Film News

ಕಿಚ್ಚ ಅಭಿಮಾನಿಗಳಿಗೆ ಫ್ಯಾಂಟಮ್ ಚಿತ್ರತಂಡದಿಂದ ಭರ್ಜರಿ ಸುದ್ದಿ!

ಬೆಂಗಳೂರು: ಕನ್ನಡ ಸಿನಿರಂಗದ ಬಹುನಿರೀಕ್ಷಿತ ಫ್ಯಾಂಟಮ್ ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಚಿತ್ರದ ಟೀಸರ್ ಮತ್ತು ಫಸ್ಟ್ ಲುಕ್ ಬಿಟ್ಟರೇ ಇತರೇ ಯಾವುದೇ ಮಾಹಿತಿ ದೊರೆತಿರಲಿಲ್ಲ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಸುದೀಪ್ ಅಭಿಮಾನಿಗಳಿಗಾಗಿ ಭರ್ಜರಿ ಅಪ್ಡೇಟ್ ಒಂದನ್ನು ನೀಡಲಿದೆ.

ಫ್ಯಾಂಟಮ್ ಚಿತ್ರದ ಕುರಿತಂತೆ ಹೊಸ ಅಪ್ಡೇಟ್ ಇದೇ ಜನವರಿ ೨೧ ರಂದು ಸಂಜೆ ೪.೦೩ ಗಂಟೆಗೆ ಹೊಸ ಪ್ರಕಟಣೆ ಬಿಡುಗಡೆ ಮಾಡಲಿದೆ ಎಂಬ ವಿಚಾರ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಟ್ವಿಟರ್ ನಲ್ಲಿ ಮಾಹಿತಿ ತಿಳಿಸಿದ್ದಾರೆ. ಎಂಬ ಹ್ಯಾಷ್ ಟ್ಯಾಗ್ ಸಹ ಹಾಕಿ ಕಿಚ್ಚ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ಇನ್ನೂ ನಿರ್ದೇಶಕ ಅನೂಪ್ ಭಂಡಾರಿ ನೀಡಲು ಹೊರಟಿರುವ ಅಪ್ಡೇಟ್ ಆದರೂ ಏನು ಎಂಬುದರ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸಾಮಾನ್ಯವಾಗಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಬಹುದೆಂಬುದು ಒಂದೆಡೆಯಾದರೇ, ಮತ್ತೊಂದೆಡೆ ಈ ಚಿತ್ರವನ್ನು ಸಹ ಪ್ಯಾನ್ ಇಂಡಿಯಾದಡಿ ಬಿಡುಗಡೆ ಮಾಡಬಹುದಾ ಎಂಬ ಲೆಕ್ಕಾಚಾರ ಸಹ ಉದ್ಬವವಾಗಿದೆ. ಈಗಾಗಲೇ ಕೆಜಿಎಫ್, ರಾಬರ್ಟ್, ಪೊಗರು, ಯುವರತ್ನ ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾದಡಿ ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಸಹ ಬಿಡುಗಡೆಯಾಗುತ್ತಿದ್ದು, ಫ್ಯಾಂಟಮ್ ಸಹ ಇದೇ ರೀತಿ ಬಿಡುಗಡೆಯಾಗುವ ಮಾಹಿತಿ ನೀಡಬಹುದೇ ಎಂಬ ಅನುಮಾನಗಳು ಸಹ ಮೂಡಿದೆ.

ಜೊತೆಗೆ ಮತ್ತೊಂದು ಮುಖ್ಯವಾದ ವಿಚಾರವೆಂದರೇ ಫ್ಯಾಂಟಮ್ ಚಿತ್ರದ ಟೈಟಲ್ ಕುರಿತಂತೆ ವಿವಾದವೊಂದಿದ್ದು, ಚಿತ್ರದ ಟೈಟಲ್ ಬದಲಿಸುವ ಸುದ್ದಿ ಹೊರಬೀಳಬಹುದೆಂಬ ನಿರೀಕ್ಷೆ ಸಹ ಇದೆ. ಫ್ಯಾಂಟಮ್ ಟೈಟಲ್ ಹಕ್ಕು ಬೇರೆ ನಿರ್ಮಾಣ ಸಂಸ್ಥೆಯ ಬಳಿಯಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಜನವರಿ ೨೧ ಸಂಜೆ ವೇಳೆಗೆ ದೊರೆಯಲಿದೆ.

Trending

To Top