ಹೈದರಾಬಾದ್: ಜನಪ್ರಿಯ ರಿಯಾಲಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಸೀಸನ್ 4 ಅದ್ದೂರಿಯಾಗಿ ಮುಕ್ತಾಯವಾಗಿದ್ದು, ಈ ಬಾರಿ ಟ್ರೋಫಿಯನ್ನು ನಟ ಅಭಿಜಿತ್ ವಶಪಡಿಸಿಕೊಂಡಿದ್ದಾರೆ.
ಕರೋನಾ ಬಳಿಕ ತೆಲುಗು ಭಾಷೆಯಲ್ಲಿ ಪ್ರಾರಂಭವಾದ ಜನಪ್ರಿಯ ರಿಯಾಲಿಟಿ ಶೋ ಮುಕ್ತಾಯವಾಗಿದ್ದು, ಮೆಗಾ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಿದ್ದರು. ಇನ್ನೂ ಪ್ರೇಕ್ಷಕರ ಮನಗೆದ್ದ ಅಭಿಜಿತ್ ಈ ಬಾರಿ ಬಿಗ್ ಬಾಸ್ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಇನ್ನೂ ಅಭಿಜಿತ್ ರವರಿಗೆ ಮೆಗಾಸ್ಟಾರ್ ಚಿರಂಜೀವಿ ಟ್ರೋಫಿ ನೀಡಿ, ನಗದು ಬಹುಮಾನವನ್ನು ವಿತರಿಸಿದರು. ನಟ ಅಭಿಜಿತ್ ಟ್ರೋಫಿಯೊಂದಿಗೆ 25 ಲಕ್ಷ ನಗದು ಹಾಗೂ ಬೈಕ್ ಒಂದನ್ನು ಗೆದ್ದಿದ್ದಾರೆ. ಎರಡನೇ ಸ್ಥಾನದಲ್ಲಿ ಅಖಿಲ್ ರನ್ನರ್ ಆಪ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್-4 ರಲ್ಲಿ ಸ್ಪರ್ಧಿಯಾಗಿದ್ದ ದಿವಿ ಚಿರಂಜೀವಿ ಜೊತೆಗೆ ನಟಿಸುವ ಅವಕಾಶ ನೀಡುವುದಾಗಿ, ತಮ್ಮು ಮುಂದಿನ ಸಿನೆಮಾದಲ್ಲಿ ಪೆÇಲೀಸ್ ಅಧಿಕಾರಿಯಾಗಿ ನಟಿಸುವ ಅವಕಾಶ ದಿವಿಗೆ ದೊರೆಕಿದ್ದು, ಈ ಮಾಹಿತಿಯನ್ನು ಚಿರಂಜೀವಿ ಯವರೇ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಇನ್ನೋಬ್ಬ ಸ್ಪರ್ಧಿ ಮೆಹಬೂಬ್ ರವರಿಗೆ ಮೆಗಾಸ್ಟಾರ್ 10 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
