News

(video)ಬಿಗ್ಗ್ ಬಾಸ್ ಸೀಸನ್ 6 ಬಗ್ಗೆ ಎಲ್ಲಾ ಮಾಹಿತಿಗಳನ್ನು ಕೊಟ್ಟ ಪರಮೇಶ್ವರ್ ಗುಂಡ್ಕಲ್!

parameshwaru-guntkal

(video)ಬಿಗ್ಗ್ ಬಾಸ್ ಸೀಸನ್ 6 ಬಗ್ಗೆ ಎಲ್ಲಾ ಮಾಹಿತಿಗಳನ್ನು ಕೊಟ್ಟ ಪರಮೇಶ್ವರ್ ಗುಂಡ್ಕಲ್!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ

ಕನ್ನಡ ದಲ್ಲಿ ಬಿಗ್ ಬಾಸ್ ಸೀಸನ್ ೬ ಇನ್ನೇನು ಶುರು ಆಗಲಿದೆ. ಎಂದಿನಂತೆ ಈಸಲ ಕೂಡ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಗ್ಗ್ ಬಾಸ್ ನಿರೂಪಣೆ ಮಾಡಲಿದ್ದಾರೆ. ಬಿಗ್ಗ್ ಬಾಸ್ ಸೀಸನ್ ೬ ಇದೆ ತಿಂಗಳು ಶುರು ಆಗಲಿದೆ. ಕಳೆದ ೫ ಸೀಸನ್ ನ ಕನ್ನಡದ ಬಿಗ್ಗ್ ಬಾಸ್ ಸೂಪರ್ ಹಿಟ್ ಆಗಿ ಕನ್ನಡ ಕಿರುತೆರೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಹಾಗಾದ್ರೆ ಬಿಗ್ಗ್ ಬಾಸ್ ಸೀಸನ್ ೬ ರ ಸ್ಪರ್ಧಿಗಳು ಯಾರು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಸ್ಪರ್ಧಿ 01 : ಭವನ
ಬಿಗ್ ಬಾಸ್ ಕನ್ನಡ ಸೀಸನ್ 06 ಮೊದಲ ಸ್ಪರ್ಧಿ ಕನ್ನಡದ ಖ್ಯಾತ ನಟಿ ಭಾವನಾ. ನಟಿ ಭಾವನಾ ಅವರು ನಿಮಗೆಲ್ಲ ಗೊತ್ತಿರೋ ಹಾಗೆ ರಮೇಶ್ ಅರವಿಂದ್ ಅವರ ಚಂದ್ರ ಮುಖಿ ಪ್ರಾಣ ಸಖಿ ಚಿತ್ರದಿಂದ ಬಹಳ ಮನೆ ಮಾತಾಗಿದ್ದರು. ಇತ್ತೀಚಿಗೆ ನಟಿ ಭಾವನಾ ಅವರು ಕ್ರೆಜಿ ಸ್ಟಾರ್, ನಿರುತ್ತರ, ಭಾಗೀರಥಿ, ಹಾಗು ಚಿಂಗಾರಿ ಅಂತಹ ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಸ್ಪರ್ಧಿ 02 : ಕುರಿ ಪ್ರತಾಪ್
ಬಿಗ್ ಬಾಸ್ ಸೀಸನ್ ೦೬ ರ ಎರಡನೇ ಸ್ಪರ್ಧಿ ನಮ್ಮ ನಿಮ್ಮೆಲ್ಲರ ಮೆಚ್ಚಿನ ಹಾಸ್ಯ ನಟ ಹಾಗು ಕಲಾವಿದ ಕುರಿ ಪ್ರತಾಪ್ ಅವರು. ತಮ್ಮ ಕುರಿ ಶೋಗಳಿಂದ ಬಹಳ ಫೇಮಸ್ ಆಗಿದ್ದ ಇವರು ಅದಾದಮೇಲೆ ಸುಮಾರು ೫೦ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಫೇಮಸ್ ಕಾಮೆಡಿ ರಿಯಾಲಿಟಿ ಶೋ ಮಜಾ ಟಾಕೀಸ್ ಅಲ್ಲಿ ಕೂಡ ಕುರಿ ಪ್ರತಾಪ್ ಅವರದ್ದೇ ಮೇಲುಗೈ.

ಸ್ಪರ್ಧಿ 03 : VJ ಹೇಮಲತಾ
ಬಿಗ್ಗ್ ಬಾಸ್ ಸೀಸನ್ ೦೬ ರ ಮತ್ತೊಂದು ಸ್ಪರ್ಧಿ ಯಾರು ಅಂದರೆ, ಅವರೇ ಉದಯ ಚಾನೆಲ್ ಅಲ್ಲಿ ಬರುವ ಫೇಮಸ್ ನಿರೂಪಕಿ ಹೇಮಲತಾ ಅವರು. ಇವರು ಸುಮಾರು ೧೨ ಕ್ಕೂ ಹೆಚ್ಚು ವರ್ಷಗಳಿಂದ ನಿರೂಪಣೆ ಕೆಲಸದಲ್ಲಿ ಇದ್ದಾರೆ.

ಸ್ಪರ್ಧಿ 04 : ಪ್ರೇಮ ಕುಮಾರಿ
ನಿಮಗೆಲ್ಲ ಗೊತ್ತಿರೋ ಹಾಗೆ ಶಾಸಕ ರಾಮ್ ದಾಸ್ ನನ್ನ ಗಂಡ ಎಂದು ಬಹಳ ದೊಡ್ಡ ಕಾಂಟ್ರೊವರ್ಸಿ ಹೇಳಿಕೆ ಕೊಟ್ಟಿದ ಮಹಿಳೆ ಇವರು. ಪ್ರೇಮ ಕುಮಾರಿ ಅವರು ಕೂಡ ಈ ಭಾರಿ ಬಿಗ್ಗ್ ಬಾಸ್ ನಲ್ಲಿ ಒಬ್ಬ ಸ್ಪರ್ಧಿ ಆಗಿ ಬರಲಿದ್ದಾರೆ.

ಸ್ಪರ್ಧಿ 05 : ಶಾಲಿನಿ ಗೌಡ
ಶಾಲಿನಿ ಗೌಡ ಅವರು ಸದ್ಯ ಮಾಡೆಲ್ಲಿಂಗ್ ಕ್ಷೇತ್ರ ದಲ್ಲಿ ಇದ್ದಾರೆ. ಇವರು ಕೂಡ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಇವರ ಬಗ್ಗೆ ನಮ್ಮ ಹತ್ತಿರ ಅಷ್ಟೊಂದು ಮಾಹಿತಿ ಇಲ್ಲ.

ಸ್ಪರ್ಧಿ 06 : ಮುರಳಿ
ನಿಮಗೆಲ್ಲ ಗೊತ್ತಿರೋ ಹಾಗೆ ತಮ್ಮ ಒಗ್ಗರಣೆ ಡಬ್ಬಿ ಕಾರ್ಯಕ್ರಮ ದಿಂದ ಬಹಳ ಮನೆ ಮಾತಾದ ಕನ್ನಡದ ಸೆಲೆಬ್ರೆಟಿ ಮುರಳಿ ಅವರನ್ನು ಕೂಡ ನೀವು ಈ ಭಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಬಹುದು.

ಸ್ಪರ್ಧಿ 07 : ವಿಜಯಲಕ್ಷ್ಮಿ (ನಟಿ)
ಕನ್ನಡದ ಖ್ಯಾತ ನಟಿ ವಿಜಯ್ಲಾಕ್ಷ್ಮಿ ಅವರು ಕೂಡ ಈ ಭಾರಿ ಬಿಗ್ಗ್ ಬಾಸ್ ನಲ್ಲಿ ಸ್ಪರ್ಧಿ ಆಗಲಿದ್ದಾರೆ. ವಿಜಯ್ಲಾಕ್ಷ್ಮಿ ಅವರು ಕನ್ನಡದ ಸೂಪರ್ ಸ್ಟಾರ್ಸ್ ಆದ ಸಾಹಸ ಸಿಂಹ ವಿಷ್ಣುವರ್ಧನ್, ಅಂಬರೀಷ್ ಜೊತೆ ನಟಿಸಿದ್ದಾರೆ.

ಸ್ಪರ್ಧಿ 08 : ಗಡ್ದಪ್ಪ
ಇವರ ಬಗ್ಗೆ ಜಾಸ್ತಿ ಹೇಳೋದೇ ಬೇಡ! ತಿಥಿ ಸಿನಿಮಾ ದಿಂದ ಬಹಳ ಫೇಮಸ್ ಆದ ನಟ ಗಡ್ದಪ್ಪ. ಇವರನ್ನು ಕೂಡ ಈ ಭಾರಿ ಬಿಗ್ ಬಾಸ್ ಮನೆಯಲ್ಲಿ ನೋಡಬಹುದು.

ಸ್ಪರ್ಧಿ 09 : ಸುಮನ್ ರಂಗನಾಥ್
ತಮ್ಮ ಮೋಹಕ ನಟನೆಯಿಂದ ಬಹಳ ಫೇಮಸ್ ಆದ ನಟಿ ಸುಮನ್ ರಂಗನಾಥ್. ಇತ್ತೀಚಿಗೆ ನಮ್ಮ ಕನ್ನಡದ ನಿರ್ದೇಶಕ ವಿಜಯ್ ಪ್ರಸಾದ ಅವರ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಕನ್ನಡದಲ್ಲಿ ಸಿದ್ಲಿಂಗು, ನೀರ್ ದೋಸೆ ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಸ್ಪರ್ಧಿ 10 : ಕಾವ್ಯ ಗೌಡ
ಕನ್ನಡ ನಟಿ ಕಾವ್ಯ ಗೌಡ ಅವರನ್ನು ಕೂಡ ಈ ಭಾರಿ ಬಿಗ್ಗ್ ಬಾಸ್ ನಲ್ಲಿ ನೀವು ನೋಡಬಹುದು.

ಸ್ಪರ್ಧಿ 11 : ನವೀನ ಸಜ್ಜು (ಹಾಡುಗಾರ)
ನವೀನ್ ಸಜ್ಜು ಅವರ್ರು ಕನ್ನಡದ ಹೆಮ್ಮೆಯ ಚಿತ್ರ ಲೂಸಿಯಾ ದಿಂದ ತಮ್ಮ ಕೆರಿಯರ್ ಅನ್ನು ಆರಂಭಿಸಿದರು. ಮೂಲತಃ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ನವೀನ್ ಅವರನ್ನು ಕನ್ನಡದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಲೂಸಿಯಾ ಚಿತ್ರದಲ್ಲಿ ಇವರಿಂದ ಹಾಡಿಸಿದರು. ಇತ್ತೀಚಿಗೆ ಬಂದ “ಎಣ್ಣೆ ನಮ್ದು.. ಊಟ ನಿಮ್ಮದು ” ಕೂಡ ಇವರದ್ದೇ ಹಾಡು.

ಸ್ಪರ್ಧಿ 12 : ರಂಜನಿ (ಪುಟ್ಟ ಗೌರಿ)
ಪುಟ್ಟ ಗೌರಿ ಮದುವೆ ಖ್ಯಾತಿಯ ಫೇಮಸ್ ನಟಿ ರಂಜಿನಿ ರಾಘವನ್ ಅವರು ಕೂಡ ಬಿಗ್ಗ್ ಬಾಸ್ ನಲ್ಲಿ ಇದ್ದಾರೆ.

ಇದು ಸಂಭಾವ್ಯರ ಪಟ್ಟಿ! ಈ ಪಟ್ಟಿಯಲ್ಲಿ ಹೊಸ ಸೇರ್ಪಡೆ ಆಗುವ ಸಧ್ಯ ಇದೆ!
ಸುದ್ದಿ ಕೃಪೆ : FIRST NEWS

Click to comment

You must be logged in to post a comment Login

Leave a Reply

Trending

To Top