ಮಗು ಆಗೋಕ್ಕಿಂತ ಮುಂಚೆಯೇ ವಿದೇಶದಲ್ಲಿ ಶಾಪಿಂಗ್ ಹೊರಟ ಬಾಲಿವುಡ್ ನಟ..!

ಬಾಲಿವುಡ್ ಸಿನಿರಂಗದ ಕ್ಯೂಟ್ ಕಪಲ್ಸ್ ಆಲಿಯಾ ಹಾಗೂ ರಣಭೀರ್‍ ಶೀಘ್ರದಲ್ಲೇ ತಂದೆ ತಾಯಿಯಾಗಲಿದ್ದಾರೆ. ಈ ಖುಷಿಯ ವಿಚಾರವನ್ನು ಪೊಟೋ ಒಂದನ್ನು ಶೇರ್‍ ಮಾಡುವ ಮೂಲಕ ಅಭಿಮಾನಿಗಳಿಗೆ ವಿಚಾರ ತಿಳಿಸಿದ್ದರು. ಇನ್ನೂ ಬಾಲಿವುಡ್ ಸೆಲೆಬ್ರೆಟಿಗಳೂ ಸೇರಿದಂತೆ ಅವರ ಅಭಿಮಾನಿಗಳು ಜೋಡಿಗೆ ಶುಭಾಷಯಗಳನ್ನು ತಿಳಿಸಿದ್ದರು. ಜೊತೆಗೆ ಡ್ಯುರೆಕ್ಸ್ ಕಾಂಡೋಮ್ ಕಂಪನಿ ಸಹ ವಿಭಿನ್ನವಾಗಿ ವಿಶ್ ಮಾಡಿದ್ದು, ಇದು ಎಲ್ಲೆಡೆ ವೈರಲ್ ಆಗಿತ್ತು. ಸದ್ಯ ಇದೀಗ ಮತ್ತೊಂದು ವಿಚಾರ ಈ ಜೋಡಿಯ ಬಗ್ಗೆ ಸುದ್ದಿಯಾಗುತ್ತಿದೆ.

ಅಲಿಯಾ ಹಾಗೂ ರಣಬೀರ್‍ ಇಷ್ಟೊಂದು ಬೇಗ ಗುಡ್ ನ್ಯೂಸ್ ನೀಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸದ್ಯ ಆಲಿಯಾ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆಕೆ ಗರ್ಭಿಣಿಯಾದ ವಿಚಾರ ಹೊರಬಂದಿದ್ದು, ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿ ಮಾಡಿದೆ. ನಟಿ ಆಲಿಯಾ ಇತ್ತೀಚಿಗಷ್ಟೆ RRR ಸಿನೆಮಾದಲ್ಲೂ ನಟಿಸುವ ಮೂಲಕ ತೆಲುಗು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದರು. ಜೊತೆಗೆ ಎನ್.ಟಿ.ಆರ್‍ ರವರ ಮುಂದಿನ ಸಿನೆಮಾದಲ್ಲಿ ಆಲಿಯಾ ನಟಿಸಲಿದ್ದಾರೆ ಎಂಬ ಸುದ್ದಿ ಸಹ ಹರಿದಾಡಿತ್ತು. ಆದರೆ ಈಕೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಲಿಯಾ ಪತಿ ರಣಬೀರ್‍ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮ ಮುಂದಿನ ಸಿನೆಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಣಬೀರ್‍ ಸ್ಪೇನ್ ನಲ್ಲಿ ಸಿನೆಮಾ ಶೂಟಿಂಗ್ ಒಂದರಲ್ಲಿ ಭಾಗಿಯಾಗಿದ್ದಾರೆ. ಅಲ್ಲಿಂದಲೇ ತಮ್ಮ ಸಂತೋವನ್ನು ಎಲ್ಲರೋಂದಿಗೆ ಹಂಚಿಕೊಂಡಿದ್ದರಂತೆ.

ಅಷ್ಟೇ ಅಲ್ಲದೇ ತಮಗೆ ಹುಟ್ಟುವ ಮಗುವಿಗೆ ಸ್ಪೇನ್ ನಲ್ಲಿ ರಣಬೀರ್‍ ಶಾಪಿಂಗ್ ಗೆ ಹೊರಟಿದ್ದಾರಂತೆ. ನ್ಯೂ ಬಾರ್ನ್ ಬೇಬಿಗಾಗಿ ಬೇಕಾಗುವಂತಹ ಬಟ್ಟೆಗಳನ್ನು ಹಾಗೂ ಕೆಲವೊಂದು ವಸ್ತುಗಳನ್ನು ಖರೀದಿಸಲು ಹೊರಟಿದ್ದಾರೆ. ಇನ್ನೂ ರಣಬೀರ್‍ ಹತ್ತಿರದವರು ಸೋಷಿಯಲ್ ಮಿಡಿಯಾದಲ್ಲಿ ರಣಬೀರ್‍ ಏನು ಕೊಂಡುಕೊಂಡಿದ್ದಾರೆ ಎಂಬ ವಿಚಾರಗಳ ಬಗ್ಗೆ ಚರ್ಚಿಸಿಕೊಳ್ಳುತ್ತಿದ್ದಾರೆ. ಇನ್ನೂ ರಣಬೀರ್‍ ತಂದೆಯಾಗುತ್ತಿರುವ ವಿಚಾರಕ್ಕೆ ಅವರ ಇಡೀ ಕುಟುಂಬ ತುಂಬಾ ಸಂತೋಷದಿಂದ ಸಂಭ್ರಮಿಸುತ್ತಿದ್ದಾರಂತೆ. ಸದ್ಯ ರಣಬೀರ್‍ ಸ್ಪೇನ್ ನಲ್ಲಿ ತಮ್ಮ ಮಗುವಿಗಾಗಿ ಶಾಪಿಂಗ್ ಗೆ ಹೋಗಿದ್ದು ಎಲ್ಲರ ಗಮನ ಸೆಳೆದಿದೆ.

ಇನ್ನೂ ಅಲಿಯಾ ಹಾಗೂ ರಣಬೀರ್‍ ರವರಿಗೆ ಮದುವೆಯಾಗಿ ಇನ್ನೂ ಮೂರು ತಿಂಗಳು ಸಹ ಕಳೆದಿಲ್ಲ. ಆಗಲೇ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ವಿವಿಧ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ. ಇಷ್ಟೊಂದು ತ್ವರಿತವಾಗಿ ಗರ್ಭಿಣಿಯಾಗಿದ್ದಾರೆ ಎಂದರೇ ಮದುವೆಗೂ ಮುಂಚೆಯೇ ಆಲಿಯಾ ಗರ್ಭಿಣಿಯಾಗಿದ್ದರೇ ಎಂಬ ಸಂದೇಹಗಳನ್ನು ವ್ಯಕ್ತ ಮಾಡುತ್ತಿದ್ದಾರೆ. ಆದರೆ ಅದು ಏನೆ ಆಗಲಿ ಆಲಿಯಾ ಹಾಗೂ ರಣಬೀರ್‍ ಕುಟುಂಬ ಮಾತ್ರ ಈ ಸಂತಸದ ಕ್ಷಣಗಳನ್ನು ತುಂಬಾನೇ ಎಕ್ಸೈಟ್ ಆಗಿ ಸಂಭ್ರಮಿಸುತ್ತಿದ್ದಾರೆ.

Previous articleಪುಷ್ಪಾ-2 ಸಿನೆಮಾದಲ್ಲಿ ಮತ್ತೊಂದು ಟ್ವಿಸ್ಟ್, ಪುಷ್ಪಾ-2 ನಲ್ಲಿ ಮತ್ತೊಬ್ಬ ಕಾಲಿವುಡ್ ಸ್ಟಾರ್…!
Next articleಸ್ಯಾಡ್ ನ್ಯೂಸ್, ಸಿನಿರಂಗದ ಖ್ಯಾತ ನಟಿಯ ಪತಿ ಹಠಾತ್ ಮರಣ, ಸಿನಿರಂಗದಲ್ಲಿ ವಿಷಾದ…!