ಕರೀನಾ ಕಪೂರ್ ಗೆ ಕಹಿ ಘಟನೆ, ಸಾರ್ವಜನಿಕವಾಗಿ ಮೈಮೇಲೆ ಕೈ ಹಾಕಲು ಮುಂದಾದ ಅಭಿಮಾನಿ, ವೈರಲ್ ಆಯ್ತು ವಿಡಿಯೋ..!

ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ರವರಿಗೆ ದೊಡ್ಡ ಮಟ್ಟದಲ್ಲೇ ಅಭಿಮಾನಿ ಬಳಗವಿದೆ. ಆಕೆ ಹೊರಗಡೆ ಕಾಣಿಸಿಕೊಂಡರೇ ಆಕೆಯೊಂದಿಗೆ ಸೆಲ್ಫಿತೆಗೆಸಿಕೊಳ್ಳಲು ಮುಗಿಬೀಳುತ್ತಿರುತ್ತಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಕಾಣಿಸಿಕೊಂಡರೇ ಪೊಟೋಗಳಿಗಾಗಿ ಮುಗಿಬೀಳುವುದು ಸಾಮಾನ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಅಭಿಮಾನಿಗಳ ವರ್ತನೆ ಅನುಚಿತವಾಗಿದ್ದು, ಸೆಲೆಬ್ರೆಟಿಗಳೂ ಸಹ ತುಂಬಾನೆ ಸಂಕಷ್ಟಕ್ಕೆ ಸಿಲುಕುತ್ತಿರುತ್ತಾರೆ. ಇದೀಗ ನಟಿ ಕರೀನಾ ಕಪೂರ್‍ ಸಹ ಅಂತಹ ಕಹಿಘಟನೆಯೊಂದನ್ನು ಅನುಭವಿಸಿದ್ದಾರೆ.

ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿಯರಲ್ಲಿ ಕರೀನಾ ಕಪೂರ್‍ ಸಹ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಹ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಮಕ್ಕಳು ಕುಟುಂಬ ದೊಂದಿಗೆ ಸಿನೆಮಾಗಳನ್ನು ಸಹ ಸಮರೋಪಾದಿಯಲ್ಲಿ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಹೊಸ ಸಿನೆಮಾದ ಶೂಟಿಂಗ್ ನಿಮಿತ್ತ ವಿದೇಶಕ್ಕೆ ಹೋಗುತ್ತಿದ್ದಾಗ ಆಕೆ ಇರುಸು ಮುರಿಸಾಗುವ ಘಟನೆಯೊಂದು ನಡೆದಿದೆ. ಮುಂಬೈ ಏರ್‍ ಪೋರ್ಟ್‌ನಲ್ಲಿ ಆಕೆಗೆ ಕಹಿ ಘಟನೆಯೊಂದು ಎದುರಾಗಿದ್ದು, ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮುಂಬೈ ಏರ್‍ ಪೋರ್ಟ್‌‌ನಲ್ಲಿ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಕರೀನಾ ಕಪೂರ್‍ ಹೊಸ ಸಿನೆಮಾದ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.  ಕರೀನಾ ಜೊತೆಗೆ ತನ್ನ ಒಂದೂವರೆ ವರ್ಷದ ಮಗ ಜಹಂಗೀರ್‍ ಸಹ ಇದ್ದಾರೆ. ಈ ಸಮಯದಲ್ಲಿ ಕೆಲವು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಈ ವೇಳೆ ಸಮಾಧಾನದಿಂದ ಕರೀನಾ ಸಹ ಅಭಿಮಾನಿಗಳಿಗೆ ಸೆಲ್ಪಿಗೆ ಪೋಸ್ ಕೊಡುತ್ತಿದ್ದರು. ಸೆಲ್ಫಿ ತೆಗೆಯಲು ಬಂದ ಅಭಿಮಾನಿಯೊಬ್ಬ ಕರೀನಾ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಕೂಡಲೇ ಕರೀನಾ ಶಾಕ್ ಆದರು, ಜೊತೆಗೆ ಕರೀನಾ ಬಾಡಿಗಾರ್ಡ್ ಗಳೂ ಸಹ ಅಲರ್ಟ್ ಆಗಿದ್ದರು. ಕರೀನಾ ಮೇಲೆ ಕೈ ಹಾಕಲು ಬಂದ ಆ ವ್ಯಕ್ತಿಯನ್ನು ಪಕ್ಕಕ್ಕೆ ನೂಕಿದರು. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಅನೇಕ ಘಟನೆಗಳಲ್ಲಿ ಸೆಲೆಬ್ರೆಟಿಗಳು ಕೋಪಗೊಂಡು ಕೂಗಾಡಿದ ಉದಾಹರಣೆಗಳೂ ಸಹ ಸಾಕಷ್ಟು ಇದೆ. ಆದರೆ ಕರೀನಾ ಕಪೂರ್‍ ಮಾತ್ರ ಯಾವುದೇ ರೀತಿಯಲ್ಲಿ ಕೂಗಾಡದೇ ಕಿರಿಕಿರಿ ಅನುಭವಿಸಿದರು. ಬಳಿಕ ತಮ್ಮ ಪಾಡಿಗೆ ತಾವು ಮುಂದೆ ಸಾಗಿದ್ದಾರೆ. ಇನ್ನೂ ನೆಟ್ಟಿಗರೂ ಸಹ ಅನುಚಿತ ವರ್ತನೆ ತೋರಿದ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಲೆಬ್ರೆಟಿಗಳ ಖಾಸಗೀತನಕ್ಕೆ ಗೌರವ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂಬ ಕಾಮೆಂಟ್ ಗಳು ಸಹ ಬರುತ್ತಿವೆ. ಇನ್ನೂ ಕರೀನಾ ಕಪೂರ್‍ ಮದುವೆಯಾದರೂ ಸಹ ಸಾಲು ಸಾಲು ಸಿನೆಮಾಗಳ ಮೂಲಕ ಇನ್ನೂ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Previous articleರಶ್ಮಿಕಾ ಸ್ವಯಂವರದಲ್ಲಿ ಅವರು ಇರಲೇ ಬೇಕಂತೆ, ಅವರು ಯಾರು ಗೊತ್ತಾ?
Next articleರೀಲ್ ಮಾಡುತ್ತಾ ಲಿಪ್ ಲಾಕ್ ಮಾಡಿಕೊಂಡ ನಿವೇದಿತಾ ಹಾಗೂ ಚಂದನ್ ಶೆಟ್ಟಿ, ವೈರಲ್ ಆಯ್ತು ಲಿಪ್ ಲಾಕ್ ವಿಡಿಯೋ….!