ಆಧ್ಯಾತ್ಮಿಕತೆಯತ್ತ ವಾಲಿದ ಬೋಲ್ಡ್ ಬ್ಯೂಟಿ ಪಾಯಲ್, ವೈರಲ್ ಆದ ಪೊಟೋಸ್….!

ತೆಲುಗಿನಲ್ಲಿ RX100 ಸಿನೆಮಾದ ಮೂಲಕ ಫೇಮ್ ಪಡೆದುಕೊಂಡ ಪಾಯಲ್ ರಾಜ್ ಪೂತ್ ಸಿನಿರಂಗದಲ್ಲಿ ತೆಲುಗು ಸಿನಿರಂಗದಲ್ಲಿ ಬೋಲ್ಡ್ ಬ್ಯೂಟಿ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಸಿನೆಮಾದಲ್ಲಿ ಪಾಯಲ್ ರವರ ಹಾಟ್ ಲುಕ್ಸ್ ನಟನೆಗೆ ಎಲ್ಲರೂ ಫಿದಾ ಆಗಿದ್ದರು. ಬಾಕ್ಸ್ ಆಫೀಸ್ ನಲ್ಲೂ ಸಹ ಈ ಸಿನೆಮಾ ದೊಡ್ಡ ಮಟ್ಟದ ಸಕ್ಸಸ್ ಗಳಿಸಿತ್ತು. ಬಳಿಕ ಕೆಲವೊಂದು ಸಿನೆಮಾಗಳೂ ಸೋಲನ್ನು ಕಂಡರೂ ಆಕೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಹಾಟ್ ನಟಿಯಾಗಿ ಅಳಿಸಲಾಗದ ಮುದ್ರೆಯನ್ನು ಹಾಕಿಕೊಂಡಿದ್ದಾರೆ. ಇಲ್ಲಿಯವರೆಗೂ ಬೋಲ್ಡ್ ಆಗಿ ಕಾಣಿಸಿಕೊಂಡ ಪಾಯಲ್ ಇದೀಗ ಆಧ್ಯಾತ್ಮಿಕತೆಯತ್ತ ವಾಲಿದ್ದಾರೆ. ಆಕೆಯ ಪೊಟೋಗಳು ಸಹ ವೈರಲ್ ಆಗುತ್ತಿವೆ.

ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಪಂಜಾಬಿ ಮೂಲದ ನಟಿಯಾಗಿದ್ದಾರೆ. ಆಕೆಯ ಸಿನೆಮಾಗಳಲ್ಲೂ ಹಾಗೂ ಸೋಷಿಯಲ್ ಮಿಡಿಯಾ ಎರಡರಲ್ಲೂ ಹೆಚ್ಚಾಗಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ಸೋಷಿಯಲ್  ಮಿಡಿಯಾದಲ್ಲಿ ಆಧ್ಯಾತ್ಮಿಕತೆಯಿಂದ ದೇವರ ದರ್ಶನ ಪಡೆದುಕೊಂಡು ಟ್ರೆಡಿಷಿನಲ್ ಲುಕ್ಸ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಪಾಯಲ್ ದೇವರ ಸನ್ನಿಧಿಯಲ್ಲಿ ಆಧ್ಯಾತ್ಮಿಕತೆಯ ಚಿಂತನೆಯಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್‍ ಚೂಡಿದಾರ್‍ ಧರಿಸಿ ವೆಂಕಟೇಶ್ವರನ ದೇವಾಲಯದಲ್ಲಿ ಪ್ರತ್ಯೇಕವಾದ ಪೂಜೆಗಳನ್ನು ಮಾಡಿದೆ. ಹಣೆಗೆ ನಾಮಗಳನ್ನು ಹಾಕಿಕೊಂಡು ದೇವರನ್ನು ಸ್ಮರಿಸಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಪಾಯಲ್ ರವರ ಈ ಹೊಸ ಲುಕ್ಸ್ ಗೆ ಅಭಿಮಾನಿಗಳು ವಿಭಿನ್ನವಾದ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸ್ಟಾರ್‍ ನಟಿ ರಾಶಿಖನ್ನಾ ಸಹ ಫಿದಾ ಆಗಿ ಆಕೆಯನ್ನು ಹೊಗಳಿದ್ದಾರೆ. ಇನ್ನೂ ಕೆರಿಯರ್‍ ಬಗ್ಗೆ ಹೇಳುವುದಾದರೇ, ಪಾಯಲ್ ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಆಕೆಗೆ ಬಂದ ಅವಕಾಶಗಳನ್ನು ಮಾತ್ರ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸೋಲು ಗೆಲುವು ಎಂಬುದನ್ನು ಪರಿಗಣಿಸದೇ ಹಿಟ್ ಸಿನೆಮಾಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಜರ್ನಿ ಸಾಗಿಸುತ್ತಿದ್ದಾರೆ. ಆಕೆ ಇತ್ತೀಚಿಗಷ್ಟೆ ಮಂಚು ವಿಷ್ಣು ಜೊತೆಗೆ ಜಿನ್ನಾ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಆಕೆಗೆ ತುಂಬಾ ನಿರಾಸೆಯನ್ನು ಉಳಿಸಿದೆ. ಸದ್ಯ ಆಕೆ ಏಂಜಲ್ ಎಂಬ ತಮಿಳು ಸಿನೆಮಾ ಹಾಗೂ ಕಿರಾತಕ ಎಂಬ ತೆಲುಗು ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನೂ ಸಿನೆಮಾಗಳ ಜೊತೆಗೆ ಪಾಯಲ್ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಡುತ್ತವೆ. ಜೊತೆಗೆ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿರುತ್ತಾರೆ.

Previous articleಪಬ್ಲಿಕ್ ನಲ್ಲಿ ಪ್ರಣಿತಾ ಮಾಡಿದ ಆ ಕೆಲಸಕ್ಕೆ ಸಿಕ್ಕಾಪಟ್ಟೆ ಟ್ರೋಲ್, ತಾಳಲಾರದೆ ಹೋದ್ರಾ ಎಂದ ನೆಟ್ಟಿಗರು…!
Next articleಪುನೀತ್ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ನೀಡಲು ಸೂಪರ್ ಸ್ಟಾರ್ ಗಳು ಬರಲಿದ್ದಾರೆ…!