News

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ನಾನು ಆಡಿದ ಆಟಗಳನ್ನು ನೋಡಿದ್ರೆ ನನ್ನ ಗಂಡನಿಗೆ ಪುಕ ಪುಕ ಅನ್ನುತ್ತೆ! ಎಂದು ಹೇಳಿದ ಅಕ್ಷತಾ

akshata1

ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 6 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರು ಬಹಳ ಆತ್ಮೀಯತೆ ಇಂದ ಇರುತ್ತಾರೆ. ಇಬ್ಬರು ಒಟ್ಟಿಗೆ ಇರುವುದು, ಕೈ ಕೈ ಹಿಡಿದುಕೊಂಡು ಓಡಾಡುವುದು, ತಬ್ಬಿ ಕೊಳ್ಳುವುದು ಇದನೆಲ್ಲ ಮಾಡುತ್ತಾರೆ. ಇದೆನ್ನೆಲ್ಲ ನೋಡಿ ನೋಡಿ ಬೇಸತ್ತ ಕಿಚ್ಚ ಸುದೀಪ್ ಅವರು ಒಂದು ವಾರದ ಹಿಂದೆ ಯಷ್ಟೇ ಇದನೆಲ್ಲ ಮಾಡ್ಬೇಡಿ ಎಂದು ಹೇಳಿದ್ದರು. ಅವರ ಮಾತನ್ನು ಕೇಳದೆ ಮತ್ತೆ ಇವರಿಬ್ಬರು ಅದೇ ಕೆಲಸ ಮಾಡುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಅಕ್ಷತಾ ಅವರು ಮದುವೆ ಆಗಿರುವ ಹುಡುಗಿ. ಅವರು ಕಿಚ್ಚ ಸುದೀಪ್ ಅವರಿಗೆ “ನನ್ನ ಗಂಡ ಇದನೆಲ್ಲ ನೋಡಿದ್ರೆ, ಅವರಿಗೆ ಪುಕ ಪುಕ ಅನ್ಸುತ್ತೆ” ಎಂದು ಖುಲ್ಲಂ ಕುಲ್ಲ ಆಗಿ ಹೇಳಿಕೆ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಾವು ಇತ್ತೀಚಿಗೆ ಕನ್ನಡದ ಬಿಗ್ ಬಾಸ್ ಸೀಸನ್ 06 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರ ನಡುವಳಿಕೆ ಬಗ್ಗೆ ಈಗ ಎಲ್ಲರಿಗೂ ಗೊತ್ತೇ ಇದೆ ಕಣ್ರೀ. ಸೋಶಿಯಲ್ ಮೀಡಿಯಾ ಗಳಲ್ಲಿ ಜನರು ಇದು ಫ್ಯಾಮಿಲಿ ಷೋ ದಯವಿಟ್ಟು ರಾಕೇಶ್ ಹಾಗು ಅಕ್ಷತಾ ಅವರನ್ನು ಬಿಗ್ ಬಾಸ್ ಇಂದ ತಗೆಯಿರಿ ಎಂದು ಟ್ರೊಲ್ ಮಾಡುತ್ತಾ ಇದ್ದಾರೆ ಹಾಗು ಕಾಮೆಂಟ್ ಮಾಡ್ತಾ ಇದ್ದಾರೆ. ಅವರಿಬ್ಬರ ಆತ್ಮೀಯತೆ ಯನ್ನು ನೋಡಿ ನೋಡಿ ಸಾಕಾಗಿ ಕಳೆದ ವಾರ ನಮ್ಮ ಕಿಚ್ಚ ಸುದೀಪ್ ಅವರು ಇವರಿಬ್ಬರಿಗೆ ಸೂಕ್ಷ್ಮ ವಾಗಿ ಎಚ್ಚರಿಕೆ ಕೊಟ್ಟಿದ್ದರು.
ಆದರೆ ಇದಕ್ಕೆಲ್ಲ ಕೇರ್ ಮಾಡದೆ ಬಿಗ್ ಬಾಸ್ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರು ಮತ್ತೆ ತಮ್ಮ ಆತ್ಮೀಯತೆಯನ್ನು ಮುಂದು ವರಿಸಿ, ಯಾರು ಇಲ್ಲದಿದ್ದಾಗ ತಬ್ಬಿ ಕೊಳ್ಳುವುದು, ಕೈ ಕೈ ಹಿಡಿದುಕೊಂಡು ಓಡಾಡುವುದು, ಇಬ್ಬರೇ ಇರುವುದು ಇದೆಲ್ಲ ಮತ್ತೆ ಮಾಡಲು ಶುರು ಮಾಡಿದ್ದಾರೆ. ಇದಲ್ಲದೆ ರಾತ್ರಿ ವೇಳೆ ಇವರಿಬ್ಬರು ಹಾಡು ಹಾಕಿ ಕೊಂಡು ಡಾನ್ಸ್ ಮಾಡುವುದು, ಯಾರು ಇಲ್ಲದ ಜಾಗಕ್ಕೆ ಹೋಗಿ ತಬ್ಬಿಕೊಳ್ಳುವುದನ್ನು ಮಾಡುತ್ತಿದ್ದಾರೆ.
ಇದನೆಲ್ಲ ನೋಡಿ ಬೇಸತ್ತ ಅಕ್ಷತಾ ಅವರ ತಾಯಿ ಈ ವಾರದ “ವಾರ ಕಥೆ ಕಿಚ್ಚನ ಜೊತೆ” ಸಮಯದಲ್ಲಿ ಬಿಗ್ ಬಾಸ್ ಮನೆಗೆ ಫೋನ್ ಕರೆ ಮಾಡಿ ಕಿಚ್ಚ ಸುದೀಪ್ ಜೊತೆ ಮಾತಾಡಿದರು. ನಿಮಗೆಲ್ಲ ಗೊತ್ತಿರೋ ಹಾಗೆ ಅಕ್ಷತಾ ಅವರ ಜೊತೆ ಮಾತಾಡಲು ಅವಕಾಶ ಇರುವುದಿಲ್ಲ. ಕಿಚ್ಚ ಸುದೀಪ್ ಜೊತೆ ಮಾತನಾಡುತ್ತ ಅಕ್ಷತಾ ಅವರ ತಾಯಿ “ನಿನ್ನ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿರುವರು, ಹೊರಗಡೆ ಇದ್ದಾರೆ, ಇಡೀ ಕರ್ನಾಟಕವೇ ನಿನ್ನ ಹಾಗು ರಾಕೇಶ್ ಅನ್ನು ನೋಡುತ್ತಿದೆ, ದಯವಿಟ್ಟು ರಾಕೇಶ್ ಇಂದ ದೂರ ಇರು, ಮತ್ತೆ ಮತ್ತೆ ಮಾಡಿದ್ದೆ ತಪ್ಪನ್ನು ಮಾಡಬೇಡ” ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಹಾಗು ರಾಕೇಶ್ ಹಾಗು ಅಕ್ಷತಾ ಅವರ ನಡುವಳಿಕೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Trending

To Top