Saturday, May 21, 2022
HomeFilm Newsಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಬೆರಳಿಗೆ ರಿಂಗ್ ಹಾಕಿದವರು ಯಾರು? ಬಾಲಿವುಡ್ ನಲ್ಲಿ ಹಾಟ್ ಟಾಪಿಕ್...

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಬೆರಳಿಗೆ ರಿಂಗ್ ಹಾಕಿದವರು ಯಾರು? ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಯ್ತು…

ಬಾಲಿವುಡ್ ನ ದಬಾಂಗ್ ಸಿನೆಮಾ ಮೂಲಕ ಖ್ಯಾತಿ ಪಡೆದ ನಟಿ ಸೋನಾಕ್ಷಿ ಸಿನ್ಹಾ ರ ಪೊಟೋಗಳು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರ ಜೊತೆಗೆ ಪೊಟೋ ಕುರಿತಂತೆ ಚರ್ಚೆಗಳೂ ಸಹ ಶುರುವಾಗಿದೆ. ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ರ ಮಗಳಾದ ಸೋನಾಕ್ಷಿ  ಬಹುಬೇಡಿಕೆ ನಟಿಯಾಗಿದ್ದಾರೆ.

ನಟಿ ಸೋನಾಕ್ಷಿ ತಮ್ಮ ಬೆರಳಿಗೆ ಉಂಗುರ ಹಾಕಿಕೊಂಡು ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸೋನಾಕ್ಷಿ ಬೆರಳಿಗೆ ಧರಿಸಿದ ಉಂಗುರವನ್ನು ತೋರಿಸುವ ಪೊಟೋಗಳ ಮೂಲಕ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ. ಇನ್ನೂ ಪೊಟೋಗಳೊಂದಿಗೆ ಸ್ವಲ್ಪ ವಿಚಾರವನ್ನು ಸಹ ಬರೆದಿದ್ದಾರೆ. ನನಗೆ ಇದೊಂದು ಬಿಗ್ ಡೇ ಆಗಿದೆ. ನನ್ನ ದೊಡ್ಡ ಕನಸ್ಸು ನಿಜವಾಗಲಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲು ಸಾದ್ಯವಿಲ್ಲ. ಇದನ್ನು ನಾನು ಸಹ ನಂಬಲು ಆಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಈ ಪೊಟೋಗಳನ್ನು ನೋಡಿದ ನೆಟ್ಟಿಗರು ಸೋನಾಕ್ಷಿ ಯಾರಿಗೂ ತಿಳಿಯದೇ ನಿಶ್ಚಿತಾರ್ಥ ಮಾಡಿಕೊಂಡು ತಡವಾಗಿ ಬಹಿರಂಗ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ಜೊತೆಗೆ ಅಭಿಮಾನಿಗಳು ಶುಭಾಷಯಗಳನ್ನು ಸಹ ತಿಳಿಸುತ್ತಿದ್ದಾರೆ. ಈಗಾಗಲೇ ಸೋನಾಕ್ಷಿ ಹಾಗೂ ಜಹೀರ್‍ ಅಬ್ಬಾಸ್ ರಿಲೇಷನ್ ಶಿಪ್ ನಲ್ಲಿರುವ ಬಗ್ಗೆ ಊಹಾಪೋಹಗಳು ಹರಿದಾಡಿತ್ತು. ಇದೀಗ ಸೋನಾಕ್ಷಿ ಈ ಪೊಟೋಗೆ ಅದಕ್ಕೆ ಲಿಂಕ್ ಸಹ ಹಾಕಲಾಗುತ್ತಿದೆ. ಆದರೆ ಇಬ್ಬರದ್ದೂ ಸ್ನೇಹಾನಾ ಅಥವಾ ಪ್ರೀತಿನಾ ಎಂಬುದು ಮಾತ್ರ ನಿಗೂಡವಾಗಿಯೇ ಇದೆ. ಇನ್ನೂ ಇತ್ತೀಚಿಗಷ್ಟೆ ಜಹೀರ್‍ ಸಹ ಈ ವಿಚಾರಕ್ಕೆ ಪ್ರತಿಕ್ರಿಯೆ ಸಹ ನೀಡಿದ್ದು. ನಾನು ಅಂತಹ ವಿಚಾರಗಳನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಅದೇ ರೀತಿ ತಾವು ಆಲೋಚನೆ ಮಾಡಿದರೇ ಅದು ನಿಮ್ಮ ಇಷ್ಟ ಎಂದು ಹೇಳಿದ್ದಾರೆ.

ಸದ್ಯ ಸೋನಾಕ್ಷಿ ಕೈಹಿಡಿದವರು ಯಾರು. ಆ ಹಿರೋ ಯಾರು ಎಂಬ ಪ್ರಶ್ನೆಗಳು ನೆಟ್ಟಿಗರಿಂದ ಬರುತ್ತಿವೆ. ಅಂದಹಾಗೆ ಅದು ನಿಶ್ಚಿತಾರ್ಥದ ಉಂಗುರ ಇರಬಹುದಾ ಎಂಬ ಸಂದೇಹ ಸಹ ಹುಟ್ಟಿಕೊಂಡಿದೆ. ಇದೇ ಮಾದರಿಯಲ್ಲಿ ವಿಧ ವಿಧವಾದ ಕಾಮೆಂಟ್ ಗಳು ಹರಿದಾಡುತ್ತಿದ್ದು, ಸೋನಾಕ್ಷಿಯೇ ಇದಕ್ಕೆ ಉತ್ತರ ನೀಡಬೇಕಿದೆ.

- Advertisement -

You May Like

More