ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ, ನಿನ್ನನ್ನು ಮದುವೆಯಾಗಬೇಕು ಅಂತಾ ಇದ್ದೇನೆ ಎಂದ ಅಭಿಮಾನಿ…!

ಸಾಮಾನ್ಯವಾಗಿ ಸಿನಿರಂಗದ ಸೆಲೆಬ್ರೆಟಿಗಳಿಗೆ ಸದಾ ಎದುರಾಗುವಂತಹ ಪ್ರಶ್ನೆ ಒಂದೆ ಅದು ಮದುವೆ ಯಾವಾಗ ಎಂದು. ಇಂದಿಗೂ ಸಹ ಮದುವೆಯ ವಯಸ್ಸು ದಾಟಿದ ಅನೇಕ ನಟಿಯರು ಸಿನಿರಂಗದಲ್ಲಿದ್ದಾರೆ. ಇನ್ನೂ ಮದುವೆಯ ಬಗ್ಗೆ ಪ್ರಶ್ನೆಗಳು ಬಂದಾಗಲೆಲ್ಲಾ ಅವರು ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ಪಂಜಾಬಿ ಮೂಲದ ನಟಿಯೊಬ್ಬರು ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ. ಆಕೆ ಯಾರು, ಮದುವೆಯ ಬಗ್ಗೆ ಆಕೆ ಹೇಳಿದ್ದಾದರೂ ಏನು, ಮದುವೆ ಬದಲು 24 ಗಂಟೆ ಅದೇ ಕೆಲಸ ಮಾಡುತ್ತೇನೆ ಎಂದಿದ್ದು ಯಾಕೆ ಎಂಬ ವಿಚಾರಕ್ಕೆ ಬಂದರೇ,

ಮದುವೆಯ ಬಗ್ಗೆ ಶಾಕಿಂಗ್ ಆಗಿ ಕಾಮೆಂಟ್ ಮಾಡಿದ ನಟಿ ಬೇರೆ ಯಾರೂ ಅಲ್ಲ ಆಕೆ ಪಂಚಾಬಿ ಮೂಲದ ಬೋಲ್ಡ್ ನಟಿ ಷಹನಾಜ್ ಗಿಲ್. ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾಡುವ ಸದ್ದು ಅಷ್ಟಿಷ್ಟಲ್ಲ. ಆಕೆ ಮಾಡುವ ಸದ್ದಿಗೆ ಇಡೀ ಸೋಷಿಯಲ್ ಮಿಡಿಯಾ ಅಲುಗಾಡುತ್ತದೆ ಎಂಬ ಮಾತುಗಳೂ ಸಹ ಇದೆ. ಸದಾ ಸುದ್ದಿಯಲ್ಲೇ ಇರುತ್ತಾರೆ ಈಕೆ. ಇನ್ನೂ ಷಹನಾಜ್ ಗಿಲ್  ಬಿಗ್ ಭಾಸ್ 13 ಹಿಂದಿಯಲ್ಲಿ ಭಾಗವಹಿಸಿ ಖ್ಯಾತಿ ಗಳಿಸಿಕೊಂಡಿದ್ದರು. ಈ ಸೀಸನ್ ನಲ್ಲಿ ಆಕೆ ರನ್ನರ್‍ ಅಪ್ ಆಗಿ ತುಂಬಾ ಕ್ರೇಜ್ ಪಡೆದುಕೊಂಡರು. ಬಿಗ್ ಬಾಸ್ ಮೂಲಕ ಆಕೆ ರಾತ್ರೋರಾತ್ರಿ ಕ್ರೇಜಿ ನಟಿಯಾದರು. ಈ ಹಾದಿಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿದಲ್ಲಿ ದೊಡ್ಡದಾದ ಸದ್ದು ಮಾಡಲು ಶುರು ಮಾಡಿಕೊಂಡರು. ಅಷ್ಟೇಅಲ್ಲದೇ ಆಕೆ ಬಿಗ್ ಬಾಸ್13 ನಲ್ಲಿ ಟ್ರೋಫಿ ಗೆದ್ದ ಸಿದ್ದಾರ್ತ್ ಶುಕ್ಲಾ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ವಿಚಾರಕ್ಕೆ ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ.

ಇನ್ನೂ ಕಳೆದ ವರ್ಷ ಆಕಸ್ಮಿಕವಾಗಿ ಹೃದಯಾಘಾತದಿಂದ ಶುಕ್ಲಾ ಮರಣ ಹೊಂದಿದ್ದರು. ಈ ಸಮಯದಲ್ಲಿ ಶುಕ್ಲಾ ಹಾಗೂ ಷಹನಾಜ್ ನಡುವಣ ರಿಲೇಷನ್ ಶಿಪ್ ಬಗ್ಗೆ ಜೋರಾದ ಚರ್ಚೆಗಳೂ ಸಹ ನಡೆದಿದ್ದವು. ಇನ್ನೂ ಸದ್ಯ ಶುಕ್ಲಾ ನೆನಪುಗಳಿಂದ ಹೊರಬಂದ ಷಹನಾಜ್ ತನ್ನ ಕೆರಿಯರ್‍ ಮೇಲೆ ದೃಷ್ಟಿಯನ್ನು ಇಟ್ಟಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಆಕೆ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಅಭಿಮಾನಿಯೊಬ್ಬ ಆಕೆಗೆ ಮದುವೆಯ ಬಗ್ಗೆ ಕೇಳಿದ್ದಾನೆ. ಅಂದರೇ ನೇರವಾಗಿ ಅಭಿಮಾನಿ ನಾನು ನಿಮ್ಮನ್ನು ಮದುವೆಯಾಗಲು ಇಷ್ಟಪಡುತ್ತಿದ್ದೇನೆ ಎಂದು ಪ್ರಪೋಜ್ ಮಾಡಿದ್ದಾರೆ. ಇದಕ್ಕೆ ಷಹನಾಜ್ ಸಹ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಕೊಟ್ಟಿದ್ದಾರೆ. ಸದ್ಯ ಆಕೆ ಕೊಟ್ಟ ಉತ್ತರ ಎಲ್ಲಡೆ ವೈರಲ್ ಆಗುತ್ತಿದೆ.

ಅಭಿಮಾನಿ ಕೇಳಿದ ಪ್ರಪೋಸಲ್ ಗೆ ಉತ್ತರಿಸುತ್ತಾ ನನ್ನ ಜೊತೆ ಮದುವೆನಾ, ಹಾಗಾದರೇ ನಿಮ್ಮ ವಿವರ ಕಳುಹಿಸಿಕೊಡಿ, ಯಾಕೆಂದರೇ ನನ್ನನ್ನು ಮದುವೆಯಾಗುವ ವ್ಯಕ್ತಿಗೆ ತುಂಬಾ ಸಹನೆ ಇರಬೇಕು. ನನ್ನ ಜೊತೆ ಅಷ್ಟೊಂದು ಸುಲಭವಾಗಿರಲ್ಲ. ಬೇರೆಯವರು ಹೇಳುವುದನ್ನು ನಾನು ಕೇಳುವುದಿಲ್ಲ. ನಾನು ಮಾತ್ರ 24 ಗಂಟೆ ಮಾತನಾಡುತ್ತಲೇ ಇರುತ್ತೇನೆ. ನಾನು ಹೇಳೊದನ್ನು ನೆಮ್ಮದಿಯಿಂದ ಕೇಳಬೇಕು ಎಂದು ಷಹನಾಜ್ ಹೇಳಿದ್ದಾರೆ. ಅಷ್ಟೇಅಲ್ಲದೇ ನಾನು ಹೇಳಿದ್ದನ್ನು ಕೇಳದೇ ಇದ್ದರೂ, ನನ್ನನ್ನು ಉದಾಸೀನ ಮಾಡಿದರೂ ನಾನು ಹೋಗಿಬಿಡುತ್ತೇನೆ. ನನ್ನನ್ನು ಮದುವೆಯಾದರೇ ತುಂಬಾ ದಿನ ಇರುವುದಿಲ್ಲ. ಆದರ ಕಾರಣ ಯಾರಾದರೂ ನನ್ನ ಜೊತೆ ಮದುವೆಯಾಗುವ ಬಗ್ಗೆ ಊಹೆ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಸದ್ಯ ಆಕೆಯ ಈ ಉತ್ತರಕ್ಕೆ ಪ್ರಪೋಜ್ ಮಾಡಿದ ಅಭಿಮಾನಿ ಶಾಕ್ ಆಗಿದ್ದಾನಂತೆ.

Previous articleಪತ್ನಿಯೊಂದಿಗೆ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ ಜೂನಿಯರ್ ಎನ್.ಟಿ.ಆರ್, ವೈರಲ್ ಆಯ್ತು ಪೊಟೋ….!
Next articleನಟಿ ನಿವೇದಿತಾಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳು ಸಿಗುತ್ತಿಲ್ಲವಂತೆ…!