ಇತ್ತೀಚಿಗಷ್ಟೆ ಬಾಲಿವುಡ್ ನಲ್ಲಿ ವಿಭಿನ್ನ ನಟ ಎಂದು ಕರೆಯಲಾಗುವ ರಣವೀರ್ ಸಿಂಗ್ ಬೆತ್ತಲೆಯಾಗಿ ಪೊಟೋಶೂಟ್ ಮಾಡಿಸಿ ಸಖತ್ ಸುದ್ದಿಯಾಗಿದ್ದರು. ಸಾಮಾನ್ಯವಾಗಿ ನಟಿಯರು ನಗ್ನವಾಗಿ ಪೊಟೋಶೂಟ್ ಮಾಡಿಸುತ್ತಾರೆ. ಆದರೆ ರಣವೀರ್ ಬೆತ್ತಲೆ ಪೊಟೋಶೂಟ್ ಮಾಡಿಸಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದ್ದರು. ಆತ ಕಾಣಿಸಿಕೊಂಡ ಬೆತ್ತಲೆಯ ಅವತಾರಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲ ನೀಡಿದ್ದರೇ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಆತನ ಬೆತ್ತಲೆ ಅವತಾರಕ್ಕೆ ಎಲ್ಲಾ ಕಡೆ ಆತನನ್ನು ಟ್ರೋಲ್ ಮಾಡಿದ್ದರು. ಬೆತ್ತಲೆಯ ಪೊಟೋಶೂಟ್ ಗಾಗಿ ರಣವೀರ್ ಪಡೆದುಕೊಂಡ ಸಂಭಾವನೆ ಎಷ್ಟು ಎಂಬುದರ ಬಗ್ಗೆ ತಿಳಿಯೋಣ ಬನ್ನಿ..
ಪೇಪರ್ ಎಂಬ ನಿಯತಕಾಲಿಕೆಯೊಂದಕ್ಕೆ ರಣವೀರ್ ಸಿಂಗ್ ಬೆತ್ತಲೆ ಪೊಟೋಶೂಟ್ ಮಾಡಿಸಿದ್ದರು. ಬಾಲಿವುಡ್ ನಲ್ಲಿ ತನ್ನದೇ ಆದ ಕ್ರೇಜ್ ಫೇಮ್ ದಕ್ಕಿಸಿಕೊಂಡ ನಟ ರಣವೀರ್ ಸಿಂಗ್ ಎಂದು ಹೇಳಲಾಗುತ್ತದೆ. ತನ್ನದೇ ಆದ ಕ್ರೇಜ್ ದಕ್ಕಿಸಿಕೋಂಡ ರಣವೀರ್ ಯುವಜನತೆಯಲ್ಲಿ ಒಳ್ಳೆಯ ಕ್ರೇಜ್ ಸಂಪಾದಿಕೊಂಡಿದ್ದಾರೆ. ಇನ್ನೂ ರಣವೀರ್ ಕಡಿಮೆ ಸಮಯದಲ್ಲೇ ಸ್ಟಾರ್ ಡಮ್ ದಕ್ಕಿಸಿಕೊಂಡ ನಟನಾಗಿದ್ದಾರೆ. ರಣವೀರ್ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಕಾರಣಕ್ಕೆ ನಿರ್ಮಾಪಕರಲ್ಲೂ ಸಹ ರಣವೀರ್ ತುಂಬಾ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಇನ್ನೂ ರಣವೀರ್ ಆಗಾಗ ಎಲ್ಲರನ್ನೂ ಶಾಕ್ ಗೆ ಗುರಿಯಾಗುವಂತಹ ಪೊಟೋಶೂಟ್ ಗಳನ್ನು ಮಾಡಿಸುತ್ತಿರುತ್ತಾರೆ. ಇದೇ ಹಾದಿಯಲ್ಲಿ ಆತ ವಿಭಿನ್ನವಾದ ಡ್ರೆಸ್ ಗಳಲ್ಲಿ ಕಾಣಿಸಿಕೊಳುತ್ತಿರುತ್ತಾರೆ. ಇನ್ನೂ ದೀಪಿಕಾರನ್ನು ಮದುವೆಯಾದ ಬಳಿಕವೂ ರಣವೀರ್ ಮೊದಲಿನಂತೆ ತನ್ನ ಲೈಫ್ ಸಾಗಿಸುತ್ತಿದ್ದಾರೆ.
ಇನ್ನೂ ರಣವೀರ್ ಇತ್ತೀಚಿಗೆ ಖ್ಯಾತ ನಿಯತಕಾಲಿಕೆ ಪತ್ರಿಕೆಯೊಂದಕ್ಕೆ ಬೆತ್ತಲೆ ಪೊಟೋಶೂಟ್ ಮಾಡಿಸಿದ್ದರು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇಂಟರ್ ನೆಟ್ ಅನ್ನು ಶೇಕ್ ಮಾಡಿತ್ತು. ಸೆಲೆಬ್ರೆಟಿಗಳೂ ಸಹ ರಣವೀರ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೇವಲ ಒಂದೆ ಒಂದು ಪೊಟೋ ಮೂಲಕವೇ ವಿಶ್ವ ಮಟ್ಟದಲ್ಲಿ ಸುದ್ದಿಯಾದರು. ಈಗಲೂ ಸಹ ರಣವೀರ್ ಬೆತ್ತಲೆ ಪೊಟೋಗಳ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಇದೀಗ ಈ ಬೆತ್ತಲೆ ಪೊಟೋಗಳ ಬಗ್ಗೆ ಮತ್ತೆ ಹೊಸ ಚರ್ಚೆ ಶುರುವಾಗಿದೆ. ಅದು ಬೇರೆ ಏನೂ ಅಲ್ಲ ಬೆತ್ತಲೆ ಪೊಟೋಶೂಟ್ ಗೆ ಆತ ತೆಗೆದುಕೊಂಡ ಸಂಭಾವನೆ ಎಷ್ಟು ಎಂಬುದರ ಬಗ್ಗೆ. ಮೈ ಮೇಲೆ ದಾರದಷ್ಟು ಬಟ್ಟೆಯಿಲ್ಲದೇ ಆತ ಕಾಣಿಸಿಕೊಳ್ಳಲು ಎಷ್ಟು ಮೊತ್ತ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.
ಈಗಾಗಲೇ ರಣವೀರ್ ಅನೇಕ ಪೊಟೋಶೂಟ್ ಗಳನ್ನು ಮಾಡಿಸಿದ್ದರು. ಆದರೆ ಎಂದೂ ಬೆತ್ತಲೆಯಾಗಿ ಕಾಣಿಸಿಕೊಂಡಿರಲಿಲ್ಲ. ಇನ್ನೂ ಈ ಪೊಟೋಗಳಿಗೆ ಅನೇಕರು ಟೀಕೆ ಮಾಡುತ್ತಿದ್ದರೂ ಸಹ ರಣವೀರ್ ಮಾತ್ರ ಬಾಯಿ ಬಿಟ್ಟಿಲ್ಲ. ಆತ ತನ್ನ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಸದ್ಯ ನಟ ರಣವೀರ್ ಬೆತ್ತಲೆ ಪೊಟೋ ಶೂಟ್ ಗಾಗಿ ಬರೊಬ್ಬರಿ 45-50 ಕೋಟಿಯಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಇದೀಗ ಚರ್ಚೆಯಾಗುತ್ತಿದೆ. ಆದರೆ ಅಧಿಕೃತವಾಗಿ ಈ ವಿಚಾರ ಎಲ್ಲೂ ಪ್ರಕಟವಾಗದ ಕಾರಣ ನಿಜಾಂಶ ಹೊರಬರಲು ಮತಷ್ಟು ದಿನ ಕಾಯಬೇಕಿದೆ.