ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಈಗಾಗಲೇ ಕೆಲವೊಂದು ಕನ್ನಡ ಸಿನೆಮಾಗಳಲ್ಲಿ ಐಟಂ ಸಾಂಗ್ ಗಳಲ್ಲಿ ಹಾಡಿ ಕುಣಿದಿದ್ದಾರೆ. ಇದೀಗ ಮತ್ತೊಂದು ಸಿನೆಮಾಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಸ್ಟಾರ್ ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಸಿನೆಮಾ ಶೂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದೀಗ ಈ ಸಿನೆಮಾಗೆ ನಟಿ ಸನ್ನಿ ಲಿಯೋನ್ ಸಹ ಎಂಟ್ರಿ ಕೊಟ್ಟಿದ್ದು, ಪ್ರಮುಖ ಪಾತ್ರವೊಂದರಲ್ಲಿ ಸನ್ನಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಾಗಲೇ ಆಕೆ ಭಾಗದ ಶೂಟೀಂಗ್ ಕೆಲಸ ಸಹ ಮುಗಿದಿದೆ ಎಂದು ಹೇಳಲಾಗುತ್ತಿದ್ದು, ಈ ಸಿನೆಮಾದಲ್ಲಿ ಆಕೆಯ ಪಾತ್ರ ಹೈಲೈಟ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸುಮಾರು ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ನಿರ್ದೇಶನಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಅಪರೂಪದ ಕಥೆಯನ್ನು ಆಧರಿಸಿ ಈ ಸಿನೆಮಾ ಶೂಟಿಂಗ್ ನಡೆಯುತ್ತಿದೆ. ಈ ಸಿನೆಮಾದ ಟೈಟಲ್ ಅನಾವರಣವೇ ತುಂಬಾ ವಿಭಿನ್ನವಾಗಿ ನಡೆದಿತ್ತು. ಅದರ ಜೊತೆಗೆ ಟೈಟಲ್ ಸಹ ವಿಭಿನ್ನವಾಗಿಯೇ ಇದೆ. ಈ ಸಿನೆಮಾದಲ್ಲಿ ಉಪೇಂದ್ರ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ದೊಡ್ಡ ತಾರಾಬಣ ಸಹ ಈ ಸಿನೆಮಾದಲ್ಲಿದೆ. ಇದೀಗ ಈ ಸಿನೆಮಾಗೆ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿರುವುದು ಮತಷ್ಟು ಕ್ರೇಜ್ ಹುಟ್ಟಿಸಿದೆ. ಇನ್ನೂ ಸನ್ನಿ ಲಿಯೋನ್ ರವರ ಪಾತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದೆ. ಈ ಹಿಂದೆ ಸನ್ನಿ ಕೇವಲ ಐಟಂ ಸಾಂಗ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಯುಐ ಸಿನೆಮಾದಲ್ಲಿ ಆಕೆ ಕೆಲ ಸಮಯ ಸ್ಕ್ರೀನ್ ನಲ್ಲಿ ರಂಜಿಸಲಿದ್ದಾರೆ. ಸದ್ಯ ಈ ಸುದ್ದಿ ಕನ್ನಡ ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಇನ್ನೂ ಸನ್ನಿ ಲಿಯೋನ್ ಈ ಹಿಂದೇ ಕೇವಲ ಐಟಂ ಸಾಂಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನ ಸಿನೆಮಾ ಒಂದರಲ್ಲಿ ಶೇಷಮ್ಮ ಹಾಡಿನ ಮೂಲಕ ಸಖತ್ ಫೇಂ ಪಡೆದುಕೊಂಡಿದ್ದರು. ಬಳಿಕ ಚಾಂಪಿಯನ್ ಎಂಬ ಕನ್ನಡ ಸಿನೆಮಾದಲ್ಲೂ ಸಹ ಡಿಂಗರಬಿಲ್ಲಿ ಎಂಬ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದ್ದರು. ಸೌತ್ ನಲ್ಲೂ ಸಹ ಆಕೆಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.ಇದೀಗ ಉಪೇಂದ್ರ ರವರ ಯುಐ ಸಿನೆಮಾದಲ್ಲೂ ಸಹ ಸನ್ನಿ ಲಿಯೋನ್ ನಟಿಸುತ್ತಿದ್ದು, ಸನ್ನಿ ಲಿಯೋನ್ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.
ಇನ್ನೂ ಇತ್ತೀಚಿಗಷ್ಟೆ ಉಪೇಂದ್ರ ರವರ ಆರೋಗ್ಯದ ಬಗ್ಗೆ ಕೆಲವೊಂದು ರೂಮರ್ ಗಳು ಹರಿದಾಡಿತ್ತು. ಶೂಟಿಂಗ್ ಸಮಯದಲ್ಲಿ ನಟ ಉಪೇಂದ್ರ ರವರಿಗೆ ಉಸಿರಾಟದ ಸಮಸ್ಯೆಯಾಗಿತ್ತು. ಈ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೂಮರ್ ಗಳನ್ನು ಹರಿಬಿಡಲಾಗಿತ್ತು. ಬಳಿಕ ಯುಐ ಶೂಟಿಂಗ್ ಸೆಟ್ ನಿಂದಲೇ ತನಗೆ ಏನು ಆಗಿಲ್ಲ ಎಂದು ವಿಡಿಯೋ ಮೂಲಕ ಸಂದೇಶ ರವಾನಿಸಿ ರೂಮರ್ ಗಳಿಗೆ ಅಂತ್ಯ ಹಾಡಿದರು.
Bold Actress, Director Upendra, Item Song, Kabza Movie, Kannada Hero, sandalwood, Sunny Leone, UI movie, Upendra, Upendra New movie, Uppi UI, Viral Comments

Recommended for you