Film News

ತಮಗಾದ ಅನುಭವ ಬಿಚ್ಚಿಟ್ಟು ಕಣ್ಣೀರಿಟ್ಟ ದಿವ್ಯ ಸುರೇಶ್

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿ ದಿವ್ಯಾ ಸುರೇಶ್ ಅವರಿಗಾದ ಅನುಭವದ ಬಗ್ಗೆ ಮಾತನಾಡಿ ಭಾವುಕರಾದ ಸನ್ನಿವೇಶ ನಡೆದಿದೆ. 2017 ರಲ್ಲಿ ನಡೆದ ಸೌತ್ ಇಂಡಿಯಾ ಮಿಸ್ ಸ್ಪರ್ಧೆಯಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ದಿವ್ಯಾ ಸುರೇಶ್ ತಮಗಾದ ಅನುಭವವೊಂದನ್ನು ಬಿಚ್ಚಿಟ್ಟದ್ದಾರೆ.

ನಟಿ ದಿವ್ಯಾ ಸುರೇಶ್ ಸೌತ್ ಇಂಡಿಯಾ ಮಿಸ್ ಸ್ಫರ್ಧೆಯಲ್ಲಿ ವಿನ್ನರ್ ಆದ ಬಳಿಕ ಅನೇಕ ಕನ್ನಡ ಹಾಗೂ ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕೆಲವೊಂದಯ ಧಾರವಾಹಿಗಳಲ್ಲೂ ಸಹ ಬಣ್ಣ ಹಚ್ಚಿದ್ದಾರೆ. ದಿವ್ಯಾ ಸುರೇಶ್ ಸ್ಟೈಲಿಶ್ ಹಾಗೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ತಾವು ಕಾಲೇಜಿನಲ್ಲಿ ಓದುತ್ತಿರಬೇಕಾದರೇ ಎಲ್ಲರೂ ರೇಗಿಸುತ್ತಿದ್ದರು ಎಂದು ಹೇಳಿ ಕಣ್ಣಿರು ಹಾಕಿದ್ದಾರೆ.

ನಾನು ಪಿಯುಸಿ ಮುಗಿಸಿ, ಡಿಗ್ರಿ ಓದುವ ವೇಳೆಯಲ್ಲಿ ತುಂಬಾ ಮುಗ್ದಳಾಗಿದ್ದೆ. ತಲೆಗೆ ಎಣ್ಣೆ ಹಚ್ಚಿಕೊಂಡು, ಚೂಡಿಧಾರ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದೆ. ಇದನ್ನು ಕಂಡ ಕೆಲವರು ನನ್ನನ್ನು ರೇಗಿಸುತ್ತಿದ್ದರು. ಬಾಡಿ ಶೇಮಿಂಗ್ ಮಾಡುತ್ತಿದ್ದರು. ನಂತರ ಮಾಡಲ್ ಆಗಿ ಹೆಸರು ಪಡೆದ ಬಳಿಕ, ನನ್ನ ರೇಗಿಸುತ್ತಿದ್ದವರೇ ಸೂಪರ್ ಮಾಡೆಲ್ ಎಂದು ಹೇಳಿದಾಗ ತುಂಬಾ ಖುಷಿ ಪಡುತ್ತಿದೆ. ಯಾರೂ ಕೂಡ ಬಾಡಿ ಶೇಮಿಂಗ್ ಮಾಡಬೇಡಿ ಎಂದು ಹೇಳುತ್ತಾ ಬಾವುಕರಾಗಿದ್ದಾರೆ.

ಮತ್ತೊಂದು ವಿಚಾರವೆಂದರೇ, ನನ್ನನ್ನು ರೇಗಿಸುತ್ತಿದ್ದವರಿಗೆ ಖಡಕ್ ಆಗಿ ವಾರ್ನಿಂಗ್ ಸಹ ಕೊಟ್ಟಿದೆ. ಚೂಡಿದಾರ್ ಹಾಕಿಕೊಂಡು ಅಡುಗೆನೂ ಮಾಡ್ತೀನಿ, ಚಡ್ಡಿ ಹಾಕಿಕೊಂಡು ನಿಮ್ಮಪ್ಪನ ಗಾಡಿನೂ ಓಡುಸ್ತೀನಿ ಎಂದು ಟಾಂಗ್ ನೀಡಿದ್ದರಂತೆ. ಇದನ್ನೂ ಸಹ ನೆನಪಿಸಿಕೊಂಡರು ದಿವ್ಯ ಸುರೇಶ್.

ಪೊಟೋ ಕೃಪೆ: ಕಲರ್‍ಸ್ ಕನ್ನಡ

Trending

To Top