Film News

ಪ್ಯಾರೀಸ್ ನಲ್ಲಿ ಎಂಜಾಯ್ ಮಾಡುತ್ತಿರುವ ಬಾಲಿವುಡ್ ಲವರ್ಸ್….!

ಸದ್ಯ ಬಾಲಿವುಡ್ ನಲ್ಲಿ ಅನೇಕ ಜೋಡಿಗಳು ಪ್ರೇಮ ಪಯಣ ಸಾಗಿಸುತ್ತಿದ್ದು, ಸಮಯ ಸಿಕ್ಕಲ್ಲಿ ಜಾಲಿ ಟ್ರಿಪ್ ಹೊಡೆಯುತ್ತಿರುತ್ತಾರೆ. ಅದರಲ್ಲೂ ಅನೇಕ ಬಾರಿ ಬಾಲಿವುಡ್ ಲವರ್‍ ಗಳು ಜಾಲಿ ಟ್ರಿಪ್ ಹೊಡೆಯುತ್ತಿರುವ ಪೊಟೋಗಳು ಎಲ್ಲೆಡೆ ವೈರಲ್ ಆಗುತ್ತಿರುತ್ತವೆ. ಇದೀಗ ಪ್ರೀತಿಗೆ ವಯಸ್ಸಿಲ್ಲ ಎಂಬಂತೆ ಬಾಲಿವುಡ್ ನ ಜೋಡಿಯೊಂದು ಪ್ಯಾರೀಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ ಅರ್ಜುನ್ ಕಪೂರ್‍ ಹಾಗೂ ಮಲೈಕಾ ಅರೋರಾ.

ಪ್ರೀತಿಗೆ ವಯಸ್ಸಿಲ್ಲ ಎಂಬಂತೆ ವಯಸ್ಸಿನ ಅಂತರ ಇಲ್ಲದೇ ಪ್ರೀತಿಗೆ ಬೀಳುತ್ತಿರುತ್ತಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಅರ್ಜುನ್ ಕಪೂರ್‍ ಹಾಗೂ ಮಲೈಕಾ ಅರೋರಾ ಪ್ರೀತಿಯಲ್ಲಿ ಬಿದ್ದಿದ ವಿಚಾರ ಬಹಿರಂಗವಾಗಿತ್ತು. ಮಲೈಕಾ ಇತ್ತೀಚಿಗಷ್ಟೆ ವಿಚ್ಚೇಧನ ಪಡೆದುಕೊಂಡಿದ್ದರು. ಇದೀಗ ಅರ್ಜುನ್ ಕಪೂರ್‍ ಜೊತೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಈ ಜೋಡಿ ಡೇಟಿಂಗ್ ಸಹ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.  ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ಪ್ರೇಮ ಪಯಣ ಸಾಗಿಸುತ್ತಿರುವ ಬಗ್ಗೆ ಒಪೆನ್ ಆಗಿ ಹೇಳಿದ್ದರು. ಈ ಜೋಡಿ ಇಬ್ಬರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ರಿವೀಲ್ ಮಾಡಿದ್ದಾರೆ. ಸದ್ಯ ಈ ಜೋಡಿ ಪ್ಯಾರೀಸ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಪ್ಯಾರೀಸ್ ನಲ್ಲಿನ ಸುಂದರ ಪ್ರದೇಶಗಳಲ್ಲಿ ಸಖತ್ ಎಂಜಾಯ್ ಮಾಡುತ್ತಾ ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ದಶಕಗಳ ಕಾಲದಿಂದ ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಆಗಿ ಹಿಂದಿ ಸಿನೆಮಾಗಳಲ್ಲಿ ಕ್ರೇಜ್ ಸಂಪಾದಿಸಿಕೊಂಡಿದ್ದರು. ಆಕೆ ಕಾಣಿಸಿಕೊಂಡ ಅನೇಕ ಐಟಂ ಸಾಂಗ್ ಗಳು ಆಲ್ ಟೈಂ ಹಿಟ್ ಆಗಿದೆ. ಗಬ್ಬರ್‍ ಸಿಂಗ್ ಸಿನೆಮಾದಲ್ಲಿ ಈಕೆ ಪವನ್ ಕಲ್ಯಾಣ್ ಜೊತೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಈ ಸಿನೆಮಾದಲ್ಲಿ ಈ ಐಟಂ ಸಾಂಗ್ ತುಂಬಾನೆ ಫೇಮಸ್ ಆಗಿದೆ. ನಟಿ ಅರೋರಾ ಕಳೆದ 1998 ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಆರ್ಬಾಜ್ ಖಾನ್ ಜೊತೆ ವಿವಾಹವಾದರು. ಬಳಿಕ 2017 ರಲ್ಲಿ ವಿಚ್ಚೇದನ ಪಡೆದುಕೊಂಡು ಬೇರೆಯಾದರು. ಇನ್ನೂ ಮಲ್ಲಿಕಾಗೆ 48 ವಯಸ್ಸಾಗಿದೆ. ಅರ್ಜುನ್ ಕಪೂರ್‍ ಮಲ್ಲಿಕಾ ಗಿಂತ 12 ವರ್ಷ ದೊಡ್ಡವಳಾಗಿದ್ದಾರೆ. ಅರ್ಜುನ್ ಕಪೂರ್‍ ಜೊತೆಗೆ ಅರೋರಾ ಜೊತೆ ಅಫೈರ್‍ ಇರುವ ಕಾರಣಕ್ಕಾಗಿ ಅರ್ಬಾಜ್ ಹಾಗೂ ಅರೋರಾ ವಿಚ್ಚೇದನ ಪಡೆದುಕೊಂಡರು ಎಂಬ ವದಂತಿಗಳು ಸಹ ಶುರುವಾಗಿತ್ತು.

ಇನ್ನೂ ನಟಿ ಮಲ್ಲಿಕಾಗೆ ಟಿನೇಜ್ ವಯಸ್ಸಿನ ಮಗ ಇದ್ದಾನೆ. ಶೀಘ್ರದಲ್ಲೇ ಅರ್ಜುನ್ ಕಪೂರ್‍ ಜೊತೆ ಪ್ರೇಮ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇವರ ವಿವಾಹ ಏನಾದರೂ ನಡೆದರೇ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯ ಪ್ರೇಮಿಕರಂತೆ ಮಲೈಕಾ ಹಾಗೂ ಅರ್ಜುನ್ ಕಪೂರ್‍ ಪ್ರೇಮ ಪಕ್ಷಿಗಳಂತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಮಲೈಕಾ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನೆಮಾಗಳಿಂದ ದೂರವುಳಿದಿದ್ದು, ಕಿರುತೆರೆಯಲ್ಲೂ ಕೆಲವೊಂದು ಶೋಗಳಲ್ಲಿ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Trending

To Top