News

(video)ಶಾರುಖ್ ಖಾನ್, ದೀಪಿಕಾ, ಐಶ್ವರ್ಯ, ರಜನಿಕಾಂತ್ ಹೇಗೆ ಕನ್ನಡ ಮಾತಾಡ್ತಾರೆ ನೋಡಿ! ಹೆಮ್ಮೆಯಿಂದ ಶೇರ್ ಮಾಡಿ

kannadiga

ಇತ್ತೀಚಿಗೆ ನಮ್ಮ ಕನ್ನಡ ಭಾಷೆಯ ಚಿತ್ರಗಳನ್ನು ಇಡೀ ದೇಶವೇ ನೋಡುತ್ತಿದೆ. ಇತ್ತೀಚಿಗೆ ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಫ್ ಚಿತ್ರದಿಂದ ಇಡೀ ದೇಶವೇ ಕನ್ನಡ ಚಿತ್ರದ ಕಡೆ ತಿರುಗಿ ನೋಡಿದೆ, ಇದಲ್ಲದೆ ಉತ್ತರ ಭಾರತದಲ್ಲಿ, ಬೇರೆ ಬೇರೆ ರಾಜ್ಯಗಳಲ್ಲಿ, ಕನ್ನಡ ಚಿತ್ರಗಳನ್ನು ನೋಡಲು ಅಲ್ಲಿನ ಜನ ಕೂಡ ಅಲ್ಪ ಸ್ವಲ್ಪ ಕನ್ನಡ ಕಲಿಯುತ್ತಾರೆ. ಕೆಲವು ಬಾಲಿವುಡ್ ತಾರೆಯರು, ತಮಿಳು ಹಾಗು ತೆಲುಗು ಭಾಷೆಯ ಸೂಪರ್ ಸ್ಟಾರ್ ಗಳು ಕನ್ನಡವನ್ನು ಹೇಗೆ ಮಾತಾಡಿದ್ದಾರೆ ಗೊತ್ತ? ಬಹಳಷ್ಟು ಬಾಲಿವುಡ್ ಸೆಲೆಬ್ರಿಟಿಗಳಿಗೆ ಕನ್ನಡ ಬರುತ್ತದೆ! ಬಾಲಿವುಡ್ ನಟ ಹಾಗು ನಟಿಯರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಸನ್ನಿ ಲಿಯೋನ್, ಗೋವಿಂದ , ಅಭಿಷೇಕ್ ಬಚ್ಚನ್ ಹಾಗು ಇನ್ನಷ್ಟು ನಟ ಹಾಗು ನಟಿಯರು ಕನ್ನಡ ದಲ್ಲಿ ಮಾತಾಡಿದ್ದಾರೆ. ಅವರು ಎಷ್ಟು ಚನ್ನಾಗಿ ಕನ್ನಡ ಮಾತಾಡ್ತಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ಹಾಗು ಇದನ್ನು ಹೆಮ್ಮೆಯಿಂದ ಶೇರ್ ಮಾಡಿರಿ
ಮೊದಲಿಗೆ ದೀಪಿಕಾ ಪಡುಕೋಣೆ ಹಾಗು ಶಾರುಖ್ ಖಾನ್! ನಿಮಗೆಲ್ಲ ಗೊತ್ತಿರೋ ಹಾಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದ್ದು ಕನ್ನಡದಲ್ಲಿ. ಹೌದು! ನಮ್ಮ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ದೀಪಿಕಾ ಪಡುಕೋಣೆ ಅವರು ಐಶ್ವರ್ಯ ಎಂಬ ಚಿತ್ರದಲ್ಲಿ ನಟಿಸಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಈ ಹಿಂದೆ ಮಾಡೆಲ್ಲಿಂಗ್ ಮಾಡುತಿದ್ದ ದೀಪಿಕಾ ಪಡುಕೋಣೆ ಅವರಿಗೆ ಕನ್ನಡದಲ್ಲಿ ಮೊಟ್ಟ ಮೊದಲ ಅವಕಾಶ ಸಿಕ್ಕಿತ್ತು. ಇದಾದ ನಂತರ ಅವರಿಗೆ ಬಾಲಿವುಡ್ ನಲ್ಲಿ ಬಹಳಷ್ಟು ಆಫರ್ಗಳು ಬಂದು ಈಗ ನಮ್ಮ ದೇಶದ ಬೆಸ್ಟ್ ನಟಿಯರಲ್ಲಿ ಒಬ್ಬರು! ದೀಪಿಕಾ ಪಡುಕೋಣೆ ಅವರು ಮೂಲತಃ ಬೆಂಗಳೂರಿನವರು, ಆದ್ದರಿಂದ ದೀಪಿಕಾ ಬಹಳ ಚನ್ನಾಗಿ, ಸ್ಪಷ್ಟವಾಗಿ ಕನ್ನಡ ಮಾತಾಡುತ್ತಾರೆ.
ನಮ್ಮ ಭಾರತದ ಮತ್ತೊಬ್ಬ ಫೇಮಸ್ ನಟಿ ಎಂದರೆ ಅದು, ಐಶ್ವರ್ಯ ರಾಯ್! ಐಶ್ವರ್ಯ ರಾಯ್ ಅವರು ಮೂಲತಃ ಮಂಗಳೂರಿನವರು. ಇವರ ಮಾತೃ ಭಾಷೆ ತುಳು ಆಗಿದ್ದರೂ ಕೂಡ ಐಶ್ವರ್ಯ ಅವರು ಬಹಳ ಚನ್ನಾಗಿ ಕನ್ನಡ ಮಾತಾಡುತ್ತಾರೆ. ಇದಲ್ಲದೆ ಬಾಲಿವುಡ್ ಟಾಪ್ ನಟಿ ಆಗಿದ್ದ ಶಿಲ್ಪ ಶೆಟ್ಟಿ ಅವರು ಕೂಡ ಮಂಗಳೂರಿನವರು. ಇವರು ಕೂಡ ಬಹಳ ಚನ್ನಾಗಿ ಕನ್ನಡದಲ್ಲಿ ಮಾತಾಡುತ್ತಾರೆ, ಹಾಗು ಸುಮಾರು ಕನ್ನಡ ಚಿತ್ರ ಗಳಲ್ಲಿ ಶಿಲ್ಪ ಶೆಟ್ಟಿ ನಟಿಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿ ಗಳಾದ, ಸುನಿಲ್ ಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ, ಶಮಿತಾ ಶೆಟ್ಟಿ, ಡಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ ಅವರು ಕೂಡ ನಮ್ಮ ಮಂಗಳೂರಿನವರು. ಇವರೆಲ್ಲ ಬಹಳ ಚನ್ನಾಗಿ ಕನ್ನಡ ಮಾತಾಡ್ತಾರೆ.
ಇದಲ್ಲದೆ ಬಾಲಿವುಡ್ ನಲ್ಲಿ ಫೇಮಸ್ ಆದ ನಟಿ ಅನುಷ್ಕಾ ಶರ್ಮ ಅವರು ಕೂಡ ಬೆಂಗಳೂರಿನಲ್ಲಿ ಮಾಡೆಲ್ಲಿಂಗ್ ಮಾಡಿದ್ದರು, ಇದೆ ಕಾರಣದಿಂದ ಅವರಿಗೆ ಕೂಡ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ಇದಲ್ಲದೆ ತೆಲುಗು ಚಿತ್ರಗಳ ಟಾಪ್ ಹೀರೋಯಿನ್ ಆದ ಅನುಷ್ಕಾ ಶೆಟ್ಟಿ ಅವರು ಕೂಡ ನಮ್ಮ ಕರಾವಳಿಯವರು. ಇವರು ಕೂಡ ಬಹಳ ಸ್ಪಷ್ಟವಾಗಿ ಕನ್ನಡ ಮಾತಾಡುತ್ತಾರೆ. ಈ ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top