Saturday, May 21, 2022
HomeFilm Newsಮೋಹಕ ತಾರೆ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಸಂಭ್ರಮ, 41ನೇ ವಸಂತಕ್ಕೆ ಕಾಲಿಟ್ಟ ನಟಿ……

ಮೋಹಕ ತಾರೆ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಸಂಭ್ರಮ, 41ನೇ ವಸಂತಕ್ಕೆ ಕಾಲಿಟ್ಟ ನಟಿ……

ಬಾಲಿವುಡ್ ನ ಖ್ಯಾತ ನಟಿ ಸನ್ನಿ ಲಿಯೋನ್ ಅನೇಕ ಹುಡುಗರ ಮನಗೆದ್ದ ಚೆಲುವೆ. ಮೋಹಕ ತಾರೆ ಎಂತಲೇ ಸನ್ನಿಯವರನನ್ನು ಕರೆಯಲಾಗುತ್ತದೆ. ಇಂದು ಅವರು 41ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೇರಿದಂತೆ ಅನೇಕ ಗಣ್ಯರಿಂದ ಹುಟ್ಟುಹಬ್ಬದ ಶುಭಾಷಯಗಳ ಸುರಿಮಳೆಯಾಗುತ್ತಿದೆ.

ಸಿನಿರಂಗದ ಜೊತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ನಟಿ ಸನ್ನಿ ಮಾಡುತ್ತಿರುವುದು ವಿಶೇಷವಾಗಿದೆ. ಬಾಲಿವುಡ್ ಬೇಬಿ ಡಾಲ್ ಎಂತಲೇ ಸನ್ನಿಯನ್ನು ಕರೆಯಲಾಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲೆ ಕೊಟ್ಯಂತರ ಅಭಿಮಾನಿಗಳ ಮನಗೆದ್ದ ನಟಿಯಾಗಿದ್ದಾರೆ. 1981 ಮೇ 13 ರಂದು ಸನ್ನಿ ಜನ್ಮತಾಳಿದ್ದಾರೆ. ಹಾಟ್ ಬ್ಯೂಟಿ ಸನ್ನಿ ಬೋಲ್ಡ್ ಹಾಗೂ ಹಾಟ್ ಅಭಿನಯಕ್ಕೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಂದು ನಟಿಯು ಹುಟ್ಟುಹಬ್ಬ ಸಂಭ್ರಮದಲ್ಲಿದ್ದು, ಸಿನಿ ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಸನ್ನಿ ಲಿಯೋನ್ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದು, ತಮ್ಮ ಪತಿ ಡೇನಿಯಲ್ ಜೊತೆ ಸುಖಕರವಾದ ಜೀವನ ಸಾಗಿಸುತ್ತಿದ್ದಾರೆ.

ಸನ್ನಿ ಲಿಯೋನ್ ಹಿಂದಿ ಭಾಷೆಯ ಬಿಗ್ ಬಾಸ್ 5ನೇ ಆವೃತಿಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡರು. ಬಳಿಕ ಅನೇಕ ಸಿನೆಮಾಗಳ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡರು.  ಸನ್ನಿ ಕೆನಡಾದ ಒಂಟಾರಿಯೊದಲ್ಲಿ ಸಿಖ್ ಕುಟುಂಬದಲ್ಲಿ ಜನಸಿದರು. ಮೊದಲಿಗೆ ಇವರ ಹೆಸರು ಕರಂಜಿತ್ ಕೌರ್‍. ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಓದಿನ ಜೊತೆಗೆ ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ನರ್ಸಿಗ್ ಓದುವಾಗ ಆಕೆ ತಮ್ಮ ಹೆಸರನ್ನು ಸನ್ನಿ ಎಂದು ಬದಲಾಯಿಸಿಕೊಂಡರು. ಕ್ರಮೇಣ ಸನ್ನಿ ಲಿಯೋನಿ ಎಂಬ ಹೆಸರನ್ನು ಇಟ್ಟುಕೊಂಡರು. ಬಳಿಕ ಮಾಡೆಲಿಂಗ್ ಮಾಡುತ್ತಾ ಸಿನಿರಂಗಕ್ಕೆ ಪ್ರವೇಶ ಮಾಡಿದರು.

ನಟಿ ಸನ್ನಿ ಜಿಸ್ಮ್ 2 ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಸಿನೆಮಾ ಮೂಲಕವೇ ದೊಡ್ಡ ಮಟ್ಟದ ಸಕ್ಸಸ್ ಕಂಡುಕೊಂಡರು. ಬಳಿಕ ಅನೇಕ ಬಾಲಿವುಡ್ ನ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಕನ್ನಡ ಸಿನಿರಂಗದಲ್ಲೂ ಸಹ ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಬಂದ ಡಿಕೆ ಸಿನೆಮಾದ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ತಮ್ಮ ಬೋಲ್ಡ್ ನಟನೆಯ ಮೂಲಕವೇ ಅನೇಕರ ಯುವಕರ ಮನಗೆದ್ದಿದ್ದಾರೆ. ಇನ್ನೂ ನಟಿ ಸನ್ನಿ ಲಿಯೋನ್ ಕಳೆದ 2016 ರಲ್ಲಿ ಬಿಬಿಸಿಯ 100 ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಅವರು ಸಹ ಸ್ಥಾನ ಪಡೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸರ್ಚ್ ಮಾಡಿದ ಸೆಲೆಬ್ರೆಟಿಗಳಲ್ಲಿ ಸನ್ನಿ ಲಿಯೋನ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

- Advertisement -

You May Like

More