Saturday, May 21, 2022
HomeFilm Newsಬಾಲಿವುಡ್ ನಟಿ ಕತ್ರಿನಾ ಗರ್ಭಿಣಿ ಎಂದು ಹುಟ್ಟಿಕೊಂಡ ಗಾಸಿಪ್‌ ಗೆ ಸಿಕ್ತು ಸ್ಪಷ್ಟನೆ…..

ಬಾಲಿವುಡ್ ನಟಿ ಕತ್ರಿನಾ ಗರ್ಭಿಣಿ ಎಂದು ಹುಟ್ಟಿಕೊಂಡ ಗಾಸಿಪ್‌ ಗೆ ಸಿಕ್ತು ಸ್ಪಷ್ಟನೆ…..

ಬಾಲಿವುಡ್ ನ ಕ್ಯೂಟ್ ಕಪಲ್ ಎಂದು ಕರೆಯಲಾಗುವ ಕತ್ರಿಕಾ ಕೈಫ್ ಹಾಗೂ ವಿಕ್ಕಿ ಸಿನೆಮಾಗಳ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಕ್ರಿಯರಾಗಿರುತ್ತಾರೆ. ಇತ್ತೀಚಿಗಷ್ಟೆ ಅವರು ಹಂಚಿಕೊಂಡ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ಈ ಕ್ಯೂಟ್ ಜೋಡಿ ಏನು ಮಾಡಿದರೂ ವೈರಲ್ ಆಗುತ್ತಿರುತ್ತದೆ. ಇನ್ನೂ ಕತ್ರಿನಾ ಹಾಗೂ ವಿಕ್ಕಿ ನ್ಯೂಯಾರ್ಕ್ ಟ್ರಿಪ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮೂರು ದಿನಗಳ ಹಿಂದೆ ಕತ್ರಿನಾ ಹಾಗೂ ವಿಕ್ಕಿ ಪೊಟೋ ವೈರಲ್ ಆಗಿತ್ತು.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದರು. ಈ ವೇಳೆ ಕತ್ರಿನಾ ಕೈಫ್ ಕಾಣಿಸಿಕೊಂಡ ಪರಿಯನ್ನು ಕಂಡು ಕತ್ರಿನಾ ಗರ್ಭಿಣಿಯಾಗಿದ್ದಾರೆ ಎಂಬ ಅನುಮಾನ ಮೂಡಿತ್ತು. ಇನ್ನೂ ಇವರಿಬ್ಬರ ಮದುವೆ ನಡೆದು ಇನ್ನೂ ಆರು ತಿಂಗಳು ಮಾತ್ರ ಕಳೆದಿದೆ. ಇನ್ನೂ ಇದೀಗ ಕತ್ರಿನಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುವ ಮೂಲಕ ಬಾಲಿವುಡ್ ನ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿತ್ತು. ಆದರೆ ಇದಕ್ಕೆ ಇದೀಗ ಸ್ಪಷ್ಟ ಉತ್ತರ ದೊರೆತಿದೆ.

ಕಳೆದ ಡಿಸೆಂಬರ್‍ 2021 ರಂದು ಕತ್ರಿನಾ ಕೈಫ್ ಹಾಗೂ ವಿಕ್ಕಿ ಹಸೆಮಣೆ ಏರಿದ್ದರು. ಸದ್ಯ ಈ ಜೋಡಿ ಹ್ಯಾಪಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಸಿನೆಮಾ ಬ್ಯುಸಿ ನಡುವೆಯೂ ಸಹ ಆಗಾಗ ಕೆಲವೊಂದು ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿರುತ್ತಾರೆ. ಜೊತೆಗೆ ಅಲ್ಲಿನ ಕೆಲ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಈ ಪೊಟೋಗಳು ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಇಂತಹ ಜೋಡಿಗೆ ಇದೀಗ ರೂಮರ್‍ ಒಂದು ಎದುರಾಗಿದೆ. ಕತ್ರಿನಾ ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‍ ಜೋರಾಗಿ ಹರಿದಾಡುತ್ತಿದೆ.

ಇನ್ನೂ ಈ ಕುರಿತು ಸ್ಪಷ್ಟನೆ ದೊರೆತಿದ್ದು, ಕತ್ರಿನಾ ಗರ್ಭಿಣಿಯಲ್ಲ. ಪ್ರಸ್ತುತ ಅವರು ಸಿನೆಮಾ ಕೆಲಸಗಳ ಮೇಲೆ ಹೆಚ್ಚು ಪೋಕಸ್ ಮಾಡುತ್ತಿದ್ದಾರೆ. ಇನ್ನೂ ಈಗಾಗಲೇ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿರುವ ಕತ್ರಿನಾ ಬ್ಯುಸಿಯಾಗಿದ್ದಾರೆ. ಗರ್ಭಿಣಿ ಎಂಬ ಸುದ್ದಿ ಸುಳ್ಳಾಗಿದೆ. ಯಾರು ಇದನ್ನು ನಂಬಬೇಡಿ ಎಂದು ಹೇಳಲಾಗಿದೆ. ಇತ್ತೀಚಿಗಷ್ಟೆ ನಟಿ ಕತ್ರಿನಾ ಮುಂಬೈನ ಏರ್‍ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಹೊಟ್ಟೆ ಕಾಣದ ರೀತಿಯಲ್ಲಿ ದುಪ್ಪಟ್ಟಾ ಹಾಕಿಕೊಂಡಿದ್ದರು. ಇದನ್ನು ಕಂಡ ಕೆಲವರಿಗೆ ಕತ್ರಿನಾ ಗರ್ಭಿಣಿಯಾಗಿದ್ದಾರಾ ಎಂಬ ಅನುಮಾನ ಕಾಡಿತ್ತು. ಆದರೆ ಗರ್ಭಿಣಿ ಎಂಬ ವದಂತಿ ಶುದ್ದ ಸುಳ್ಳು ಎಂದು ಹೇಳಲಾಗಿದೆ.

- Advertisement -

You May Like

More