ಖ್ಯಾತ ಉದ್ಯಮಿ ಸೊಹೈಲ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ.ಇದೀಗ ಆಕೆಯ ಮೆಹಂದಿ…

2 hours ago

ಬಾಲಕೃಷ್ಣ ನನಗೆ ದೇವರು ಕೊಟ್ಟ ಅಣ್ಣ ಎಂದ ದುನಿಯಾ ವಿಜಯ್, ಎಮೋಷನಲ್ ಆದ ವಿಜಯ್….!

ಅಖಂಡ ಸಿನೆಮಾದ ಬಳಿಕ ನಂದಮೂರಿ ಬಾಲಕೃಷ್ಣ ರವರ ಮುಂದಿನ ಸಿನೆಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಸದ್ಯ ಬಾಲಯ್ಯ…

4 hours ago

ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ಲೇಟೆಸ್ಟ್ ಪೊಟೋಸ್ ವೈರಲ್, ಆಕೆ ಈಗ ಹೇಗಿದ್ದಾರೆ ನೋಡಿದ್ದೀರಾ?

ಮೊದಲನೆ ಸಿನೆಮಾದ ಮೂಲಕವೇ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಳ್ಳುವ ನಟಿಯರಲ್ಲಿ ಕೆಲವರೇ ಇರುತ್ತಾರೆ. ಈ ಸಾಲಿಗೆ ಶ್ವೇತಾ ಬಸು ಸಹ…

5 hours ago

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್ ..…!

ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ನಟಿಯರಿಗೆ ಅನೇಖ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಹೆಚ್ಚಾಗಿ ಡಿಪ್ರೆಷನ್…

6 hours ago

ಎರಡನೇ ಮದುವೆ ರೂಮರ್ ಬಗ್ಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೀನಿಯರ್ ನಟಿ ಮೀನಾ…!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ದಶಕಗಳ ಕಾಲ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡುವ ಮೂಲಕ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ.…

7 hours ago