ಶೀಘ್ರದಲ್ಲೇ ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಮದುವೆ….!

ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಮಗಳಾದ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾದ ಬ್ಯಾಟ್ಸ್ ಮೆನ್ ಕೆ.ಎಲ್.ರಾಹುಲ್ ರವರ ಮದುವೆ ಶೀಘ್ರದಲ್ಲೆ ನಡೆಯಲಿದೆ. ಇನ್ನೂ ಸುನೀಲ್ ಶೆಟ್ಟಿ ಸಹ ತಮ್ಮ ಮಗಳ ಮದುವೆಗೆ ಹಸಿರು ನಿಶಾನೆ ತೋರಿದ್ದಾರಂತೆ.  ಶೀಘ್ರದಲ್ಲೇ ಇವರ ವಿವಾಹದ ಬಗ್ಗೆ ಅಧಿಕೃತವಾದ ಮಾಹಿತಿ ಹೊರಬರಲಿದೆ.

ಅಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ರವರ ಪ್ರೇಮ ಪಯಣದ ಕುರಿತು ಸುಮಾರು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಈ ನಡುವೆ ಅವರ ಕೆಲವೊಂದು ಪೊಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಅದಕ್ಕೆ ಮತಷ್ಟು ಪುಷ್ಟಿ ನೀಡಿವೆ. ಇದೀಗ ಇವರ ಪ್ರೀತಿ ಮದುವೆಯಾಗಿ ಮಾರ್ಪಾಡು ಆಗಲಿದೆ. ಇದಕ್ಕೆ ಅಥಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ.  ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸುನೀಲ್ ಶೆಟ್ಟಿ ಸಹ ಈ ಕುರಿತು ಮಾಹಿತಿ ನೀಡಿದ್ದಾರೆ.

ಇನ್ನೂ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಸುನೀಲ್ ಶೆಟ್ಟಿ, ಈಗ ಕಾಲ ಬದಲಾಗಿದೆ. ಅವರವರ ಇಚ್ಚೆಗೆ ಅನುಗುಣವಾಗಿ ಏನು ಮಾಡಬೇಕೆಂದು ಅವರೇ ನಿರ್ಧರಿಸುವ ಶಕ್ತಿ ಅವರಿಗಿದೆ. ನನ್ನ ಮಗ ಹಾಗೂ ಮಗಳು ಇಬ್ಬರು ಜವಾಬ್ದಾರಿಯುತರಾಗಿದ್ದಾರೆ. ಅವರ ಮುಂದಿನ ಭವಿಷ್ಯದ ನಿರ್ಧಾರ ಅವರು ತೆಗೆದುಕೊಳ್ಳಬೇಕೆಂದ ಬಯಕೆ ನನ್ನದು. ನನ್ನ ಆರ್ಶಿವಾದ ಸದಾ ಅವರ ಮೇಲೆ ಇರುತ್ತದೆ ಎಂದು ಹೇಳಿದ್ದರು.

ಇನ್ನೂ ಮಾಹಿತಿಗಳ ಪ್ರಕಾರ ಅಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ರವರ ಮದುವೆ ದಕ್ಷಿಣ ಭಾರತದ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅಥಿಯಾ ಶೆಟ್ಟಿ ಯುಕೆ ದೇಶದಲ್ಲಿ ರಾಹುಲ್ ಜೊತೆ ಪ್ರೇಮ ಪಯಣ ಸಾಗಿಸುತ್ತಿರುವ ಕುರಿತು ಸಾಕಷ್ಟು ವದಂತಿಗಳು ಬಂದಿದ್ದವು.  ಬಳಿಕ ಅಹಾನ್ ಶೆಟ್ಟಿ ರವರ ಮೊದಲ ಸಿನೆಮಾ ತಡಪ್ ಪ್ರೀಮಿಯರ್‍ ಶೋ ಕಾರ್ಯಕ್ರಮದಲ್ಲಿ ಇವರಿಬ್ಬರೂ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಸದ್ಯ ಬಾಲಿವುಡ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಅಭಿಮಾನಿಗಳು ಅಥಿಯಾ ಹಾಗೂ ರಾಹುಲ್ ಮದುವೆ ಸಮಾರಂಭವನ್ನು ನೋಡಲು ಕಾತುರರಾಗಿದ್ದಾರೆ.

Previous articleಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೊತೆ ಕಾಣಿಸಿಕೊಂಡು ವ್ಯಕ್ತಿಯ ಬಗ್ಗೆ ಮಾಹಿತಿ ಬಹಿರಂಗ…
Next articleಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ….?