ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಎಂದರೇ ಸಾಯೋವಷ್ಟು ಪ್ರೀತಿ ಎಂದ ಬಾಲಿವುಡ್ ಬ್ಯೂಟಿ, ಆಕೆ ಯಾರು?

ತೆಲುಗು ಸಿನಿರಂಗದಲ್ಲಿ ಅಲ್ಲು ಅರ್ಜುನ್ ಎಂದರೇ ತುಂಬಾನೆ ಕ್ರೇಜ್ ಹೊಂದಿದ್ದಾರೆ. ಅದರಲ್ಲೂ ಪುಷ್ಪಾ ಸಿನೆಮಾದ ಬಳಿಕ ಅಲ್ಲು ಅರ್ಜುನ್ ನ್ಯಾಷನಲ್ ಸ್ಟಾರ್‍ ಆಗಿದ್ದಾರೆ. ಪುಷ್ಪಾ ಸಿನೆಮಾ ಬಾಲಿವುಡ್ ನಲ್ಲೂ ಹೆಚ್ಚು ಕಲೆಕ್ಷನ್ ಮಾಡಿದ ಸಿನೆಮಾ ಆಗಿದೆ. ಇನ್ನೂ ಬನ್ನಿ ಎಂದರೇ ಅನೇಕ ನಟಿಯರಿಗೂ ಸಹ ತುಂಬಾನೆ ಇಷ್ಟ. ಈಗಾಗಲೇ ಅನೇಕ ನಟಿಯರು ಅಲ್ಲು ಅರ್ಜುನ್ ಮೇಲಿನ ಕ್ರಷ್ ಹೊರಹಾಕಿದ್ದಾರೆ. ಇದೀಗ ಮತ್ತೊರ್ವ ಬಾಲಿವುಡ್ ಬ್ಯೂಟಿ ಅಲ್ಲು ಅರ್ಜುನ್ ಅಂದ್ರೆ ಹುಚ್ಚು ಪ್ರೀತಿ ಎಂದಿದ್ದಾರೆ. ಅಷ್ಟಕ್ಕೂ ಆಕೆ ಯಾರು ಎಂಬ ವಿಚಾರಕ್ಕೆ ಬಂದರೇ…,

ಇತ್ತೀಚಿಗೆ ಟಾಲಿವುಡ್ ಹಿರೋಗಳೆಂದರೇ ಕೆಲ ಬಾಲಿವುಡ್ ನಟಿಯರಿಗೆ ತುಂಬಾನೆ ಇಷ್ಟ ಪಡುತ್ತಿದ್ದಾರೆ. ಸಮಯ ಸಿಕ್ಕರೇ ಸಾಕು ತೆಲುಗು ನಟರ ಮೇಲಿನ ಕ್ರಷ್ ಅನ್ನು ಹೊರ ಹಾಕುತ್ತಿರುತ್ತಾರೆ. ಇದೀಗ ಅಲ್ಲು ಅರ್ಜುನ್ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾರೆ ಬಾಲಿವುಡ್ ಬ್ಯೂಟಿ. ಇತ್ತೀಚಿಗಷ್ಟೆ ಜಾನ್ವಿ ಕಪೂರ್‍ ಜೂನಿಯರ್‍ ಎನ್.ಟಿ.ಆರ್‍ ಎಂದರೇ ತುಂಬಾ ಇಷ್ಟ ಎಂದಿದ್ದರು. ಆಕೆ ಮಾತ್ರವಲ್ಲದೇ ಅನೇಕ ನಟಿಯರು ಜೂನಿಯರ್‍ ಎನ್.ಟಿ.ಆರ್‍ ಎಂದರೇ ಇಷ್ಟ ಎಂದಿದ್ದರು. ದೀಪಿಕಾ ಪಡುಕೋಣೆ ಸಹ ಒಮ್ಮೆ ಮಹೇಶ್ ಬಾಬು ಎಂದರೇ ಇಷ್ಟ ಎಂದಿದ್ದರು. ಇದೀಗ ಅಲ್ಲು ಅರ್ಜುನ್ ಎಂದರೇ ತುಂಬಾ ಇಷ್ಟವೆಂದು ಬಾಲಿವುಡ್ ಬ್ಯೂಟಿ ಕೃತಿ ಸನೋನ್ ಹೇಳಿದ್ದಾರೆ.

ನಟಿ ಕೃತಿ ಸನೋನ್ ಅಭಿನಯದ ತೋಡೆಲು ಎಂಬ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಆಕೆ ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವರುಣ್ ಧವನ್ ಹಾಗೂ ಕೃತಿ ಸನೋನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ತೋಡೆಲು ಸಿನೆಮಾವನ್ನು ತೆಲುಗು ಭಾಷೆಯಲ್ಲಿ ಅಲ್ಲು ಅರವಿಂದ್ ರಿಲೀಸ್ ಮಾಡುತ್ತಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಆಕೆ ಅಲ್ಲು ಅರ್ಜುನ್ ಎಂದರೇ ಇಷ್ಟ ಎಂದು ಹೇಳಿದ್ದಾರೆ. ನನಗೆ ತೆಲುಗಿನಲ್ಲಿ ಎರಡು ಸಿನೆಮಾಗಳೆಂದರೇ ತುಂಬಾ ಇಷ್ಟ. ಪುಷ್ಪಾ ಹಾಗೂ ಆರ್‍.ಆರ್‍.ಆರ್‍ ಸಿನೆಮಾ ಗಳೆಂದರೇ ತುಂಬಾನೆ ಇಷ್ಟ. ಅದರಲ್ಲೂ ಪುಷ್ಪಾ ಸಿನೆಮಾದಲ್ಲಿ ಅಲ್ಲು ಅರ್ಜುನ್ ನಟನೆ, ಡ್ಯಾನ್ಸ್, ಆತನ ಸ್ಟೈಲ್ ಎಂದರೇ ತುಂಬಾನೆ ಇಷ್ಟ ಎಂದು ಹೇಳುವ ಮೂಲಕ ಪುಷ್ಪಾ ಸಿನೆಮಾವನ್ನು ಹೊಗಳುವುದರ ಜೊತೆಗೆ ಅಲ್ಲು ಅರ್ಜುನ್ ಎಂದರೇ ಇಷ್ಟ ಎಂದು ಹೇಳಿದ್ದಾರೆ.

ನಟಿ ಕೃತಿ ಸನೋನ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ನೆನೋಕ್ಕಡಿನೆ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ನಾಗಚೈತನ್ಯ ಜೊತೆಗೆ ದೋಚೆಯ್ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಎರಡೂ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಂಡುಕೊಳ್ಳದ ಕಾರಣ ಆಕೆ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಇದೀಗ ಆಕೆ ಪ್ರಭಾಸ್ ಜೊತೆಗೆ ಆದಿಪುರುಷ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಮೇಲೆ ಆಕೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Previous articleನಾನು ಅನಾಥೆ, ನನಗೆ ಯಾರೂ ಇಲ್ಲ ಎಂದು ಕಣ್ಣೀರಿಟ್ಟ ಜಬರ್ದಸ್ತ್ ಹೊಸ ಆಂಕರ್ ಸೌಮ್ಯಾ ರಾವ್…!
Next articleಸ್ಟೇಜ್ ಮೇಲೆ ಐಟಂ ಗರ್ಲ್ ನಂತೆ ಹಾಟ್ ಡ್ಯಾನ್ಸ್ ಮಾಡಿದ ಹಾಟ್ ಬ್ಯೂಟಿ ಜಾನ್ವಿ ಕಪೂರ್…!