Film News

ಬಿಗ್ ಬಾಸ್ ಸ್ಪರ್ಧಿ ಜಯಶ್ರೀರಾಮಯ್ಯ ಆತ್ಮಹತ್ಯೆ!

ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟಿ ಹಾಗೂ ಬಿಗ್ ಬಾಸ್ ಸೀಸನ್-3 ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಗೊಲ್ಲರಹಟ್ಟಿ ಬಡಾವಣೆಯಲ್ಲಿರುವ ಸಂಧ್ಯಾಕಿರಣ ವೃದ್ದಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತ ಜಯಶ್ರೀ ರಾಮಯ್ಯ ಉಪ್ಪು ಹುಳಿ ಖಾರ, ಕನ್ನಡ್ ಗೊತ್ತಿಲ್ಲ ಮೊದಲಾದ ಸಿನೆಮಾಗಳಲ್ಲಿ ನಟಿಸಿದ್ದರೂ ಕೂಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾದ ಬಳಿಕ ಫೇಮಸ್ ಆಗಿದ್ದರು. ಈ ಹಿಂದೆ 2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಜಯಶ್ರೀ ಇದೀಗ ಮತ್ತೊಮ್ಮೆ ಆತ್ಮಹತ್ಯೆ ಮಾಡಿಕೊಂಡು ಮರಣಹೊಂದಿದ್ದಾರೆ. ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿಲ್ಲ. ಅನೇಕ ದಿನಗಳಿಂದ ಜಯಶ್ರಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಹಿಂದೆ ಫೇಸ್‌ಬುಕ್ ಲೈವ್ ನಲ್ಲಿ ಬಂದು ನನಗೆ ದಯಾಮರಣ ಪ್ರಾಪ್ತಿ ಮಾಡಿ, ನನಗೆ ಬದುಕಲು ಇಷ್ಟವಿಲ್ಲ. ನಾನು ಒಳ್ಳೆಯವಲ್ಲ ಎಂದೆಲ್ಲಾ ಮಾತನಾಡಿದ್ದರು. ಜೊತೆಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರ ನಡುವೆ ಜಗಳ ಸಹ ನಡೆದಿತ್ತು. ಈ ಸಂಬಂಧ ಜಯಶ್ರಿ ಅವರ ಮಾವನ ವಿರುದ್ದ ದೂರನ್ನು ಸಹ ದಾಖಲು ಮಾಡಿದ್ದರು.

ಇನ್ನೂ ಜಯಶ್ರೀ ರವರಿಗೆ ನಟ ಸುದೀಪ್ ಅವರು ಸಹಾಯ ಮಾಡಿದ್ದು, ಅದನ್ನು ಜಯಶ್ರೀ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ನಿಮ್ಮ ಕಾಳಜಿಯಿಂದ ನನ್ನನ್ನು ಬದುಕಿಸಿದ್ದೀರಿ, ಸುದೀಪ್ ಅವರ ತಂಡದ ಸದಸ್ಯರು, ನನ್ನ ಸ್ನೇಹಿತರು ಹಾಗು ಅಭಿಮಾನಿಗಳನ್ನು ನಾನು ಪ್ರೀತಿಸುತ್ತೇನೆ. ನನ್ನಿಂದ ನೀವೆಲ್ಲ ಆತಂಕ ಪಟ್ಟಿದ್ದೀರ, ನನ್ನನ್ನು ಕ್ಷಮಿಸಿಬಿಡಿ ಎಂಬೆಲ್ಲಾ ಮಾಹಿತಿ ಹಂಚಿಕೊಂಡಿದ್ದರು. ಆದರೆ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

Trending

To Top