ಪಡ್ಡೆಹುಡುಗರು ಬೆವರು ತರಿಸುವ ವರ್ಕೌಟ್ ವಿಡಿಯೋ ಶೇರ್ ಮಾಡಿದ ಬಾಲಿವುಡ್ ಸ್ಟಾರ್ ಕಿಡ್ ಸಾರಾ…!

ಬಾಲಿವುಡ್ ಸಿನಿರಂಗದ ಖ್ಯಾತ ನಟ ಸೈಫ್ ಅಲಿಖಾನ್ ರವರ ಪುತ್ರಿ ಸಾರಾ ಆಲಿಖಾನ್ ಸಿನಿರಂಗದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈಕೆ ನಟಿಸಿದ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಖ್ಯಾತಿ ಗಳಿಸಿಕೊಳ್ಳಲು ವಿಫಲರಾಗಿದ್ದಾರೆ. ಆದರೂ ಸಹ ಸಿನೆಮಾಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು ನಟಿಯಾಗಿ ಎಲ್ಲರನ್ನು ರಂಜಿಸುತ್ತಿದ್ದಾರೆ. ಆ ಮೂಲಕ ತಮ್ಮ ಸಿನಿ ಕೆರಿಯರ್‍ ಅನ್ನು ಸಕ್ಸಸ್ ನತ್ತ ಕೊಂಡೊಯ್ಯುತ್ತಿದ್ದಾರೆ. ಸದ್ಯ ನಟಿ ಸಾರಾ ಗ್ಯಾಸ್ ಲೈಟ್ ಎಂಬ ಸಿನೆಮಾದಲ್ಲಿ ನಟಿಸುತ್ತಿತ್ತು. ಸಿನೆಮಾದ ಚಿತ್ರೀಕರಣ ಸಹ ಭರದಿಂದ ಸಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವ ಈಕೆ ಸದಾ ಹಾಟ್ ವಿಡಿಯೋ, ಪೊಟೋಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ.

ಹಿಂದಿ ಸಿನಿರಂಗದ ಯಂಗ್ ಬ್ಯೂಟಿ ಗಳಲ್ಲಿ ಸಾರಾ ಅಲಿಖಾನ್ ಸಹ ಒಬ್ಬರಾಗಿದ್ದಾರೆ. ಕಳೆದ 2018 ರಲ್ಲಿ ತೆರೆಕಂಡ ಕೇದಾರನಾಥ್ ಎಂಬ ಸಿನೆಮಾದ ಮೂಲಕ ನಟಿಯಾಗಿ ಹಿಂದಿ ಸಿನಿರಂಗಕ್ಕೆ ಕಾಲಿಟ್ಟರು. ಬಾಲಿವುಡ್ ನ ಅನೇಕ ಸ್ಟಾರ್‍ ಗಳ ನಟಿಯರು ಸಿನೆಮಾಗಳಿಗೆ ಬರುವುದಕ್ಕೂ ಮುಂಚೆಯೇ ಸೋಷಿಯಲ್ ಮಿಡಿಯಾದ ಮೂಲಕ ಕ್ರೇಜ್ ಸಂಪಾದಿಸಿಕೊಳ್ಳುತ್ತಾರೆ. ಸ್ಟಾರ್‍ ಕಿಡ್ ಎಂಬ ಫೇಮ್ ಜೊತೆಗೆ ದೇಹದ ಮೈಮಾಟ ಪ್ರದರ್ಶನದ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಾರೆ. ಈ ಸಾಲಿಗೆ ನಟಿ ಸಾರಾ ಅಲಿ ಖಾನ್ ಸೇರುತ್ತಾರೆ. ದಿವಂಗತ ಸುಶಾಂತ್ ಸಿಂಗ್ ಜೊತೆಗೆ ಕೇದಾರನಾಥ್ ಎಂಬ ಸಿನೆಮಾದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟ ಈಕೆ ಬ್ಯಾಕು ಟು ಬ್ಯಾಕ್ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಾರಾ ಮೊದಲಿಗಿಂತಲೂ ಈಗ ತುಂಬಾನೆ ಬದಲಾಗಿದ್ದಾರೆ. ಮೊದಲಿಗಿಂತಲೂ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಸದಾ ಆಕೆ ಮಾಡುವಂತಹ ವರ್ಕೌಟ್ ಎಂದೇ ಹೇಳಬಹುದಾಗಿದೆ.

ನಟಿ ಸಾರಾ ಶ್ರೀಮಂತ ಕುಟುಂಬದಲ್ಲಿ ಜನಸಿದ್ದು, ಬಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಧಿಕ ಶ್ರೀಮಂತ ಹಿರೋಯಿನ್ ಗಳಲ್ಲಿ ಒಬ್ಬರು ಎಂದು ಹೇಳಬಹುದಾಗಿದೆ. ಆಸ್ತಿಯಿದ್ದರೂ ಸಹ ಆಕೆ ಮಾತ್ರ ತಮ್ಮದೇ ಆದ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆ ತುಂಬಾನೆ ಆಕ್ಟೀವ್ ಆಗಿದ್ದು, ತಮ್ಮ ದಿನಚರಿ ಬಗ್ಗೆ ಹಾಗೂ ಸಿನೆಮಾಗಳ ಅಪ್ಡೇಟ್ ಗಳ ಬಗ್ಗೆ ಸಹ ಮಾಹಿತಿ ನೀಡುತ್ತಿರುತ್ತಾರೆ. ಜೊತೆಗೆ ಹಾಟ್ ಪೊಟೋಗಳನ್ನೂ ಸಹ ಹಂಚಿಕೊಳ್ಳುತ್ತಿರುತ್ತಾರೆ. ನಟಿ ಸಾರಾ ಫಿಟ್ ನೆಸ್ ಗೆ ತುಂಬಾನೆ ಪ್ರಾದಾನ್ಯತೆ ನೀಡುತ್ತಾರೆ. ಈ ನಿಟ್ಟಿನಲ್ಲಿ ಆಕೆ ಸದಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ಸಾಗುತ್ತಿರುತ್ತಾರೆ. ಇದೀಗ ಆಕೆ ವರ್ಕೌಟ್ ಮಾಡುವ ವಿಡಿಯೋ ಒಂದನ್ನು ಶೇರ್‍ ಮಾಡಿದ್ದು, ಆಕೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸಾರಾ ಅಲಿ ಖಾನ್ ಫಿಟ್ ನೆಸ್ ಕಾಪಾಡಿಕೊಳ್ಳಲು ಜಿಮ್ ನಲ್ಲಿ ವರ್ಕೌಟ್ ಮಾಡುವಂತಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಾರಾ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಆಕೆ ಒಂದು ಹೇಳಿಕಯನ್ನು ಸಹ ಹಂಚಿಕೊಂಡಿದ್ದಾರೆ. ಮತ್ತೆ ಬಂದಿದ್ದು ತುಂಬಾ ಒಳ್ಳೆಯದು ಅನಿಸುತ್ತಿದೆ. ರಜೆ ಮುಗಿದಿದೆ. ಮತ್ತೇ ಟ್ಯ್ರಾಕ್ ಗೆ ಬಂದಿದ್ದೇನೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಸುಲಭವಾಗಿ ಹ್ಯಾಕ್ ಮಾಡುವುದು ಸಾಧ್ಯವಾಗುವುದಿಲ್ಲ.  ಓಡಿ, ನಿಧಾನವಾಗಿ ಇರಲು ಸಮಯವಿಲ್ಲ. ನೀವು ಕ್ರಾಕ್ ಮಾಡಲಾರರಿ, ಅದಕ್ಕಾಗಿ ಅಟ್ಯಾಕ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಆಕೆ ವರ್ಕೌಟ್ ಮಾಡುವಂತಹ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Previous articleರಣವೀರ್ ಬೆತ್ತಲೆ ಅವತಾರಕ್ಕೆ ಫಿದಾ ಆದ ನಟಿ ಎರಡನೇ ಪತ್ನಿಯಾಗಲೂ ಸಹ ಸಿದ್ದ ಎಂದ ನಟಿ….!
Next articleಬಾಡಿ ಶೇಮಿಂಗ್ ಬಗ್ಗೆ ಬ್ಯೂಟಿಪುಲ್ ನಟಿ ಹನ್ಸಿಕಾ ಸಹ ಸಮಸ್ಯೆಗೆ ಸಿಲುಕಿದ್ದರಂತೆ…!