Saturday, May 21, 2022
HomeFilm Newsಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ಅಭಿಮಾನಿಗಳಲ್ಲಿ ಮೂಡಿದೆ ಪ್ರಶ್ನೆ….!

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ಅಭಿಮಾನಿಗಳಲ್ಲಿ ಮೂಡಿದೆ ಪ್ರಶ್ನೆ….!

ಅತಿಲೋಕ ಸುಂದರಿ ಎಂದು ಕರೆಯಲಾಗುವ ನಟಿ ಶ್ರೀದೇವಿಯವರ ಪುತ್ರಿ ಜಾನ್ವಿ ಕಪೂರ್‍ ಸದ್ಯ ಬಾಲಿವುಡ್ ನಲ್ಲಿ ಸಕ್ರೀಯರಾಗಿದ್ದಾರೆ. ಈಕೆ ಖ್ಯಾಟ ನಟಿಯ ಮಗಳು ಎಂಬ ಉದ್ದೇಶದಿಂದ ಒಳ್ಳೆಯ ಅವಕಾಶಗಳೂ ಸಹ ಲಭಿಸುತ್ತಿವೆ. ನಟಿ ಜಾನ್ವಿ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಕ್ರೀಯರಾಗಿರುತ್ತಾರೆ. ಜೊತೆಗೆ ಟ್ರಿಪ್ಸ್ ಹೋಗುವುದು ಸ್ನೇಹಿತರ ಜೊತೆ ಸಮಯ ಕಳೆಯುವುದು, ವೀಕೆಂಡ್ ಟ್ರಿಪ್ಸ್ ಹೀಗೆ ಸಖತ್ ಎಂಜಾಯ್ ಮಾಡುತ್ತಾರೆ.

ಇನ್ನೂ ಇತ್ತೀಚಿಗಷ್ಟೆ ನಟಿ ಜಾನ್ವಿ ಪಾರ್ಟಿ ಒಂದರಲ್ಲಿ ಭಾಗಿಯಾಗಿದ್ದರು. ಪಾರ್ಟಿಯಲ್ಲಿ ಅವರ ಕಸಿನ್ ಶಯಾನಾ ಕಪೂರ್‍ ಎಂಬುವರರೊಂದಿಗೆ ಪಾರ್ಟಿಯಲ್ಲಿದ್ದರು. ಅಲ್ಲಿನ ಕೆಲವೊಂದು ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಈ ಪೊಟೋ ಕುರಿತು ಚರ್ಚೆಗಳು ಸಹ ಶುರುವಾಗಿದೆ. ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ. ಇದೆಲ್ಲರದ ಜೊತೆಗೆ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಯೂ ಸಹ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇನ್ನೂ ಪಾರ್ಟಿಯಲ್ಲಿ ನಟಿ ಜಾನ್ವಿ ಗೆಳೆಯರೊಂದಿಗೆ ಇರುವಂತಹ ಪೊಟೋಗಳನ್ನು ತೆಗೆದುಕೊಂಡಿದ್ದಾರೆ. ಈ ಪೊಟೋಗಳನ್ನು ತಮ್ಮ ಸೋಷಿಯಲ್ ಮಿಡೀಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಎಲ್ಲೋ ಕಲರ್‍ ಡ್ರೆಸ್ ನಲ್ಲಿ ಮಿಂಚುತ್ತಿರುವ ನಟಿ ಜಾನ್ವಿ ಸುತ್ತಲೂ ಫ್ರೆಂಡ್ಸ್ ಇದ್ದಾರೆ. ಈ ಪೊಟೋಗಳಲ್ಲಿನ ಒಂದು ಪೊಟೋದಲ್ಲಿ ಒರ್ಹಾನ್ ಅವತ್ರಮಣಿ ಎಂಬ ವ್ಯಕ್ತಿ ಹೈಲೆಟ್ ಆಗಿದ್ದಾರೆ. ಜಾನ್ವಿ ಹಾಗೂ ಒರ್ಹಾನ್ ಇಬ್ಬರ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿವೆ. ಒರ್ಹಾನ್ ಹಾಗೂ ಜಾನ್ವಿ ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಲಾಗುತ್ತಿದೆ. ಬಾಲಿವುಡ್ ಸಿನಿರಂಗದ ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂತಲೂ ಕರೆಯಲಾಗುತ್ತಿದೆ.

ಇನ್ನೂ ಈ ಪೊಟೋಗಳನ್ನು ನೋಡಿದ ಕೆಲವರಂತೂ ವಿವಿಧ ರೀತಿಯ ಕಾಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ. ಕೆಲವರು ಇಬ್ಬರೂ ಕಪಲ್ಸ್ ಎಂದರೇ, ಮತ್ತೊಬ್ಬ ರಿಲೇಶಿನ್ ಶಿಪ್ ನಲ್ಲಿದ್ದಾರೆಯೇ ಎಂದು ಕೇಳಿದ್ದಾನೆ. ಆದರೆ ಜಾನ್ವಿ ಮಾತ್ರ ಈ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದೆ ತಟಸ್ಥವಾಗಿದ್ದಾರೆ. ಸದ್ಯ ನಟಿ ಜಾನ್ವಿ ಮಿಲಿ, ಬವಾಲ್, ಮಿಸ್ಟರ್‍ ಅಂಡ್ ಮಿಸ್ಟರೆಸ್ ಮಾಆಹಿ ಮೊದಲಾದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

- Advertisement -

You May Like

More