Uncategorized

ಬಿಗ್ ಬಾಸ್ ಸೀಸನ್ 6 ವಿನ್ನರ್ ನಮ್ಮ ನವೀನ್ ಸಜ್ಜು ಗುರು! ಶುಭಾಶಯಗಳು ಇದನ್ನು ನೋಡಿ ಶೇರ್ ಮಾಡಿ

naveen-sajju-winner

ಹೌದು! ಬಿಗ್ ಬಾಸ್ ಸೀಸನ್ 6 ವಿನ್ನರ್ ನಮ್ಮ ಕನ್ನಡದ ಗಾಯಕ ನವೀನ್ ಸಜ್ಜು! ನವೀನ್ ಸಜ್ಜು ಅವರು ಈ ಭಾರಿಯ ಬಿಗ್ ಬಾಸ್ ಸೀಸನ್ ವಿನ್ನರ್ ಎಂದು ಖಾತರಿ ಆಗಿದೆ. ಇನ್ನೊಂದೆಡೆ ಬಿಗ್ ಬಾಸ್ ಸೀಸನ್ 6 ರ ಮತ್ತೊಬ್ಬ ಸ್ಪರ್ದಿ ಆದ ಶಶಿ ಅವರು ಬಿಗ್ ಬಾಸ್ ರನ್ನರ್ ಆಗಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ವೈರಲ್ ಆಗಿದೆ. ನವೀನ್ ಸಜ್ಜು ಅವರು ಬಹಳ ಕಷ್ಟ ಪಟ್ಟು ಒಂದು ಆರ್ಕೆಸ್ಟ್ರ ದಲ್ಲಿ ಕೆಲಸ ಮಾಡುತ್ತಿದ್ದರು, ಇದಾದ ನಂತರ ಲೂಸಿಯಾ ಎಂಬ ಕನ್ನಡ ಚಿತ್ರ ರಂಗದಿಂದ ಇಡೀ ಕರ್ನಾಟಕದ ಮನೆ ಮಾತಾದರು. ಬಿಗ್ ಬಾಸ್ ಸೀಸನ್ 6 ಶುರುವಿನಿಂದ ನವೀನ್ ಸಜ್ಜು ಅವರು, ಒಂದು ಚೂರು ತಪ್ಪುಗಳನ್ನು ಮಾಡದೆ, ಯಾರಿಗೆ ನೋವು ಮಾಡದೆ, ಬಹಳ ಚನ್ನಾಗಿ ಆಡಿಕೊಂಡು ಬಂದಿದ್ದಾರೆ. ಕನ್ನಡದ ಹೆಮ್ಮೆಯ ಗಾಯಕ ನವೀನ್ ಸಜ್ಜು ಅವರಿಗೆ ನಮ್ಮ ಕಡೆ ಇಂದ ಶುಭಾಶಯಗಳು.
ಇನ್ನೊಂದೆಡೆ ಬಿಗ್ ಬಾಸ್ ನಲ್ಲಿ ಇದ್ದ RJ ರಾಪಿಡ್ ರಶ್ಮಿ ಹಾಗು ಆಂಡಿ ಅವರು ಎಲಿಮಿನೇಟ್ ಆಗಿದ್ದಾರೆ. ಅದು ಯಾಕೋ ಗೊತ್ತಿಲ್ಲ ಕಣ್ರೀ! ಸೋಶಿಯಲ್ ಮೀಡಿಯಾ ಗಳಲ್ಲಿ ಬಿಗ್ ಬಾಸ್ ಅಭಿಮಾನಿಗಳು, ಈ ಭಾರಿಯ ಬಿಗ್ ಬಾಸ್ ನಲ್ಲಿ ಯಾರಾದ್ರೂ ಗೆಲ್ಲಲಿ, ಆದ್ರೆ ಆಂಡಿ ಮಾತ್ರ ಗೆಲ್ಲಬಾರದು ಎಂದು ಟ್ರೊಲ್ ಗಳನ್ನೂ ಮಾಡುತ್ತಿದ್ದರು. ಮತ್ತೊಂದೆಡೆ ಪಟಾಕಿ ಯಂತೆ ಮಾತಾಡುವ RJ ರಾಪಿಡ್ ರಶ್ಮಿ ಅವರು ಕೂಡ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ನವೀನ್ ಸಜ್ಜು, ಶಶಿ ಹಾಗು ಚಿನ್ನು ಕವಿತಾ ಗೌಡ ಅವರು ಟಾಪ್ 3 ಯಲ್ಲಿದ್ದರು. ಬಹಳ ಜನರ ಪ್ರಕಾರ ಕವಿತಾ ಗೌಡ ಅವರು ಈ ಭಾರಿಯ ಬಿಗ್ ಬಾಸ್ ಗೆಲ್ಲ ಬೇಕಿತ್ತು ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ಭಾರಿಯ ಬಿಗ್ ಬಾಸ್ ನಲ್ಲಿ ಬಹಳಷ್ಟು ಕನ್ನಡದ ಕಲಾವಿದರು ಈ ಮಂಚಕ್ಕೆ ಬಂದು ತಮ್ಮ ಜೀವನವನ್ನು ಬದಲಾಯಿಸಿಕೊಂಡಿದ್ದಾರೆ. ಈ ಭಾರಿಯ ಬಿಗ್ ಬಾಸ್ ಮನೆಯಲ್ಲಿ RJ ರಾಕೇಶ್, ಅಕ್ಷತಾ, ಅಡುಗೆ ಕಾರ್ಯಕ್ರಮಗಳ ಸೆಲೆಬ್ರಿಟಿ ಮುರಳಿ, ಜಿಮ್ ರವಿ, ಸೋನು ಪಾಟೀಲ್ ಅವರು, ಜೀವಿತ ಗೌಡ ಅವರು ಕೂಡ ಬಂದಿದ್ದರು. ಇದಲ್ಲದೆ ಈ ಭಾರಿಯ ಬಿಗ್ ಬಾಸ್ ನಲ್ಲಿ ಒಬ್ಬ ಹಿಜಡಾ ಕೂಡ ಪಾಲ್ಗೊಂಡಿದ್ದರು. ಅವರ ಹೆಸರು ಆಡಮ್ ಪಾಶ ಅಂತ! ಆಡಮ್ ಪಾಶ ಅವರು ಕೂಡ, ಬಿಗ್ ಬಾಸ್ ಮನೆಗೆ ಬಂದು ಇಡೀ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿದ್ದರೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ RJ ರಾಕೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು.
ಏನೇ ಆಗಲಿ ನವೀನ್ ಸಜ್ಜು ಅವರಿಗೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಫ್ಯೂಚರ್ ಅಲ್ಲಿ ನವೀನ್ ಸಜ್ಜು ಅವರಿಗೆ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳು ಸಿಗಲು, ಇನ್ನೂ ಅದ್ಭುತವಾದ ಹಾಡುಗಳನ್ನು ಹಾಡಿ ನಮ್ಮ ಕನ್ನಡಿಗರನ್ನು ರಂಜಿಸಲಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ್ವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top