ಕೆಜಿಎಫ್-2 ಸಿನೆಮಾವನ್ನು ಕಾಪಿ ಹೊಡೆಯುತ್ತಿದೆಯೇ ಪುಷ್ಪಾ-2? ಶ್ರೀವಲ್ಲಿ ಸಾವಿಗೆ ಕೆಜಿಎಫ್-2 ಕಾರಣವೇ?

ದೇಶದ ಸಿನಿರಂಗದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಎರಡು ಸಿನೆಮಾಗಳು ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ರಾಜಮೌಳಿ ನಿರ್ದೇಶನದ RRR ಸಿನೆಮಾ ದೊಡ್ಡ ದಾಖಲೆ ಬರೆಯಿತು. ಪ್ರಶಾಂತ್ ನೀಲ್ ನಿರ್ದೇಶನ KGF-2 ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಇದೀಗ ಕಮಲ್ ಹಾಸನ್ ಅಭಿನಯದ ವಿಕ್ರಂ ಜೋರಾಗಿಯೇ ಸದ್ದು ಮಾಡುತ್ತಿದೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ 777 ಚಾರ್ಲಿ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿದೆ. ಸದ್ಯ ಟಾಲಿವುಡ್ ನಲ್ಲಿ ಪುಷ್ಪಾ-2 ಸಿನೆಮಾ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದು. ಕೆಜಿಎಫ್-2 ಸಿನೆಮಾ ದಾಖಲೆಯನ್ನು ಮುರಿಯಬಹುದು ಎಂದು ಹೇಳಲಾಗುತ್ತಿದೆ. ಇದೀಗ ಈ ಪುಷ್ಪಾ-2 ಬಗ್ಗೆ ಕೆಲವೊಂದು ಗಾಸಿಫ್ ಗಳು ಶುರುವಾಗಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೆ ಬಿಡುಗಡೆಯಾದ ಸುಕುಮಾರ್‍ ನಿರ್ದೇಶನದ ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನೆಮಾ ಈಗಾಗಲೇ ದೊಡ್ಡ  ಕ್ರೇಜ್ ಸಂಪಾದಿಸಿಕೊಂಡಿದೆ. ಇನ್ನೂ ಈ ಸಿನೆಮಾದ ಹವಾ ಕಡಿಮೆಯಾಗಿಲ್ಲ. ಸದ್ಯ ಸುಕುಮಾರ್‍ ಪುಷ್ಪಾ-2 ಸಿನೆಮಾವನ್ನು ದಾಖಲೆ ಮಾಡಲು ಕಥೆಯನ್ನು ಸಿದ್ದ ಮಾಡಿದ್ದಾರೆ. ಕಥೆಯಲ್ಲಿ ಅನೇಕ ಬದಲಾವಣೆಗಳನ್ನು ಸಹ ಮಾಡಿದ್ದಾರಂತೆ. ಈ ಹಿಂದೆ ಸಹ ಕೆಜಿಎಫ್ ಹಾಗೂ ಪುಷ್ಪಾ ಸಿನೆಮಾದ ಬಗ್ಗೆ ಹೋಲಿಕೆಗಳನ್ನು ಮಾಡಲಾಗಿತ್ತು. ಆದ್ದರಿಂದ ಈ ಸಿನೆಮಾ ಕೆಜಿಎಫ್-2 ದಾಖಲೆಯನ್ನು ಮುರಿಯುವ ಕೆಲಸ ಮಾಡಬೇಕೆಂಬ ದೃಷ್ಟಿಯಿಂದ ಸುಕುಮಾರ್‍ ಕಥೆಗಾಗಿ ತುಂಬಾ ಶ್ರಮ ವಹಿಸಿದ್ದಾರಂತೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಪುಷ್ಪಾ-2 ಸಿನೆಮಾದಲ್ಲಿ ನಾಯಕಿಯ ಪಾತ್ರವಾಗಿದ್ದ ಶ್ರೀವಲ್ಲಿ ಕಥೆಯ ಮಧ್ಯೆ ಸಾಯುವ ಮೂಲಕ ಸಿನೆಮಾದಲ್ಲಿ ಆಕೆಯ ಪಾತ್ರಕ್ಕೆ ಕಡಿತ ಮಾಡಲಾಗಿದೆ ಎಂಬ ರೂಮರ್‍ ಹರಿದಾಡಿತ್ತು. ಇದೀಗ ಈ ವಿಚಾರಕ್ಕೆ ಮತ್ತೊಂದು ಗಾಸಿಫ್ ಸಹ ಶುರುವಾಗಿದೆ.

ಪುಷ್ಪಾ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಯಾಗಿ ಪ್ರಧಾನ ಪಾತ್ರವನ್ನು ಪೋಷಣೆ ಮಾಡಿದ್ದರು. ವಿಭಿನ್ನ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ತಮ್ಮ ಪಾತ್ರವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅದರಲ್ಲೂ ಸಿನೆಮಾದಲ್ಲಿನ ಆಕೆಯ ಗ್ಲಾಮರಸ್ ಲುಕ್ ಎಲ್ಲರನ್ನೂ ಆಕರ್ಷಣೆ ಮಾಡುವುದರ ಜೊತೆಗೆ ಸ್ವಾಮಿ ಸ್ವಾಮಿ ಸ್ಟೆಪ್ಸ್ ಎಲ್ಲೆಡೆ ವೈರಲ್ ಸಹ ಆಗಿ ಟ್ರೆಂಡ್ ಆಗಿತ್ತು. ಆದರೆ ಶ್ರೀವಲ್ಲಿ ಪಾತ್ರದ ಅಭಿಮಾನಿಗಳಿಗೆ ಪುಷ್ಪಾ-2 ಸಿನೆಮಾದಲ್ಲಿ ನಿರಾಸೆಯಾಗಲಿದೆಯಂತೆ. ಪುಷ್ಪಾ-2 ನಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಹಾಕಲಾಗುತ್ತಿದೆ ಎಂಬ ವಿಚಾರ ಹರಿದಾಡುತ್ತಿತ್ತು. ಇದೀಗ ಈ ಸುದ್ದಿಗೂ ಕೆಜೆಎಫ್-2 ಸಿನೆಮಾಗೂ ಲಿಂಕ್ ಮಾಡಿ ಪುಷ್ಪಾ-2 ಸಿನೆಮಾ ಕೆಜಿಎಫ್-2 ಸಿನೆಮಾವನ್ನು ಕಾಪಿ ಹೊಡೆದಿದೆ ಎಂಬ ಗಾಸಿಫ್ ಒಂದು ಜೊರಾಗಿಯೇ ಹರಿದಾಡುತ್ತಿದೆ.

ಇನ್ನೂ ಪುಷ್ಪಾ-2 ಸಿನೆಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ಸಾಯಿಸುತ್ತಾರೋ ಇಲ್ಲವೋ ಈ ಕುರಿತು ಅಧಿಕೃತವಾದ ಮಾಹಿತಿ ಮಾತ್ರ ಸಿಕ್ಕಿಲ್ಲ. ಆದರೆ ಸಿನೆಮಾದಲ್ಲಿ ಅಲ್ಲುಅರ್ಜುನ್ ಗೆ ಅನುಕಂಪ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಶ್ರೀವಲ್ಲಿ ಪಾತ್ರವನ್ನು ಮೊಟಕುಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಗಾಸಿಫ್ ಒಂದು ಸಹ ಹುಟ್ಟಿಕೊಂಡಿದೆ. ಕೆಜಿಎಫ್-2 ಸಿನೆಮಾದಲ್ಲಿ ಸಹ ನಾಯಕಿ ಸಾಯುತ್ತಾಳೆ. ಇದರಿಂದ ರಾಖಿ ಭಾಯ್ ಮೇಲೆ ಅನುಕಂಪ ಬರುತ್ತದೆ. ಇದೇ ಫಾರ್ಮುಲಾವನ್ನು ಸಹ ಪುಷ್ಪಾ-2 ಸಿನೆಮಾದಲ್ಲಿ ಅನುಸರಿಸಲಾಗುತ್ತಿದೆ ಎಂಬ ಮಾತುಗಳು ಸಹ ಬಲವಾಗಿಯೇ ಕೇಳಿಬರುತ್ತಿದ್ದು, ಈ ವಿಚಾರಕ್ಕೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆಗಳು ಸಹ ಇದೆ ಎಂದು ಹೇಳಲಾಗುತ್ತಿದೆ.

Previous articleಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಶಿವಣ್ಣ ಗಳ ಗಳನೇ ಅತ್ತಿದ್ದು ಯಾಕೆ?
Next articleಪ್ರಿನ್ಸ್ ಮಹೇಶ್ ಬಾಬು ಬಗ್ಗೆ ಎಮೋಷನಲ್ ಪೋಸ್ಟ್ ಬರೆದ ಪತ್ನಿ ನಮ್ರತಾ..!