Film News

ಹೊಸ ವರ್ಷ ಆಚರಣೆಗಾಗಿ ಮುಂಬೈ ಬಿಟ್ಟ ಬಾಲಿವುಡ್ ಜೋಡಿ

ಮುಂಬೈ: ಬಾಲಿವುಡ್ ನ ತಾರಾ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಹೊಸ ವರ್ಷದ ಆಚರಣೆ ನಿಮಿತ್ತ ಮುಂಬೈ ಬಿಟ್ಟು ಬೇರೆಡೆಗೆ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ.

ಹೌದು ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದುಕೊಂಡು ಪ್ರತ್ಯಕ್ಷವಾಗಿದ್ದಾರೆ. ಇನ್ನೂ ಈ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಹೊಸ ವರ್ಷಕ್ಕೆ ಇನ್ನೂ ೨ ದಿನಗಳಿರುವಾಗಲೇ ಮುಂಬೈನ್ನು ಬಿಟ್ಟ ಜೋಡಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಎಲ್ಲಿ ಆಚರಿಸಲಿದ್ದಾರೆ ಎಂಬ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ವಿಮಾನ ನಿಲ್ದಾಣದಲ್ಲಿ ಜೋಡಿ ಇಬ್ಬರೂ ಲಾಂಗ್ ಕೋಟ್ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಜೊತೆಗೆ ದೀಪಿಕಾ ಪಡುಕೊಣೆ ಕೈಯಲ್ಲಿ ಸಣ್ನದಾದ ಬ್ಯಾಗ್ ಹಾಗೂ ರಣ್ವೀರ್ ಕೈಯಲ್ಲಿ ಮತ್ತೊಂದು ಬ್ಯಾಗ್ ಇತ್ತು. ಪ್ರಸ್ತುತ ಈ ಬಾಲಿವುಡ್ ಜೋಡಿ ಯಾವ ಪ್ರದೇಶದಲ್ಲಿ ಹೊಸ ವರ್ಷ ಆಚರಿಸಲಿದ್ದಾರೆ ಎಂಬುದು ಸದ್ಯದ ಹಾಟ್ ಟಾಪಿಕ್ ಆಗಿದೆ ಎಂತಲೇ ಹೇಳಬಹುದು.

Trending

To Top