ಬಾಲಿವುಡ್ ಬಿಗ್ ಬಿ ಹೈದರಾಬಾದ್ ಮೆಟ್ರೋ ಸ್ಟೇಷನ್ ನಲ್ಲಿ.. ಬಿಗ್ ಬಿ ಬಂದಿದ್ದಾರೂ ಏಕೆ?

ಬಾಲಿವುಡ್ ಸಿನಿರಂಗದಲ್ಲಿ ದೊಡ್ಡ ವ್ಯಕ್ತಿ ಮೆಗಾಸ್ಟಾರ್‍ ಎಂತಲೇ ಕರೆಯಲಾಗುವ ಅಮಿತಾಭ್ ಬಚ್ಚನ್ ಹೈದರಾಬಾದ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಗಾಗ ಸೆಲೆಬ್ರೆಟಿಗಳೂ ಸಹ ಸಾಮಾನ್ಯರಂತೆ ಹೊರ ಪ್ರಪಂಚದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಶೂಟಿಂಗ್ ನಿಮಿತ್ತ ದೊಡ್ಡ ದೊಡ್ಡ ಸ್ಟಾರ್‍ ನಟರು ಸಹ ಸಾಮಾನ್ಯ ಜನರ ಜೊತೆ ಬೆರೆತು ಹೋದ ಅನೇಕ ಸನ್ನಿವೇಶಗಳೂ ಸಹ ಈಗಾಗಲೇ ನಡೆದು ಹೋಗಿದೆ. ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಹೈದರಾಬಾದ್ ನ ಮೆಟ್ರೋ ದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಸಾಮಾನ್ಯ ಪ್ರಯಾಣಿಕನಂತೆ ಹೈದರಾಬಾದ್ ನ ಮೆಟ್ರೋ ಸ್ಟೇಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ಹೈಟೆಕ್ ಸಿಟಿ ಸಮೀಪದಲ್ಲಿ ರಾಯದುರ್ಗ ಮೆಟ್ರೋ ಸ್ಟೇಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಚಿತ್ರತಂಡ ಸಹ ಇದೆ. ಇನ್ನೂ ಸಿನೆಮಾ ಒಂದರ ಶೂಟಿಂಗ್ ನಿಮಿತ್ತ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದು, ಅಲ್ಲೇ ಇದ್ದ ಪ್ರಯಾಣಿಕರು ತಮ್ಮ ಪೋನ್ ನಲ್ಲಿ ಅಮಿತಾಭ್ ಬಚ್ಚನ್ ಪೊಟೋಗಳನ್ನು ವಿಡಿಯೋಗಳನ್ನು ಕ್ಲಿಕ್ಕಿಸಿದ್ದಾರೆ. ಜೊತೆಗೆ ಆ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಎಲ್ಲೆಡೆ ವೈರಲ್ ಆಗಿಬಿಟ್ಟಿವೆ. ಇನ್ನೂ ಅಮಿತಾಭ್ ನಾಘ ಅಶ್ವಿನ್ ನಿದೇಶನ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನೆಮಾ ಪ್ರಾಜೆಕ್ಟ್ ಕೆ ನಲ್ಲಿ ನಟಿಸಲು ಹೈದರಾಬಾದ್ ಗೆ ಬಂದಿದ್ದಾರೆ.

ನಾಗಅಶ್ವಿನ್ ರವರ ಮೊದಲನೇ ಪ್ಯಾನ್ ಇಂಡಿಯಾ ಸಿನೆಮಾ ಪ್ರಾಜೆಕ್ಟ್ ಕೆ ನಲ್ಲಿ ಬಾಹುಬಲಿ ಪ್ರಭಾಸ್ ನಾಯಕನಾಗಿ, ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಮಿತಾಭ್ ಬಚ್ಚನ್ ಸಹ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಅಮಿತಾಭ್ ಬಚ್ಚನ್ ರವರ ಪಾತ್ರದ ಸನ್ನಿವೇಶಗಳನ್ನು ಚಿತ್ರೀಕರಣಕ್ಕಾಗಿ ಹೈದರಾಬಾದ್ ಗೆ ಬಿಗ್ ಬಿ ಬಂದಿದ್ದಾರೆ. ಇನ್ನೂ ಪ್ರಾಜೆಕ್ಟ್ ಕೆ ಸಿನೆಮಾ ಸುಮಾರು ದಿನಗಳಿಂದ ಹೈದರಾಬಾದ್ ಪರಿಸರದಲ್ಲೇ ಜರಗುತ್ತಿದೆ. ಇತ್ತಿಚಿಗಷ್ಟೆ ಸಿನೆಮಾದ ನಾಯಕಿ ದೀಪಿಕಾ ಪಡುಕೋಣೆ ಸಹ ತನ್ನ ಪಾತ್ರದ ಶೂಟಿಂಗ್ ಮುಗಿಸಿಕೊಂಡು ಮುಂಬೈಗೆ ಹೋಗಿದ್ದಾರೆ. ಇದೀಗ ಬಿಗ್ ಬಿ ಸರದಿಯಾಗಿದ್ದು, ಅಮಿತಾಭ್ ಪಾತ್ರದ ದೃಶ್ಯಗಳನ್ನು ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ.

ಇನ್ನೂ ಈ ಕುರಿತು ಮೆಟ್ರೋ ಯೂಸರ್‍ ಒಬ್ಬ ಮಾತನಾಡಿದ್ದಾರೆ. ಅಮಿತಾಭ್ ಶೂಟಿಂಗ್ ಗಾಗಿ ಬಂದಿರಬಹುದು. ಒಂದು ಬ್ಲೂ ಲೈನ್ ಟ್ರೈನ್ ಒಳಗೆ ಯಾರನ್ನೂ ಎಂಟ್ರಿ ನೀಡಿರಲಿಲ್ಲ. ನಾನು ಅಮೀರ್‍ ಪೇಟ ಸ್ಟೇಷನ್ ನಲ್ಲಿ ಸಂಜೆ ಆರು ಗಂಟೆಗೆ ಕಾಯುತ್ತಿದ್ದೆ. ಆದರೆ ಮೆಟ್ರೋ ಒಂದು ಡಮ್ಮಿ ಟ್ರೈನ್ ಅನ್ನು ಏತಕ್ಕಾಗಿ ಬಿಟ್ಟಿದೆ ಎಂಬುದು ಅರ್ಥವಾಗಲಿಲ್ಲ. ಆದರೆ ರೈಲಿನಲ್ಲಿ ಅಮಿತಾಬ್ ಕಾಣಿಸಿಕೊಂಡಿಲ್ಲ. ಆದರೆ ಕತ್ತಲ್ಲಿ ಕ್ಯಾಮೆರಾಮ್ಯಾನ್ ಗಳು ಐಡಿ ಕಾರ್ಡ್ ಧರಿಸಿಕೊಂಡು ಕಾಣಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Previous articleಅಪ್ಪನ ಹಾಗೇ ಪೋಸ್ ಕೊಟ್ಟ ಜೂನಿಯರ್ ಯಶ್, ಕೆಜಿಎಫ್ ಸಿನೆಮಾದಲ್ಲಿ ಯಶ್ ನಂತೆ ಸ್ಟೈಲಿಷ್ ಲುಕ್.!
Next articleಲಕಲಕಲಕ ಅಂತಾ ಮತ್ತೊಮ್ಮೆ ಭಯಪಡಿಸಲು ಬರಲಿದೆ ಚಂದ್ರಮುಖಿ ಸೀಕ್ವೆಲ್.. ನಟಿ ಫೈನಲ್ ಆಯ್ತಾ?