ಬೆಂಗಳೂರು: ಸೂಪರ್ ರಿಯಾಲಿಟಿ ಶೋ ಎಂದೆ ಕರೆಯಲಾಗುವ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಿದ್ದು, ಪ್ರಾರಂಭವಾದ 2ನೇ ದಿನವೇ ನಾಮಿನೇಷನ್ ನಡೆದಿದ್ದು 4 ಮಂದಿ ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದ 17 ಜನರ ಪೈಕಿ 4 ಮಂದಿಯನ್ನು ನಾಮಿನೇಟ್ ಮಾಡಲಾಗಿದೆ. ನಿಧಿ ಸುಬ್ಬಯ್ಯ, ಪಾವಗಡ ಮಂಜು, ಪ್ರಶಾಂತ್ ಸಂಬರ್ಗಿ, ಧನುಶ್ರೀ ರವರುಗಳನ್ನು ಇತರೆ ಸದಸ್ಯರು ನಾಮಿನೇಟ್ ಮಾಡಿದರು. ಆದರೆ ನಾಯಕನಾಗಿರುವ ಬ್ರೋ ಗೌಡ ರವರಿಗೆ ವಿಶೇಷ ಅಧಿಕಾರ ಇರುವುದರಿಂದ ಸಂಜರ್ ಅಶ್ವತ್ ರವರನ್ನು ಉಳಿಸಿಕೊಂಡರು. ಮತ್ತೊರ್ವ ಸ್ಪರ್ಧಿ ನಿರ್ಮಾಲ ರವರು ಆಟದಲ್ಲಿ ಸೋತ ಕಾರಣ ಮನೆಯಿಂದ ಹೊರಗೆ ಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ. ಹೀಗೆ ಒಟ್ಟು ನಾಲ್ಕು ಮಂದಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಇನ್ನೂ ಬಿಗ್ ಬಾಸ್ ಎಲ್ಲರ ಎದುರೇ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಂತೆ ಹೇಳಿದ್ದು, ಪ್ರತಿಯೊಬ್ಬ ಸದಸ್ಯರು ಎಲ್ಲ ಸ್ಫರ್ಧಿಗಳ ಎದುರು ೨ ಹೆಸರನ್ನು ನಾಮಿನೇಟ್ ಮಾಡುವ ಜೊತೆಗೆ ಕಾರಣ ಹೇಳುವಂತೆ ಸೂಚನೆ ನೀಡಲಾಯಿತು. ಈ ನಾಮಿನೇಟ್ ಪ್ರಕ್ರಿಯೆಯಲ್ಲಿ ಅನೇಕರು ಶಂಕರ್ ಅಶ್ವತ್ಥ್ ಹೆಸರನ್ನು ಸೂಚಿಸಿದರು. ನಂತರ ನಿಧಿ ಸುಬ್ಬಯ್ಯ, ಪಾವಗಡ ಮಂಜು, ಪ್ರಶಾಂತ್ ಸಂಬರ್ಗಿ, ಧನುಶ್ರೀ ರವರುಗಳನ್ನು ನಾಮಿನೇಟ್ ಮಾಡಿದ್ದು, ಬ್ರೋ ಗೌಡ ರವರಿಗಿದ್ದ ವಿಶೇಷ ಅಧಿಕಾರದಿಂದ ಶಂಕರ್ ಅಶ್ವತ್ಥ್ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಿದ್ದಾರೆ.
ಪೊಟೊ ಕೃಪೆ: ಕಲರ್‍ಸ್ ಕನ್ನಡ
