Film News

ವಿಕ್ಕಿ ಕೌಶಲ್ ಕೇವಲ 45 ನಿಮಿಷಗಳಲ್ಲಿ ನನ್ನ ಹೃದಯ ಗೆದ್ದರು ಎಂದ ಕತ್ರಿನಾ ಕೈಫ್…..!

ಬಾಲಿವುಡ್ ನಲ್ಲಿ ಖ್ಯಾತ ನಟಿ ಕತ್ರಿನಾ ಕೈಫ್ ಇತ್ತಿಚಿಗಷ್ಟೆ ವಿಕ್ಕಿ ಕೌಶಲ್ ರನ್ನು ಪ್ರೀತಿಸಿ ಮದುವೆಯಾದರು. ಅದ್ದೂರಿಯಾಗಿ ಇವರ ಮದುವೆ ಸಮಾರಂಭ ನಡೆದಿದೆ. ಇನ್ನೂ ಆಕೆಯ ಹೃದಯ ಗೆಲ್ಲಲು ವಿಕ್ಕಿ ಕೌಶಲ್ ಗೆ ಕೇವಲ 45 ನಿಮಿಷ ಬೇಕಾಯಿತಂತೆ. ಈ ವಿಚಾರವನ್ನು ಸ್ವತಃ ಕತ್ರಿನಾ ರವರೇ ಹೊರಹಾಕಿದ್ದಾರೆ. ಬಾಲಿವುಡ್ ನ ಕಾಂಟ್ರವರ್ಸಿ ಶೋ ಎಂತಲೇ ಕರೆಯುವ ಕಾಫಿ ವಿತ್ ಕರಣ್ ಶೋ ನಲ್ಲಿ ಕತ್ರಿನಾ ಕೈಫ್ ಹಂಚಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಶೋ ನ 10 ನೇ ಎಪಿಸೋಡ್ ನಲ್ಲಿ ಕ್ಯಾಟ್ ವಿಕ್ಕಿ ಜೊತೆಗಿನ ಪ್ರೇಮ ಪಯಣದ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್ ನಲ್ಲಿ ಕರಣ್ ಜೋಹರ್‍ ನಡೆಸಿಕೊಡುವಂತಹ ಕಾಫಿ ವಿತ್ ಕರಣ್ ಸೆಲೆಬ್ರೆಟಿ ಶೋ ತುಂಬಾನೆ ಕ್ರೇಜ್ ಪಡೆದುಕೊಂಡಿದೆ. ಕರಣ್ ಶೋ ನ 10ನೇ ಸಂಚಿಕೆಯಲ್ಲಿ ಕತ್ರಿನಾಕೈಫ್, ಸಿದ್ದಾಂತ್ ಚತುರ್ವೇದಿ ಹಾಗೂ ಇಶಾನ್ ಖಟ್ಟರ್‍ ರವರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಕತ್ರಿನಾ ಅನೇಕ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಕ್ಕಿ ಹಾಗೂ ಕತ್ರಿನಾ ರವರ ಲವ್ ಸ್ಟೋರಿಯನ್ನು ಸಹ ಹೇಳಿದ್ದಾರೆ. ಶೋ ನಲ್ಲಿ ಕರಣ್ ಜೋಹರ್‍ ಕತ್ರಿನಾ ರವರಿಗೆ ಪ್ರಶ್ನೆ ಕೇಳಿದ್ದಾರೆ. ವಿಕ್ಕಿ ಪತಿಯಾಗಿ ನಿಮಗೆ ತುಂಬಾ ವಿಶೇಷವಾದುದನ್ನು ಏನು ಕೊಟ್ಟಿದ್ದಾರೆ ಎಂದು ಕರಣ್ ಕೇಳಿದ್ದಾರೆ. ಆಗ ಕತ್ರಿನಾ ಉತ್ತರಿಸಿ ಕೋವಿಡ್ ಸಮಯದಲ್ಲಿ ನಾನು ತುಂಬಾ ಕೆಟ್ಟ ಸಮಯ ಕಳೆಯುತ್ತಿದೆ. ಇದರಿಂದ ನನ್ನ ಹುಟ್ಟುಹಬ್ಬದ ಸಮಯದಲ್ಲಿ ನನ್ನನ್ನು ಸಂತೋಷ ಪಡಿಸಲು ಸುಮಾರು 45 ನಿಮಿಷಗಳ ಕಾಲ ನನ್ನ ಹಾಡುಗಳಿಗೆ ಡ್ಯಾನ್ಸ್ ಮಾಡಿದರು. ನಾನು ಖುಷಿಯಾಗಿರಬೇಕು ಎಂದು ವಿಕ್ಕಿ ಆ ರೀತಿ ಮಾಡಿದರು. ಅದನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ ಕ್ಯಾಟ್.

ಇನ್ನೂ ಇದೇ ಸಮಯದಲ್ಲಿ ಕತ್ರಿನಾ ಪಕ್ಕದಲ್ಲಿದ್ದ ಇಶಾನ್ ಖಟ್ಟರ್‍ ಮಾತನಾಡಿ, ವಿಕ್ಕಿ ನೃತ್ಯ ಮಾಡಿದ ಶೀಲಾ ಕಿ ಜವಾನಿ ಅಥವಾ ಚಕ್ನಿ ಚಮೇಲಿ ನೃತ್ಯ ವನ್ನು ಬಿಡುಗಡೆ ಮಾಡಿ ಎಂದು ಕೇಳುತ್ತಾರೆ. ಅದಕ್ಕೆ ಕತ್ರಿನಾ ನಿಮಗೆ ಮತ್ತೆ ಅವನ್ನು ತೋರಿಸುತ್ತೇನೆ ಎಂದಿದ್ದಾರೆ. ಇನ್ನೂ ವಿಕ್ಕಿಯವರಲ್ಲಿ ಉತ್ತಮ ವಿಷಯ ಏನು ಎಂಬ ಪ್ರಶ್ನೆ ಸಹ ಬಂದಿದ್ದು, ಅದಕ್ಕೆ ಉತ್ತರಿಸಿದ ಕತ್ರಿನಾ ಅವರ ಆತ್ಮವಿಶ್ವಾಸ ನನಗೆ ತುಂಬಾ ಇಷ್ಟ. ತನ್ನ ಬಗ್ಗೆ ಅಷ್ಟೊಂದು ಭರವಸೆ ಹೊಂದಿರುವ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ. ಇನ್ನೂ ವಿಕ್ಕಿ ನನ್ನ ಪರದಿಯಲ್ಲಿ ಇಲ್ಲ. ಮೊದಲಿಗೆ ನಾನು ಅವರ ಬಗ್ಗೆ ಏನು ತಿಳಿದುಕೊಂಡಿರಲಿಲ್ಲ. ಅವರ ಹೆಸರನ್ನು ಮಾತ್ರ ಕೇಳಿದ್ದೆ. ಅವರನ್ನು ಭೇಟಿಯಾದ ಬಳಿಕ ಅವರಿಗೆ ನಾನು ಮನಸೋತೆ ಎಂದು ತಮ್ಮ ಲವ್ ಸ್ಟೋರಿಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ.

ಇನ್ನೂ ವಿಕ್ಕಿ ಹಾಗೂ ಕ್ಯಾಟ್ ಕಳೆದ 2021 ರ ಡಿಸೆಂಬರ್‍ ಮಾಹೆಯಲ್ಲಿ ಮದುವೆಯಾದರು. ಅದಕ್ಕೂ ಮೊದಲು ಅವರು ಸುಮಾರು ತಿಂಗಳುಗಳ ಕಾಲ ಪ್ರೇಮ ಪಯಣ ಸಾಗಿಸಿ ಅದ್ದೂರಿಯಾಗಿ ಮದುವೆಯಾದರು. ಮದುವೆಯಾದ ಬಳಿಕ ಅವರು ಸಿನೆಮಾಗಳಲ್ಲಿ ಸಹ ಬ್ಯುಸಿಯಾದರು. ಸಮಯ ಸಿಕ್ಕರೇ ಸಾಕು ಅನೇಕ ಸುಂದರ ತಾಣಗಳಿಗೆ ಟ್ರಿಪ್ ಪ್ಲಾನ್ ಮಾಡುತ್ತಿರುತ್ತಾರೆ, ಅಲ್ಲಿ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಕೀರ್ತಿ ಸುರೇಶ್, ಅವಕಾಶ ಸಿಗದಿದ್ದರೇ ಕೆಲಸ ಮಾಡಿಕೊಳ್ಳುತ್ತೇನೆ ಎಂದ ನಟಿ….!

ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆಯೊಂದಿರುವ ನಟಿಯರಲ್ಲಿ ಕೀರ್ತಿ ಸುರೇಶ್ ಒಬ್ಬರಾಗಿದ್ದಾರೆ. ಮಹಾನಟಿ ಎಂಬ ಸಿನೆಮಾಗಾಗಿ ಆಕೆ ಅವಾರ್ಡ್‌ಗಳನ್ನು ಸಹ ದಕ್ಕಿಸಿಕೊಂಡಿದ್ದಾರೆ. ಮಲಯಾಳಂ…

2 hours ago

ಕಾಂತಾರ ಸಿನೆಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ತೆಲುಗು ನಟಿ ಅನಸೂಯ…!

ಕೆಜಿಎಫ್ ಸಿನೆಮಾದ ಬಳಿಕ ಇಡೀ ದೇಶದಾದ್ಯಂತ ಅನೇಕರ ಮೆಚ್ಚುಗೆಗೆ ಪಾತ್ರವಾದ ಸಿನೆಮಾ ಕಾಂತಾರ ಎಂದೇ ಹೇಳಬಹುದು. ಕನ್ನಡದ ಖ್ಯಾತ ನಿರ್ದೇಶಕ…

3 hours ago

ಮತ್ತೊಮ್ಮೆ ಮದುವೆ ರೂಮರ್ ಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮಿಲ್ಕಿ ಬ್ಯೂಟಿ ತಮನ್ನಾ…!

ಸೌತ್ ನಲ್ಲಿ ಮಿಲ್ಕಿ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಸದಾ ಗ್ಲಾಮರ್‍ ಟ್ರೀಟ್ ನೀಡುತ್ತಲೇ ಇರುತ್ತಾರೆ. ಸೋಷಿಯಲ್…

4 hours ago

ವಿಜಯ್ ದೇವರಕೊಂಡ ತಾಯಿಯೊಂದಿಗೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್, ವೈರಲ್ ಆದ ಪೊಟೋ…!

ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಬಾಲಿವುಡ್ ನಟಿಯರಲ್ಲಿ ಜಾನ್ವಿ ಕಪೂರ್‍ ಸಹ ಒಬ್ಬರಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನಟಿ ಜಾನ್ವಿಗೆ…

6 hours ago

ಗ್ಲಾಮರ್ ಡೋಸ್ ಏರಿಸಿದ ರಾಶಿ ಖನ್ನಾ, ನೆವರ್ ಬಿಫೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಹುತೇಕ ನಟಿಯರು ಗ್ಲಾಮರ್‍ ಶೋ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಓವರ್‍ ಗ್ಲಾಮರ್‍ ಶೋ ಮಾಡದ…

18 hours ago

ಸೀತಾರಾಮಂ ಬ್ಯೂಟಿ ಶಾಕಿಂಗ್ ಕಾಮೆಂಟ್ಸ್, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದ ಮೃಣಾಲ್…!

ದಕ್ಷಿಣದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸೀತಾರಾಮಂ ಸಿನೆಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕರು ಫಿದಾ…

19 hours ago