ಎರಡನೇ ಮದುವೆಯಾಗುವ ಪ್ಲಾನ್ ಮಾಡುತ್ತಿದ್ದಾರಂತೆ ಖ್ಯಾತ ನಟಿ ಅಮಲಾಪಾಲ್…!

ಸಿನಿರಂಗದಲ್ಲಿ ಅನೇಕ ನಟಿಯರು ಬಂದು ಹೋಗುತ್ತಿರುತ್ತಾರೆ. ಅವರ ಪೈಕಿ ಕೆಲ ನಟಿಯರು ಮಾತ್ರ ವಿಶೇಷವಾದ ಸಾಧನೆ ಮಾಡುವ ಮೂಲಕ ಖ್ಯಾತಿ ಪಡೆಯುತ್ತಾರೆ. ಈ ಸಾಲಿಗೆ ಮಲಯಾಳಂ ನಟಿ ಅಮಲಾ ಪಾಲ್ ಸಹ ಸೇರುತ್ತಾರೆ. ಟಾಲಿವುಡ್ ನಲ್ಲಿ ದೊಡ್ಡ ಹೆಸರು ಗಳಿಸಿಕೊಂಡ ಈಕೆ ದೊಡ್ಡ ಅಭಿಮಾನಿ ಬಳಗವನ್ನು ಸ್ವಂತ ಮಾಡಿಕೊಂಡಿದ್ದಾರೆ. ನಟಿ ಅಮಲಾಪಾಲ್ ಹೆಚ್ಚಾಗಿ ಕಮರ್ಷಿಯಲ್ ಸಿನೆಮಾಗಳಲ್ಲಿ ಗ್ಲಾಮರಸ್ ಪಾತ್ರಗಳನ್ನೇ ಮಾಡಿದ್ದಾರೆ. ಇತ್ತೀಚಿಗೆ ಆಕೆ ಲೇಡಿ ಓರಿಯೆಂಟೆಂಡ್ ಬೋಲ್ಡ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಎರಡನೇ ಮದುವೆಯಾಗುವ ಪ್ಲಾನ್ ಮಾಡುತ್ತಿದ್ದಾರೆ ಎಂಬ ವಿಚಾರ ಹಾಟ್ ಟಾಪಿಕ್ ಆಗಿದೆ.

ನಟಿ ಅಮಲಾ ಪಾಲ್ ರವರ ಆಮೆ ಎಂಬ ಸಿನೆಮಾ ಇಡೀ ಸಿನಿರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಈ ಸಿನೆಮಾದ ಬಳಿಕ ಹೆಚ್ಚಾಗಿ ಲೇಡಿ ಓರಿಯೆಂಟೆಂಡ್ ಸಿನೆಮಾಗಳಲ್ಲೇ ಕಾಣಿಸಿಕೋಳ್ಳುತ್ತಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಕಾಲಿವುಡ್ ನಿರ್ದೇಶಕ ಎ.ಎಲ್.ವಿಜಯ್ ಎಂಬುವವರೊಂದಿಗೆ ಪ್ರೇಮ ವಿವಾಹವಾದರು. ಆದರೆ ಮದುವೆಯಾದ ಎರಡೇ ವರ್ಷಗಳಲ್ಲಿ ಇವರಿಬ್ಬರೂ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನದ ಬಳಿಕ ಆಕೆ ಸಿಂಗಲ್ ಆಗಿದೆ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಆಕೆಗೆ ಮರುಮದುವೆಯ ಬಗ್ಗೆ ಪ್ರಶ್ನೆಗಳು ಎದುರಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ತಮ್ಮ ಅಭಿಮಾನಿಗಳ ಜೊತೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಆಕೆಯ ಅಭಿಮಾನಿಗಳು ಮದುವೆಯ ಬಗ್ಗೆ ಕೇಳಿದ್ದಾರೆ ಅದಕ್ಕೆ ಅಮಲಾ ಪಾಲ್ ಸಹ ಉತ್ತರ ನೀಡಿದ್ದಾರೆ.

ನಟಿ ಅಮಲಾ ಪಾಲ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಆಕೆ ತಮ್ಮ ಅಭಿಮಾನಿಗಳ ಜೊತೆ ಚಿಟ್ ಚಾಟ್ ಮಾಡುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಅಭಿಮಾನಿಯೊಬ್ಬ ನಿಮ್ಮನ್ನು ಮದುವೆಯಾಗುವ ಹುಡುಗನಿಗೆ ಎಂತಹ ಲಕ್ಷಣಗಳಿರಬೇಕು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಮಲಾ ಪಾಲ್ ನಾನು ಸದ್ಯ ಮದುವೆಯ ಬಗ್ಗೆ ಚಿಂತನೆ ಮಾಡುತ್ತಿಲ್ಲ. ನನ್ನನ್ನು ನಾನು ಆವಿಷ್ಕಾರ ಮಾಡಿಕೊಳ್ಳುವ ಕೆಲಸದಲ್ಲಿದ್ದೇನೆ. ಬಳಿಕ ಮದುವೆಯ ಬಗ್ಗೆ ಯೋಚನೆ ಮಾಡುತ್ತೇನೆ. ಅಂದೇ ನಿಮ್ಮ ಪ್ರಶ್ನೆಗೆ ಉತ್ತರ ದೊರಲಿದೆ ಎಂದಿದ್ದಾರೆ.

ಇನ್ನೂ ಅಮಲಾಪಾಲ್ ಮದುವೆಯ ಬಗ್ಗೆ ಶೀಘ್ರದಲ್ಲೇ ಕ್ಲಾರಿಟಿಗೆ ಬಂದು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಮದುವೆಯ ಬಗ್ಗೆ ಪಾಸಿಟೀವ್ ಆಗಿ ರೆಸ್ಪಾಂಡ್ ಆದ ಹಿನ್ನೆಲೆಯಲ್ಲಿ ಈಕೆ ಎರಡನೇ ಮದುವೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದಾರೆ. ಆದ್ದರಿಂದಲೇ ಈ ಉತ್ತರ ನೀಡಿದ್ದಾರೆ ಎಂದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಚರ್ಚೆಗಳನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ಈ ಕುರಿತು ಅಮಲಾ ಪಾಲ್ ರವರೇ ಶೀಘ್ರದಲ್ಲಿ ಸ್ಪಷ್ಟನೆ ನೀಡಬೇಕಿದೆ.

Previous articleಬಾಹುಬಲಿ ಪ್ರಭಾಸ್ ಅಭಿನಯಿಸಲಿರುವ ಸ್ಪಿರಿಟ್ ಸಿನೆಮಾದಲ್ಲಿ ಬಾಲಿವುಡ್ ಬ್ಯೂಟಿ ಕರಿನಾ…!
Next articleಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ನಟಿ ಶ್ರೇಯಾ, ಪಕ್ಕಾ ಹಳ್ಳಿ ಹುಡುಗಿಯಂತೆ ಪೋಸ್…!