News

ಫಿನಾಲೆಗೆ 2 ದಿನ ಇರುವಾಗಲೇ ತಿಳಿಯಿತು ಬಿಗ್ ಬಾಸ್ 6 winner ಯಾರು ಎಂದು! ಸ್ಪೋಟಕ ಸುದ್ದಿ

bigboss-winner6

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡದ ಬಿಗ್ ಬಾಸ್ ಸೀಸನ್ 6 ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೇನು 2 ದಿನಗಳಲ್ಲಿ ಬಿಗ್ ಬಾಸ್ ಸೀಸನ್ 6 ರ ಗ್ರಾಂಡ್ ಫೈನಲ್ ನಡೆಯಲಿದೆ. ಇತ್ತೀಚಿಗೆ ನಮ್ಮ ಬಿಗ್ ಬಾಸ್ ಮನೆಯಿಂದ RJ ರಾಕೇಶ್, ಅಕ್ಷತಾ, ಜಯಶ್ರೀ, ಜೀವಿತ ಗೌಡ, ಆಡಮ್ ಪಾಶ ಸೇರಿದಂತೆ ಹಲವಾರು ಸ್ಪರ್ದಿಗಳು ಹೊರ ಬಂದಿದ್ದಾರೆ. ಸದ್ಯ ನಮ್ಮ ಬಿಗ್ ಬಾಸ್ ಸೀಸನ್ 6 ಮನೆಯಲ್ಲಿ ನವೀನ್ ಸಜ್ಜು, ಚಿನ್ನು ಕವಿತಾ ಗೌಡ, ಶಶಿ, RJ ರಾಪಿಡ್ ರಶ್ಮಿ ಹಾಗು ಆಂಡಿ ಅವರು ಇದ್ದಾರೆ. ಇನ್ನೇನು 2 ದಿನಗಳಲ್ಲಿ ಕಿಚ್ಚ ಸುದೀಪ್ ಅವರು ಯಾರ ಕೈಯನ್ನು ಹಿಡಿದು ಇವರೇ ಬಿಗ್ ಬಸ್ ವಿನ್ನರ್ ಎಂದು ಹೇಳುತ್ತಾರೆ? ಈ ನಾಲ್ಕು ಜನರಲ್ಲಿ ಯಾರಾಗಬಹುದು ಈ ಭಾರಿಯ ಬಿಗ್ ಬಾಸ್ ವಿನ್ನರ್? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ನವೀನ್ ಸಜ್ಜು ಅವರ ಕನ್ನಡದ ಹೆಸರಾಂತ ಗಾಯಕ. ಲೂಸಿಯಾ ಎಂಬ ಚಿತ್ರದಿಂದ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದ್ದರು. ಈಗಾಗಲೇ ಬಿಗ್ ಬಾಸ್ ಸೀಸನ್ 6 ರ ಸ್ಪರ್ದಿ ಆದ ಗಾಯಕ ನವೀನ್ ಸಜ್ಜು ಅವರಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳಷ್ಟು ಅಭಿಮಾನಿಗಳು ಹುಟ್ಟಿದ್ದಾರೆ. ನವೀನ್ ಸಜ್ಜು ಅವರು ಬಿಗ್ ಬಾಸ್ ಸೀಸನ್ 6 ರಲ್ಲಿ ಗೆಲ್ಲಬೇಕು ಎಂದು ಅವರ ಬಹಳಷ್ಟು ಅಭಿಮಾನಿಗಳು ಫೇಸ್ಬುಕ್ ನಲ್ಲಿ, ಇನ್ಸ್ಟಾಗ್ರಾಮ್ ನಲ್ಲಿ, ಟ್ವಿಟ್ಟರ್ ನಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ನವೀನ್ ಸಜ್ಜು ಅಭಿಮಾನಿಗಳು ಕಳೆದ ಸುಮಾರು 2 ವಾರದಿಂದ ಬರೋಬ್ಬರಿ 2500 ಕ್ಕೂ ಹೆಚ್ಚು ಟ್ರೊಲ್ ಗಳು, 1000 ಕ್ಕೂ ಹೆಚ್ಚು ವಿಡಿಯೋಗಳು , ನವೀನ್ ಸಜ್ಜು ಹ್ಯಾಶ್ಟ್ಯಾಗ್ ಬಳಸಲಾಗುತ್ತಿದೆ. ಇದಲ್ಲದೆ ನವೀನ್ ಸಜ್ಜು ಅವರಿಗೆ ಕನ್ನಡ ನಟರಾದ ಸತೀಶ್ ನೀನಾಸಂ ಅವರು ಕೂಡ ಸಪೋರ್ಟ್ ಮಾಡಿದ್ದಾರೆ. ನವೀನ್ ಸಜ್ಜು ಅವರ ಅಭಿಮಾನಿಗಳು ಏನೆಲ್ಲಾ ಟ್ರೊಲ್ ಮಾಡುತ್ತಿದ್ದಾರೆ ಈ ಕೆಳಗಿನ ಫೋಟೋಗಳಲ್ಲಿ ನೋಡಿರಿ
ಇನ್ನೊಂದೆಡೆ ಕನ್ನಡ ಧಾರಾವಾಹಿಗಳ ಫೇಮಸ್ ನಟಿ ಚಿನ್ನು ಕವಿತಾ ಗೌಡ ಅವರು ಕೂಡ ಈ ಭಾರಿಯ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾರೆ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಕವಿತಾ ಗೌಡ ಅವರು ಶ್ರೀನಿವಾಸ ಕಲ್ಯಾಣ ಎಂಬ ಚಿತ್ರದಲ್ಲಿ ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿನ್ನು ಕವಿತಾ ಗೌಡ ಅವರು ಸುಮಾರು 95 ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಟಾಸ್ಕ್ ಗಳನ್ನೂ ಅಚ್ಚು ಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ. ಇವರ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಗಳಲ್ಲಿ ಕವಿತಾ ಗೌಡ ಅವರೇ ಗೆಲ್ಲುತ್ತಾರೆ ಎಂದು ಟ್ರೊಲ್ ಗಳನ್ನೂ, ವಿಡಿಯೋ ಗಳನ್ನೂ ಮಾಡುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 6 ಮತ್ತಿಬ್ಬರು ಫೇಮಸ್ ಸ್ಪರ್ದಿಗಳಾದ ಆಂಡಿ ಹಾಗು ರಾಪಿಡ್ ರಶ್ಮಿ ಅವರು ನವೀನ್ ಸಜ್ಜು ಹಾಗು ಕವಿತಾ ಗೌಡ ಅವರಷ್ಟು ಅಭಿಮಾನಿಗಳನ್ನು ಸಂಪಾದಿಸಿಲ್ಲವಾದರೂ, ಬಲ್ಲ ಮೂಲಗಳ ಪ್ರಕಾರ ಇವರಿಬ್ಬರಿಗೂ ಕೂಡ ಗೆಲ್ಲುವ ಚಾನ್ಸ್ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಹಿಂದೆ ಬಿಗ್ ಬಾಸ್ ಸೀಸನ್ 1 ರಲ್ಲಿ ವಿಜಯ್ ರಾಘವೇಂದ್ರ ಅವರು ಗೆದ್ದಿದ್ದರು. ಬಿಗ್ ಬಾಸ್ ಸೀಸನ್ 2 ರಲ್ಲಿ ನಿರೂಪಕರಾದ ಅಕುಲ್ ಬಾಲಾಜಿ ಅವರು ಗೆದಿದ್ದರು. ಬಿಗ್ ಬಾಸ್ ಸೀಸನ್ 3 ರಲ್ಲಿ ಕನ್ನಡ ನಟಿ ಶ್ರುತಿ ಅವರು ಗೆದ್ದಿದ್ದರು. ಬಿಗ್ ಬಾಸ್ ಸೀಸನ್ 4 ರಲ್ಲಿ ಒಳ್ಳೆ ಹುಡ್ಗ ಪ್ರಥಮ್ ಅವರು ಗೆದ್ದಿದ್ದರು. ಹಾಗು ಕಳೆದ ವರ್ಷ ಬಿಗ್ ಬಾಸ್ ಸೀಸನ್ 6 ರಲ್ಲಿ ಕನ್ನಡದ ರಾಪರ್ ಚಂದನ್ ಶೆಟ್ಟಿ ಅವರು ಗೆದ್ದಿದ್ದರು.
ಏನೇ ಆಗಲಿ ಬಿಗ್ ಬಾಸ್ ಸೀಸನ್ 6 ರ ಫೈನಲ್ ಗೆ ಇನ್ನೇನು 2 ದಿನಗಳು ಬಾಕಿ ಇದೆ. ನವೀನ್ ಸಜ್ಜು, ಆಂಡಿ, RJ ರಾಪಿಡ್ ರಶ್ಮಿ, ಶಶಿ, ಚಿನ್ನು ಕವಿತಾ ಗೌಡ ಅವರಲ್ಲಿ ಯಾರು ಗೆಲ್ಲ ಬಹುದು ಕಾದು ನೋಡೋಣ. ನಿಮ್ಮ ಪ್ರಕಾರ ಈ ಭಾರಿಯ ಬಿಗ್ ಬಾಸ್ ಸೀಸನ್ 6 ರಲ್ಲಿ ಯಾರು ಗೆಲ್ಲಬೇಕು! ಕಾಮೆಂಟ್ ಮಾಡಿ ಸ್ನೇಹಿತರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top