ಪ್ರೇಮಿಗಳ ದಿನದಂದು ಪ್ರಭಾಸ್ ಚಿತ್ರದಿಂದ ಬಿಗ್ ಅಪ್ಡೇಟ್!

ಹೈದರಾಬಾದ್: ಟಾಲಿವುಡ್‌ನ ಬಹುಬೇಡಿಕೆ ನಟ ಪ್ರಭಾಸ್ ರವರು ಪ್ರೇಮಿಗಳ ದಿನದಂದು ಅಭಿಮಾನಿಗಳಿಗಾಗಿ ಬಿಗ್ ಅಪ್ಡೇಟ್ ನೀಡಲಿದ್ದಾರಂತೆ. ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಚಿತ್ರದ ಟೀಸರ್ ಮತ್ತು ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಟ ಪ್ರಭಾಸ್ ಈಗಾಗಲೇ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಇತ್ತಿಚಿಗಷ್ಟೆ ರಾಧೆ ಶ್ಯಾಮ್ ಚಿತ್ರ ಶೂಟಿಂಗ್ ಸಹ ಮುಕ್ತಾಯವಾಗಿದ್ದು. ರೊಮ್ಯಾಂಟಿಕ್ ಥ್ರಿಲ್ಲರ್ ಸಿನೆಮಾ ಆಗಿರುವ ರಾಧೆ ಶ್ಯಾಮ್ ಟೀಸರ್ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಬಹುದಾಗಿದ್ದು, ಅಂದೇ ಚಿತ್ರದ ಬಿಡುಗಡೆ ದಿನಾಂಕ ಸಹ ಬಹಿರಂಗವಾಗಬಹುದಾಗಿದೆ.

ತೆಲುಗು ಹಾಗೂ ಹಿಂದಿ ಎರಡು ಭಾಷೆಯಲ್ಲೂ ರಾಧೆ ಶ್ಯಾಮ್ ಚಿತ್ರ ಬಿಡುಗಡೆಯಾಗಲಿದ್ದು, ಇದೀಗ ಚಿತ್ರದ ಟೀಸರ್ ಕುರಿತಂತೆ ಚರ್ಚೆಗಳು ಪ್ರಾರಂಭವಾಗಿದೆ. ಇನ್ನೂ ಈ ಚಿತ್ರವನ್ನು ಈ ಹಿಂದೆ ಒಟಿಟಿಯಲ್ಲಿ ಬಿಡುಗಡೆಯಾಗಬಹುದು ಎಂಬ ಸುದ್ದಿ ಸಹ ವೈರಲ್ ಆಗಿತ್ತು. ಆದರೆ ಇದೊಂದು ಸುಳ್ಳು ಸುದ್ದಿ ಎನ್ನಲಾಗಿದೆ.

ಈ ಹಿಂದೆ ಪ್ರಭಾಸ್ ರವರ ಹುಟ್ಟುಹಬ್ಬದಂದು ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಅದು ಬಿಟ್ಟರೇ ಚಿತ್ರದ ಕುರಿತಂತೆ ಯಾವುದೇ ಅಪ್ಡೇಟ್ ದೊರೆತಿಲ್ಲ ಇದೀಗ ಚಿತ್ರದ ಟೀಸರ್ ಹಾಗು ಸಿನೆಮಾ ಬಿಡುಗಡೆ ದಿನಾಂಕದ ಕುರಿತು ಕುತೂಹಲ ಏರ್ಪಟಿದ್ದು, ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನೆಮಾ ಆಗಿರುವುದರಿಂದ ಫೆ.೧೪ ಪ್ರೇಮಿಗಳ ದಿನದಂದು ಟೀಸರ್ ಹಾಗೂ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

Previous articleಕೆಜಿಎಫ್ ಚಾಪ್ಟರ್-2: 4 ಭಾಷೆಯಲ್ಲಿ ಯಶ್ ಧ್ವನಿ ನೀಡಲಿದ್ದಾರಂತೆ!
Next articleಜಾಮೀನು ಮೇಲೆ ಬಂದ ನಟಿ ರಾಗಿಣಿ: ಭರವಸೆ ಮಾತುಗಳೊಂದಿಗೆ ಪೋಸ್ಟ್ ಮಾಡಿದ್ರು..